ಅಪರಾಧ

ಸುಳ್ಯ: ಪೆಟ್ರೋಲ್ ಹಣ ನೀಡದೇ ಪರಾರಿಯಾದ ಕಾರು ಚಾಲಕ!

GL

ಈ ಸುದ್ದಿಯನ್ನು ಶೇರ್ ಮಾಡಿ

ಸುಳ್ಯ: ಪೆಟ್ರೋಲ್‌ ತುಂಬಿಸಿಕೊಂಡ ಬಳಿಕ ಹಣ ಪಾವತಿಸದೇ ಕಾರು ಚಾಲಕನೊಬ್ಬ ಪರಾರಿಯಾದ ಘಟನೆ ಸುಳ್ಯದ ಅರಂತೋಡು ಪ್ರದೇಶದ ನಯಾರ ಪೆಟ್ರೋಲ್‌ ಪಂಪ್‌ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

chennai-shopping
maithri

ಪ್ರತ್ಯಕ್ಷದರ್ಶಿಗಳ ಪ್ರಕಾರ, ಚಾಲಕ ತನ್ನ ಕಾರಿಗೆ ಸುಮಾರು ₹ 2,510 ಮೌಲ್ಯದ ಪೆಟ್ರೋಲ್‌ ತುಂಬಿಸಿಕೊಂಡಿದ್ದಾನೆ. ಹಣ ಪಾವತಿಸಲು ಕೇಳುತ್ತಿದ್ದಂತೆಯೇ ವಾಹನವನ್ನು ಸ್ಟಾರ್ಟ್‌ ಮಾಡಿ ಸ್ಥಳದಿಂದ ವೇಗವಾಗಿ ತಪ್ಪಿಸಿಕೊಂಡಿದ್ದಾನೆ. ತಕ್ಷಣ ಪಂಪ್‌ ಸಿಬ್ಬಂದಿ ಜಾಲ್ಸೂರು ಚೆಕ್ ಪೋಸ್ಟ್ ಹಾಗೂ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಡೆ ಯತ್ನ ವಿಫಲ

ಮಾಹಿತಿ ಪಡೆದ ಚೆಕ್‌ಪೋಸ್ಟ್‌ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ, ಸ್ಥಳೀಯ ಆಟೋ ಚಾಲಕರು ಹಾಗೂ ಪಂಪ್‌ ನೌಕರರು ರಸ್ತೆ ತಡೆದು ವಾಹನ ನಿಲ್ಲಿಸಲು ಪ್ರಯತ್ನಿಸಿದರು. ಆದರೂ ಚಾಲಕ ಸೂಚನೆಗಳನ್ನು ಲೆಕ್ಕಿಸದೇ ಪುತ್ತೂರು ದಿಕ್ಕಿನತ್ತ ಪರಾರಿಯಾದನು. ಈ ಪ್ರಕರಣ ಸಂಬಂಧ ಇನ್ನೂ ಬಂಧನವಾಗಿಲ್ಲ. ಆರೋಪಿಯನ್ನು ಪತ್ತೆಹಚ್ಚಲು ಸುತ್ತಮುತ್ತಲಿನ ಠಾಣೆಗಳಿಗೆ ಎಚ್ಚರಿಕೆ ನೀಡಲಾಗಿದ್ದು, ಪೊಲೀಸರು ಸಕ್ರಿಯವಾಗಿ ಹುಡುಕಾಟ ಮುಂದುವರೆಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 105