ಬೆಳ್ತಂಗಡಿ: ಸುಮಂತ್ ಮೃತದೇಹ ಪತ್ತೆಯಾದ ಕೆರೆಯ ನೀರನ್ನು ಖಾಲಿ ಮಾಡಿದಾಗ ಕತ್ತಿ ಹಾಗೂ ಟಾರ್ಚ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಓಡಿಲ್ನಾಳ ಗ್ರಾಮದ ಸಂಬೋಳ್ಯದ ಬಾಲಕ ಸುಮಂತ್ ಸಾವಿನ ಬಗ್ಗೆ ಪ್ರಾಥಮಿಕ ತನಿಖೆಯ ಬಳಿಕ ಪೊಲೀಸ್ ಇಲಾಖೆ ತನಿಖೆ ತೀವ್ರಗೊಳಿಸಿದೆ.
ಪ್ರಾಥಮಿಕ ವರದಿ ಪ್ರಕಾರ, ಹುಡುಗನು ಕೆರೆಯಲ್ಲಿ ಮುಳುಗುವ ಸಮಯದಲ್ಲಿ ಜೀವಂತನಾಗಿದ್ದ ಮತ್ತು ತಕ್ಷಣದ ಸಾವಿನ ಕಾರಣ ಮುಳುಗು ಸಾವಾಗಿರುತ್ತದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿತ್ತು.























