ಪುತ್ತೂರು: ವಾಟ್ಸಾಪ್ ಖಾತೆ ಹ್ಯಾಕ್ ಮಾಡಿರುವ ಸೈಬರ್ ಕ್ರಿಮಿನಲ್, ಪತ್ರಿಕಾ ಉದ್ಯೋಗಿಯ ನಂಬರ್ ಬಳಸಿ ಅವರ ಸ್ನೇಹಿತರಿಗೆ ತುರ್ತು ಹಣದ ಬೇಡಿಕೆಯ ಸಂದೇಶ ಕಳುಹಿಸಿರುವ ಘಟನೆ ಪುತ್ತೂರಿನಲ್ಲಿ ಬೆಳಕಿಗೆ ಬಂದಿದೆ.
ಅಪರಿಚಿತ ವ್ಯಕ್ತಿಯ ಖಾತೆಗೆ ₹60,000 ಕಳುಹಿಸುವಂತೆ ಹೇಳಿದ್ದ ಸಂದೇಶದಲ್ಲಿ, “UPI ಕೆಲಸ ಮಾಡುತ್ತಿಲ್ಲ, ತುರ್ತಾಗಿ ಬೇಕಾಗಿದೆ” ಎಂದು ಉಲ್ಲೇಖಿಸಲಾಗಿದೆ. ಸಂದೇಶದ ಭಾಷೆ ಅನುಮಾನ ಸೃಷ್ಟಿಸಿದ ಕಾರಣ ಸ್ನೇಹಿತರು ಹಣ ಕಳಿಸದೆ ಎಚ್ಚರಿಕೆಯಿಂದ ವರ್ತಿಸಿದ್ದಾರೆ.
ವಂಚಕರ ತಂತ್ರವಿದ್ದು, ಮೊದಲು ಪಾರ್ಸೆಲ್ ವಿಚಾರದ ಕರೆ ನೀಡಿ *# ಒತ್ತಿಸುವಂತೆ ಹೇಳಿ, ನಂತರ ಫೋನ್ ನಿಯಂತ್ರಣ ಪಡೆದು ವಾಟ್ಸಾಪ್ ಹ್ಯಾಕ್ ಮಾಡಲಾಗುತ್ತಿದೆ. ಘಟನೆ ಸಂಬಂಧ ಪುತ್ತೂರು ನಗರ ಠಾಣೆಗೆ ದೂರು ನೀಡಲಾಗಿದೆ.
ಪ್ರಜೆಗಳು ಎಚ್ಚರಿಕೆಯಿಂದ ಇರಬೇಕೆಂಬ ಅಗತ್ಯ ಮತ್ತೊಮ್ಮೆ ಬೆಳಕಿಗೆ ಬಂದಿದೆ.