ಪುತ್ತೂರು : ಕಾಣಿಯೂರು ಸುಬ್ರಹ್ಮಣ್ಯ ರಸ್ತೆಯ ನರಿಮೊಗರು ಸಮೀಪ ಶಾಲಾ ವಿದ್ಯಾರ್ಥಿನಿಗೆ ಓಮ್ಮಿ ಕಾರು ಡಿಕ್ಕಿಯಾಗಿದೆ.
ಪುತ್ತೂರು ಎಂಟಿ ರಸ್ತೆಯ ಚಪ್ಪಲ್ ಅಂಗಡಿಗೆ ಸೇರಿದ ಓಮ್ಮಿ ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದ ತಿರುವಿನಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪುತ್ತೂರು ಖಾಸಗಿ ಕಾಲೇಜಿನ ವಿದ್ಯಾರ್ಥಿನಿಗೆ ಡಿಕ್ಕಿಯಾಗಿದೆ.
ಡಿಕ್ಕಿಯ ರಭಸಕ್ಕೆ ವಿದ್ಯಾರ್ಥಿನಿಗೆ ಗಂಭೀರ ಗಾಯವಾಗಿದ್ದು, ಕಾರಿನ ಎದುರು ನುಜ್ಜುಗುಜ್ಜಾಗಿದೆ. ತಕ್ಷಣ ವಿದ್ಯಾರ್ಥಿನಿಯನ್ನು ಪುತ್ತೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.
ಕಾರು ಅತೀ ವೇಗವಾಗಿ ಸಂಚರಿಸುತ್ತಿದ್ದುದ್ದರಿಂದ ರಸ್ತೆ ಬಿಟ್ಟು ಸಂಚರಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.