tamanvi
ಅಪರಾಧ

ಮಂಗಳೂರು ವಿಮಾನ ನಿಲ್ದಾಣದಲ್ಲಿ 80 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ವಶ: ಮೂವರು ಬಂಧನ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು:ಸುಮಾರು 80 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿಯನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಿದ ಪ್ರಕರಣವನ್ನು ಬಜಪೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆ ಹಚ್ಚಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಕೇರಳ ಮೂಲದ ಓರ್ವ ಪುರುಷ ಹಾಗೂ ಇಬ್ಬರು ಮಹಿಳೆಯರನ್ನು ಅಧಿಕಾರಿಗಳು ಬಂಧಿಸಿದ್ದಾರೆ.

maithri

ಡೆರೆಕ್ಟೋರೇಟ್ ಆಪ್ ರೆವೆನ್ಯೂ ಇಂಟೆಲಿಜೆನ್ಸಿ (ಡಿಆರ್‌ಐ) ಮಂಗಳೂರು ಘಟಕ ನೀಡಿದ ಮಾಹಿತಿಯಂತೆ, ಫೆಬ್ರವರಿ 27ರಂದು ನಿರ್ಗಮನ ಹಾಲ್‌ನಲ್ಲಿ ಅಬುಧಾಬಿಗೆ ಪ್ರಯಾಣಿಸಲು ಆಗಮಿಸಿದ್ದ ಮೂವರು ಪ್ರಯಾಣಿಕರನ್ನು ಖಚಿತ ಗುಪ್ತಚರ ಮಾಹಿತಿ ಆಧಾರದಲ್ಲಿ ತಡೆದು ತಪಾಸಣೆ ನಡೆಸಲಾಯಿತು.ತಪಾಸಣೆ ವೇಳೆ ಆರೋಪಿಗಳು ವಿದೇಶಿ ಕರೆನ್ಸಿಯನ್ನು ಕೈಚೀಲ ಮತ್ತು ಚೆಕ್-ಇನ್ ಬ್ಯಾಗ್‌ಗಳಲ್ಲಿ ಅತ್ಯಂತ ಚಾಣಾಕ್ಷತನದಿಂದ ಅಡಗಿಸಿ ಇಟ್ಟಿರುವುದು ಪತ್ತೆಯಾಯಿತು.

ವಶಪಡಿಸಿಕೊಳ್ಳಲಾದ ಕರೆನ್ಸಿಯಲ್ಲಿ ಅಮೆರಿಕನ್ ಡಾಲರ್‌ಗಳು, ಪೌಂಡ್ ಸ್ಟರ್ಲಿಂಗ್, ಸೌದಿ ರಿಯಾಲ್ ಹಾಗೂ ಯುಎಇ ದಿರಾಮ್ ಸೇರಿವೆ.ಕಸ್ಟಮ್ಸ್ ಕಾಯ್ದೆ, 1962ರಡಿ ಮೂವರನ್ನೂ ಬಂಧಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ ಸದಸ್ಯರು ಹಾಗೂ ಹೂಡಿಕೆದಾರರ ಪತ್ತೆಗೆ ತನಿಖೆ ಮುಂದುವರಿದಿದೆ ಎಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 117