ಪೋಷಕರ ಜೊತೆ ಅಜ್ಜಿ ಮನೆಗೆ ಬಂದಿದ್ದ ಸಹೋದರಿಯರು ಆಟವಾಡುತ್ತಾ ಪೋಷಕರ ಕಣ್ಣು ತಪ್ಪಿಸಿ ಕಾರಿನೊಳಗೆ ಕುಳಿತು ಉಸಿರುಗಟ್ಟಿ ಮೃತಪಟ್ಟಿರುವ ಆಘಾತಕಾರಿ ಘಟನೆಯೊಂದು ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯಲ್ಲಿ ಸೋಮವಾರ(ಏ.14) ನಡೆದಿದೆ.
ತನ್ಮಯಿಶ್ರೀ (5) ಮತ್ತು ಅಭಿನಯಶ್ರೀ (4) ಮೃತಪಟ್ಟ ಸಹೋದರಿಯರು.
ಸೋಮವಾರ ತನ್ಮಯಿಶ್ರೀ, ಅಭಿನಯಶ್ರೀ ಪೋಷಕರು ಮಕ್ಕಳನ್ನು ಕರೆದುಕೊಂಡು ದಾಮರಗಿಡ್ಡಾ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಕಾರಿನಲ್ಲಿ ಬಂದಿದ್ದಾರೆ ಈ ವೇಳೆ ಮನೆಯೊಳಗೆ ಆಟವಾಡುತ್ತಿದ್ದ ಸಹೋದರಿಯರು ಮಧ್ಯಾಹ್ನ ಸುಮಾರು ಹನ್ನೆರಡು ಗಂಟೆಯ ವೇಳೆಗೆ ಆಟವಾಡುತ್ತಾ ಮನೆಯ ಹೊರಗಿರುವ ಕಾರಿನೊಳಗೆ ಬಂದು ಕುಳಿತಿದ್ದಾರೆ. ಇದಾಗಿ ಸುಮಾರು ಎರಡು ಗಂಟೆಗಳು ಕಳೆಯುವ ವೇಳೆ ಮನೆ ಮಂದಿ ಮಕ್ಕಳಲ್ಲಿ ಮಕ್ಕಳೆಲ್ಲಿ ಎಂದು ಹುಡುಕಲು ಶುರುಮಾಡಿದ್ದಾರೆ ಆದರೆ ಆಟವಾಡುತ್ತಿದ್ದ ಮಕ್ಕಳು ಮಾತ್ರ ಎಲ್ಲೂ ಕಾಣಲಿಲ್ಲ ಬಳಿಕ ಗಾಬರಿಗೊಂಡು
ಮನೆಯ ಸುತ್ತ ಹುಡುಕಾಡಿದ್ದಾರೆ ಅಲ್ಲೂ ಕಾಣಲಿಲ್ಲ ಬಳಿಕ ಮನೆಯ ಎದುರು ನಿಲ್ಲಿಸಿದ್ದ ಕಾರನ್ನು ಪರಿಶೀಲಿಸಿದಾಗ ಇಬ್ಬರು ಸಹೋದರಿಯರು ಪ್ರಜ್ಞಾಹೀನರಾಗಿ ಕಾರಿನೊಳಗೆ ಬಿದ್ದಿರುವುದು ಕಂಡು ಬಂದಿದೆ ಕೂಡಲೇ ಮಕ್ಕಳನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಪರಿಶೀಲಿಸಿದಾಗ ವೈದ್ಯರು ಮಕ್ಕಳು ಉಸಿರುಗಟ್ಟಿ ಮೃತಪಟ್ಟಿರುವುದಾಗಿ ಹೇಳಿದ್ದಾರೆ.
ಇತ್ತ ಇಬ್ಬರು ಮಕ್ಕಳು ಇನ್ನು ಇಲ್ಲ ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.