ಪುತ್ತೂರು: ಮೂಲತಃ ಕಾಣಿಯೂರಿನ, ಪುತ್ತೂರಿನ ಪರ್ಲಡ್ಕ ನಿವಾಸಿ ಭಾಸ್ಕರ ಆಚಾರ್ಯ (73 ವ.) ಇಂದು ಬೆಳಿಗ್ಗೆ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಲಕ್ಷ್ಮೀ ಜ್ಯುವೆಲ್ಸ್ ಮಾಲಕ. ಇದಕ್ಕೆ ಮೊದಲು ದರ್ಬೆಯಲ್ಲಿ ಲಕ್ಷ್ಕೀ ಜ್ಯುವೆಲ್ಸ್ ಕಾರ್ಯನಿರ್ವಹಿಸುತ್ತಿತ್ತು.
ಮೃತರು ಪತ್ನಿ ಸರೋಜಿನಿ, ಪುತ್ರ ಸಂತೋಷ್, ಇಬ್ಬರು ಹೆಣ್ಣು ಮಕ್ಕಳು ಹಾಗೂ ಸೊಸೆ, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.