ಬೆಳ್ತಂಗಡಿ: ಪದಂಗಡಿ ಗ್ರಾಮದ ಬದ್ಯಾರು ಬರಾಯ ಮನೆ ನಿವಾಸಿ ಪ್ರಕಾಶ್ ಅವರ ಪತ್ನಿ ಪೂಜಾಶ್ರೀ (23) ಬೆಂಗಳೂರಿನಲ್ಲಿ ಸಂಬಂಧಿಕರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮಾ.1 ರಂದು ಈ ಘಟನೆ ನಡೆದಿದೆ.
ಪೂಜಾ ಅವರು ಕೆಲಸ ಹುಡುಕುತ್ತಿದ್ದು, ಹಾಗಾಗಿ ಪತಿ ಪ್ರಕಾಶ್ ಅವರು ಬೆಂಗಳೂರಿನಲ್ಲಿರುವ ತನ್ನ ಸಂಬಂಧಿಕರ ಮನೆಗೆ ಕಳುಹಿಸಿದ್ದರು. ಪತಿ ಪ್ರಕಾಶ್ ಬದ್ಯಾರು ಗ್ರಾಮ ಬರಾಯದ ತಮ್ಮ ಮನೆಯಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದರು.
ಕಣಿಯೂರು ಗ್ರಾಮದ ನೆಲ್ಲಿ ಬಾಕಿಮಾರು ಮನೆಯ ವಾರಿಜ ಹಾಗೂ ಸೇಸಪ್ಪ ಪೂಜಾರಿ ದಂಪತಿಯ ಮಗಳಾದ ಪೂಜಾ ಅವರ ವಿವಾಹ 10 ತಿಂಗಳ ಹಿಂದೆ ಇವರ ವಿವಾಹವಾಗಿತ್ತು. ಪೂಜಾ ಸಾವಿನ ಕುರಿತು ಸಂಶಯವಿದೆ ಎಂದು ಪೋಷಕರು ಆರೋಪ ಮಾಡಿದ್ದಾರೆ.
ಬೆಂಗಳೂರು ಜಾಲಹಳ್ಳಿ ಬಾಗಲಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.