ಅಪಘಾತ

ಕಾವಳಕಟ್ಟೆಯಲ್ಲಿ ಕಾರು – ಸ್ಕೂಟರ್ ಢಿಕ್ಕಿ: ಕಡಬ ನಿವಾಸಿ, ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೃತ್ಯು!

ಈ ಸುದ್ದಿಯನ್ನು ಶೇರ್ ಮಾಡಿ

ಕಾರು ಹಾಗೂ ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರೆ ಓರ್ವರು ಸಾವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಕಾವಳಕಟ್ಟೆ ಎಂಬಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ.

Shani-pooja

ಸ್ಕೂಟರ್ ಸವಾರೆ, ಕಡಬ ನಿವಾಸಿ ಸುನಿಲ್ ಎಂಬವರ ಪುತ್ರಿ ಅನನ್ಯಾ (21) ಮೃತಪಟ್ಟವರು.

ಸ್ಕೂಟರ್ ನ ಇನ್ನೋರ್ವ ಸವಾರೆ, ಗುರುವಾಯನಕೆರೆ ನಿವಾಸಿ ಪೃಥ್ವಿ ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಇಬ್ಬರೂ ಮಂಗಳೂರು ಕಾಲೇಜಿನ ಇಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿನಿಯರೆಂದು ತಿಳಿದು ಬಂದಿದೆ.

ಬಂಟ್ವಾಳ- ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾವಳಕಟ್ಟೆಯಿಂದ ಎನ್.ಸಿ.ರೋಡ್ ಗೆ ಸಾಗುವ ದಾರಿಯಲ್ಲಿ ತಿರುವೊಂದಿದ್ದು, ತೀರಾ ಆಪಾಯಕಾರಿಯಾಗಿದ್ದು ಅನೇಕ ಅಪಘಾತಗಳು ಸಂಭವಿಸಿವೆ.

ಇಬ್ಬರೂ ಬೆಳ್ತಂಗಡಿಯಿಂದ ಕಾಲೇಜಿಗೆ ಹೋಗುವ ವೇಳೆ ಈ ತಿರುವಿನಲ್ಲಿ ವ್ಯಾಗನಾ‌ರ್ ಕಾರು ಮತ್ತು ಹೊಂಡಾ ಆಕ್ಟಿವ್ ಮಧ್ಯೆ ಅಪಘಾತ ಸಂಭವಿಸಿದೆ.

ಸ್ಥಳಕ್ಕೆ ಪುಂಜಾಲಕಟ್ಟೆ ಎಸ್.ಐ.ರಾಜೇಶ್ ಕೆ.ವಿ. ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts