ಅಪರಾಧ

ಜಾಮೀನು ಬಳಿಕ ಮತ್ತೆ ಡ್ರಗ್ಸ್ ದಂಧೆ: ನೈಜೀರಿಯಾ ಮೂಲದ ವ್ಯಕ್ತಿ ಸಿಸಿಬಿ ಬಲೆಗೆ!

GL

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಜಾಮೀನಿನ ಮೇಲೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮತ್ತೆ ಮಾದಕವಸ್ತು ಮಾರಾಟ ಚಟುವಟಿಕೆಯಲ್ಲಿ ತೊಡಗಿದ್ದ ನೈಜೀರಿಯಾ ಮೂಲದ ವ್ಯಕ್ತಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.

chennai-shopping
maithri

ಬಂಧಿತನನ್ನು ಪೀಟರ್ ಐಕೆಡಿ ಬೆಲೋನ್ವು (36) ಎಂದು ಗುರುತಿಸಲಾಗಿದೆ. ಈತನನ್ನು ಈ ಹಿಂದೆಯೂ ಡ್ರಗ್ಸ್ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ನಂತರ ನ್ಯಾಯಾಲಯದಿಂದ ಜಾಮೀನು ಪಡೆದಿದ್ದ ಆತ, ಷರತ್ತುಗಳನ್ನು ಪಾಲಿಸುವ ಬದಲು ಮತ್ತೆ ತನ್ನ ಹಳೆಯ ಚಟುವಟಿಕೆಗಳನ್ನು ಮುಂದುವರಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಎಂಡಿಎಂಎ ವಿತರಣೆ ಜಾಲದ ಸುಳಿವು

ಪೊಲೀಸರ ಮಾಹಿತಿ ಪ್ರಕಾರ, ಆರೋಪಿಯು ಬೆಂಗಳೂರಿನಿಂದ ಎಂಡಿಎಂಎ (MDMA) ತರಿಸಿಕೊಂಡು ಮಂಗಳೂರು ಹಾಗೂ ಕಾಸರಗೋಡು ಭಾಗದ ಕೆಲ ವ್ಯಾಪಾರಿಗಳು ಮತ್ತು ವಿದ್ಯಾರ್ಥಿಗಳಿಗೆ ಪೂರೈಕೆ ಮಾಡುತ್ತಿದ್ದನೆಂಬ ಆರೋಪ ಕೇಳಿಬಂದಿದೆ. ಈ ಕುರಿತು ಲಭಿಸಿದ ಖಚಿತ ಗುಪ್ತಚರ ಮಾಹಿತಿಯ ಆಧಾರದಲ್ಲಿ ಸಿಸಿಬಿ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.ಬಂಧನದ ವೇಳೆ ಗಮನಾರ್ಹ ಪ್ರಮಾಣದ ಎಂಡಿಎಂಎ ಹಾಗೂ ಇತರ ಸಂಬಂಧಿತ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರ ಕಣ್ತಪಿಸಿ ಆರೋಪಿ ನಿರಂತರವಾಗಿ ತನ್ನ ವಾಸಸ್ಥಳ ಬದಲಾಯಿಸುತ್ತಿದ್ದ ಹಾಗೂ ವಿಭಿನ್ನ ಮೊಬೈಲ್ ಸಂಖ್ಯೆಗಳ ಬಳಕೆ ಮಾಡುತ್ತಿದ್ದನೆಂದು ತಿಳಿದುಬಂದಿದೆ.

ಹಿಂದಿನ ಪ್ರಕರಣಗಳ ಹಿನ್ನಲೆ

ಆರೋಪಿಯನ್ನು 2024ರ ಅಕ್ಟೋಬರ್‌ನಲ್ಲಿ ಬೆಂಗಳೂರಿನಲ್ಲಿ ಬಂಧಿಸಲಾಗಿದ್ದು, ಅಂದಿನ ಕಾರ್ಯಾಚರಣೆಯಲ್ಲಿ ಸುಮಾರು 6 ಕೆ.ಜಿ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು. ಇದಕ್ಕೂ ಮೊದಲು 2023ರಲ್ಲಿ ಕೂಡ ಡ್ರಗ್ಸ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಅವನನ್ನು ಬಂಧಿಸಿದ್ದರು.ಪ್ರಸ್ತುತ ಪ್ರಕರಣದ ಕುರಿತು ಮಂಗಳೂರು ನಗರ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 105