ಕಾರ್ಕಳ: ಕಳಸ ಜಾತ್ರೆ ಮುಗಿಸಿ ಮಂದಾರ್ತಿ ಜಾತ್ರೆಗೆ ಹೋಗುತ್ತಿದ್ದ ವ್ಯಾಪಾರಿಗಳು ಪ್ರಯಾಣಿಸುತ್ತಿದ್ದ ಗೂಡ್ಸ್ ವಾಹನವೊಂದು ಬ್ರೇಕ್ ವೈಫಲ್ಯಕ್ಕೊಳಗಾಗಿ ಪಲ್ಟಿ ಹೊಡೆದಿದ್ದು, ನಾಲ್ವರು ಗಂಭೀರಗೊಂಡಿದ್ದು, ಓರ್ವ ಸಾವನ್ನಪ್ಪಿದ ಘಟನೆ ಮಾಳ ಎಸ್ ಕೆ ಬಾರ್ಡರ್ ಕೆಳಗೆ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ಗಾಯಗೊಂಡವರನ್ನು ಜೆತೇಂದ್ರ(38) ಮಹಾರಾಷ್ಟ್ರದ ಹುಮಗ್ರ(ಮೃತ) ರಾಜ(37) ಹುಬ್ಬಳ್ಳಿ, ಆದಿತ್ಯ (16) ಹುಬ್ಬಳ್ಳಿ,ಶಾಬಾಸ್ (25) ಭದ್ರಾವತಿ,ಬಾಬು(55) ಭದ್ರಾವತಿ ಎಂದು ಗುರುತಿಸಲಾಗಿದೆ. ಗಾಯಾಳುಗಳು ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.