ಅಪರಾಧ

ಅಕ್ರಮವಾಗಿ ಶೇಖರಿಸಿದ 4,175 ಲೀಟರ್ ಡೀಸೆಲ್ ಪತ್ತೆ!! ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು!

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕಣಿಯೂರು ಗ್ರಾಮದ ಮುದಲ್ತಿಯಾರ್ ಎಂಬಲ್ಲಿ ಬ್ಯಾರಲ್ ಮತ್ತು ಕ್ಯಾನ್ ಗಳಲ್ಲಿ ಅಕ್ರಮವಾಗಿ ಡೀಸಿಲ್ ಶೇಖರಿಸಿಟ್ಟಿರುವುದು ಪತ್ತೆಯಾಗಿದೆ.

Shani-pooja

ಮಾ. 09ರಂದು ರಾತ್ರಿ ಬೆಳ್ತಂಗಡಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕಿ ರೋಹಿಣಿ ಸಿ ಕೆ ಅವರಿಗೆ ದೊರೆತ ಮಾಹಿತಿಯ ಮೇರೆಗೆ, ಬೆಳ್ತಂಗಡಿ ಕಣಿಯೂರು ಗ್ರಾಮದ ಮುದಲ್ತಿಯಾರ್ ಎಂಬಲ್ಲಿ ಅಕ್ರಮವಾಗಿ ಡೀಸೆಲ್ ನ್ನು ಬ್ಯಾರಲ್ ಮತ್ತು ಕ್ಯಾನ್ ಗಳಲ್ಲಿ ಶೇಖರಿಸಿಟ್ಟುರುವುದಾಗಿ ಮಾಹಿತಿ ಬಂದ ಮೇರೆಗೆ, ಉಪ್ಪಿನಂಗಡಿ ವೃತ್ತ ನಿರೀಕ್ಷರು ಹಾಗೂ ಉಪ್ಪಿನಂಗಡಿ ಠಾಣಾಧಿಕಾರಿಗಳು ದಾಳಿ ನಡೆಸಿದ್ದಾರೆ. 

ಜಗದೀಶ್ (35) ಎಂಬಾತನ ಮನೆಯ ಸಮೀಪದ ಶೆಡ್ ತಪಾಸಣೆ ನಡೆಸಿದಾಗ, ಸುಮಾರು 200 ಲೀಟರ್ ಸಾಮರ್ಥ್ಯದ  20 ಬ್ಯಾರೆಲ್ ಗಳು ಹಾಗೂ ಸುಮಾರು 35 ಲೀಟರ್ ಸಾಮರ್ಥ್ಯದ 05 ಕ್ಯಾನ್ ಗಳಲ್ಲಿ ಒಟ್ಟು  ಸುಮಾರು 4,175 ಲೀಟರ್ ಡೀಸೆಲ್ ತುಂಬಿಸಿರುವುದು ಕಂಡುಬಂದಿರುತ್ತದೆ.‌ ಸ್ಥಳದಲ್ಲಿ ಇನ್ನಷ್ಟು ಖಾಲಿ ಬ್ಯಾರೆಲ್ ಗಳು ಹಾಗೂ ಖಾಲಿ ಕ್ಯಾನ್ ಮತ್ತು ಇತರೆ ಸೊತ್ತುಗಳು ಪತ್ತೆಯಾಗಿದೆ. 

ಈ ಎಲ್ಲಾ ಸೊತ್ತುಗಳ ಅಂದಾಜು ಮೌಲ್ಯ ರೂ 3,50,000 ಆಗಿದ್ದು, ಪ್ರಕರಣದ ಆರೋಪಿ ಜಗದೀಶ್ ಬಳಿ ಈ ಬಗ್ಗೆ ವಿಚಾರಿಸಿದಾಗ, ಇವುಗಳನ್ನು ಯಾವುದೇ ಪರವಾನಿಗೆ ಹೊಂದದೇ ಹಾಗೂ ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಅಕ್ರಮವಾಗಿ ಡೀಸೆಲ್ ಶೇಖರಿಸಿಟ್ಟಿರುವುದು ತಿಳಿದುಬಂದಿರುತ್ತದೆ. 

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 35/2026, ಕಲಂ:  THE BHARATIYA NYAYA SANHITA (BNS), 2023 (U/s-287); ESSENTIAL COMMODITIES ACT, 1955

(U/s-3,7); PETROLEUM ACT, 1934 (U/s-23); THE BHARATIYA NYAYA SANHITA (BNS), 2023 (U/s-3(5)) ನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 104