ಅಪರಾಧ

ಆಡಿಟರ್ ಜೊತೆ ಲಾಡ್ಜಲ್ಲಿ ಸಿಕ್ಕಿಬಿದ್ದ ಯುವತಿ: ಆಡಿಟರ್, ಯುವತಿಯ ಸ್ನೇಹಿತೆ ಆತ್ಮಹತ್ಯೆ!!

tv clinic

ಈ ಸುದ್ದಿಯನ್ನು ಶೇರ್ ಮಾಡಿ

ತಾನೇ ಪರಿಚಯಿಸಿದ ಸ್ನೇಹಿತೆ ತನ್ನ ಪ್ರಿಯಕರನ ಜೊತೆ ಪಲ್ಲಂಗದಲ್ಲಿರುವುದನ್ನು ಕಂಡು ವಿವಾಹಿತ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಬಸವೇಶ್ವರ ನಗರದ ಕೆ ಹೆಚ್ ಬಿ ಕಾಲೋನಿಯಲ್ಲಿ ನಡೆದಿದೆ.

core technologies

ಆತಹತ್ಯೆ ಮಾಡಿಕೊಂಡಿರುವ ಗೃಹಿಣಿಯನ್ನು ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದ ಯಶೋಧಾ (38) ಎಂದು ಗುರುತಿಸಲಾಗಿದೆ.

akshaya college

ಯಶೋಧಾ ಇಬ್ಬರು ಮಕ್ಕಳಿದ್ದರೂ ಆಡಿಟರ್‌ ವಿಶ್ವನಾಥ್‌ ಎಂಬುವವರ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳು, ಆಡಿಟರ್‌ ಜೊತೆಗೆ ಸ್ನೇಹ ಹೊಂದಿರುವ ಬಗ್ಗೆ ಯಶೋಧಾ ತನ್ನ ಜೀವದ ಗೆಳತಿಗೆ ತಿಳಿಸಿ ಆಕೆಯನ್ನು ಆಡಿಟರ್‌ಗೆ ಪರಿಚಯ ಮಾಡಿಸಿದ್ದಳು. ಇದೇ ನೋಡಿ ಕಂಟಕವಾಗಿದ್ದು, ಯಶೋಧಳ ಸ್ನೇಹಿತೆಯನ್ನ ಪರಿಚಯ ಮಾಡಿಕೊಂಡ ವಿಶ್ವನಾಥ, ಆಕೆಯ ಮೇಲೂ ಕಣ್ಣು ಹಾಕಿದ್ದ. ಮಾತಲ್ಲೇ ಮೋಡಿ ಮಾಡಿದ್ದವ ಆಕೆ ಜೊತೆಗೂ ಕಳ್ಳಾಟ ಶುರು ಮಾಡಿದ್ದ. ಇದನ್ನು ಕಣ್ಣಾರೆ ಕಂಡು ಯಶೋಧ ಪ್ರಾಣ ಕಳೆದುಕೊಂಡಿದ್ದಾಳೆ.

ಯೆಶೋಧಗೆ ಇಬ್ಬರು ಮಕ್ಕಳು, ನೆಮ್ಮದಿಯ ಸಂಸಾರವಿತ್ತು. ಆದರೆ, ಈ ಯಶೋಧಗೆ ಅಡಿಟರ್ ವಿಶ್ವನಾಥ್ ಎನ್ನುವಾತನ ಮೇಲೆ ಲವ್ ಆಗಿತ್ತು. ಇಬ್ಬರದ್ದೂ ಅಕ್ಕಪಕ್ಕದ ಮನೆ ಆಗಿದ್ರಿಂದ ಕಣ್ಣಲ್ಲೇ ಸಂಬಂಧ ಕುದುರಿಕೊಂಡಿತ್ತು. ಏಳು ವರ್ಷದಿಂದ ತುಂಬಾನೇ ಸಲುಗೆಯಿಂದ ಜೋಡಿಹಕ್ಕಿಗಳು ಪ್ರೀತಿ ಹೆಸರಲ್ಲಿ ಹಾರಾಡ್ಕೊಂಡಿದ್ದರು. ಆದರೆ, ಇತ್ತೀಚಿಗೆ ಯಶೋಧ, ತನ್ನೊಬ್ಬಳು ಸ್ನೇಹಿತೆಯನ್ನ ಈ ಪ್ರಿಯಕರ ವಿಶ್ವನಾಥನಿಗೆ ಪರಿಚಯ ಮಾಡಿಕೊಟ್ಟಿದ್ದಳು. 7 ವರ್ಷದಿಂದ ಯಶೋಧ ಜೊತೆಗೆ ಸಲುಗೆಯಿಂದ ಇದ್ದವ, ಇತ್ತೀಗೆ ಯಶೋಧ ಸ್ನೇಹಿತೆ ಜೊತೆ ಕದ್ದು ಮುಚ್ಚಿ ತಿರುಗಾಡ್ತಿದ್ದ.

ಇದರಿಂದ ಅನುಮಾನಗೊಂಡ ಯಶೋಧಾಳಿಗೆ ತಾನೇ ಪರಿಚಯ ಮಾಡಿಸಿದ ಸ್ನೇಹಿತೆಯೇ ಆಡಿಟರ್‌ ಜೊತೆಗೆ ಸಂಬಂಧವಿರಿಸಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಮೊನ್ನೆ ರಾತ್ರಿ ವಿಶ್ವನಾಥ್‌ ಹಾಗೂ ತನ್ನ ಸ್ನೇಹಿತೆ ಬಸವೇಶ್ವರ ನಗರದ ಕೆ ಹೆಚ್ ಬಿ ಕಾಲೋನಿಯಲ್ಲಿ ಓಯೋ ಚಾಂಪಿನಿಯನ್ ಕಂಫರ್ಟ್ ಲಾಡ್ಜ್ ನಲ್ಲಿರುವುದು ಗೊತ್ತಾಗಿದೆ. ತಕ್ಷಣ ಯಶೋಧಾ ಲಾಡ್ಜ್​ ಗೆ ತೆರಳಿ ನೋಡಿದಾಗ ಇಬ್ಬರು ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಬಳಿಕ ಗಲಾಟೆ ಮಾಡಿ ಆಡಿಟರ್‌ ಮತ್ತು ಸ್ನೇಹಿತೆ ತಂಗಿದ್ದ ರೂಮ್‌ ಪಕ್ಕದಲ್ಲೇ ಮತ್ತೊಂದು ರೂಮ್‌ ಬುಕ್‌ ಮಾಡಿ ಅಲ್ಲೇ ಫ್ಯಾನಿಗೆ ವೇಲ್‌ನಿಂದ ನೇಣು ಬಿಗಿದುಕೊಂಡು ಆತಹತ್ಯೆಗೆ ಶರಣಾಗಿದ್ದಾರೆ.

ಕೆಲ ಸಮಯದ ಬಳಿಕ ವಿಶ್ವನಾಥ್‌ಗೆ ಮೊಬೈಲ್‌ ಕರೆ ಬಂದಿದೆ. ಆತ ರೂಮ್‌ನಿಂದ ಹೊರಗೆ ಬಂದು ಮಾತನಾಡುತ್ತಾ, ಪಕ್ಕದ ರೂಮ್‌ನ ಬಾಗಿಲು ತಳ್ಳಿ ನೋಡಿದಾಗ ಯಶೋಧಾ ಆತಹತ್ಯೆ ಮಾಡಿಕೊಂಡಿರುವುದು ಗಮನಿಸಿ ನೇಣಿನಿಂದ ಆಕೆಯನ್ನು ಕೆಳಗೆ ಇಳಿಸಿ ಲಾಡ್ಜ್​​ ನವರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಮಾಗಡಿ ರಸ್ತೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಯಶೋಧಾ ಅವರ ಪತಿ ವಿಷಯ ತಿಳಿದು ಪತ್ನಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts