tamanvi
ಅಪರಾಧ

ತನ್ನ 6 ವರ್ಷದ ಕಂದನ ನೀರಲ್ಲಿ ಮುಳುಗಿಸಿ ಕೊಂದ ಹೆತ್ತತಾಯಿ!!

ತನ್ನ ಕರುಳ ಕುಡಿಯನ್ನು ತಾಯಿಯೇ ನೀರಲ್ಲಿ ಮುಳುಗಿಸಿ ಕೊಂದ ದಾರುಣ ಘಟನೆ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ತನ್ನ ಕರುಳ ಕುಡಿಯನ್ನು ತಾಯಿಯೇ ನೀರಲ್ಲಿ ಮುಳುಗಿಸಿ ಕೊಂದ ದಾರುಣ ಘಟನೆ ನಡೆದಿದೆ.

ವೈವಾಹಿಕ ಜೀವನದ ವೈಫಲ್ಯದಿಂದ ತಾಯಿಯೋರ್ವಳು ತನ್ನ ಆರು ವರ್ಷದ ಮಗಳನ್ನು ತೊರೆ ನೀರಿನಲ್ಲಿ ಮುಳುಗಿಸಿ ಕೊಂದಿರುವ ಘಟನೆ ತಾಲೂಕಿನ ಹಿರೀಸಾವೆ ಜಿನ್ನೇನಹಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಶಿವಮೊಗ್ಗದ ರಘು-ಶ್ವೇತಾ ದಂಪತಿ ಪುತ್ರಿ ಸಾನ್ವಿ (6) ಮೃತ ಮಗು.

ಮಗುವನ್ನು ಕೊಂದ ನಂತರ ತಾನೂ ಸಾಯುವುದಾಗಿ ಕಿರುಚಾಡುತ್ತಿದ್ದ ಈಕೆಯನ್ನು ರಕ್ಷಣೆ ಮಾಡಿ ಪೊಲೀಸರ ವಶಕ್ಕೆ ನೀಡಲಾಗಿದೆ. ಮಗು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಸ್ಥಳೀಯರು ಮಗುವನ್ನು ಕೂಡಲೇ ಹೊರಗೆ ತೆಗೆದು ಪ್ರಥಮ ಚಿಕಿತ್ಸೆ ನೀಡಿ ಬದುಕಿಸಲು ಯತ್ನ ಮಾಡಿದರೂ ಮಗು ಬದುಕಲಿಲ್ಲ.

2018 ರಲ್ಲಿ ಶಿವಮೊಗ್ಗದ ಮೂಲದ ರಘು ಜೊತೆ ಶ್ವೇತಾ ಮದುವೆಯಾಗಿತ್ತು. ಆದರೆ ಎರಡು ವರ್ಷದಲ್ಲೇ ದಂಪತಿಗಳ ನಡುವೆ ಕಲಹ ಏರ್ಪಟ್ಟಿತ್ತು. ಕಳೆದ ನಾಲ್ಕು ವರ್ಷಗಳಿಂದ ಶ್ವೇತಾ ತನ್ನ ಪತಿಯಿಂದ ದೂರವಾಗಿದ್ದಳು ಎಂದು ಪೊಲೀಸರು ಮಾಹಿತಿ ನೀಡಿರುವ ಕುರಿತು ವರದಿಯಾಗಿದೆ.

ಶ್ವೇತಾಳನ್ನು ವಶಕ್ಕೆ ಪಡೆದ ಪೊಲೀಸರು ಹೆಚ್ಚಿನ ತನಿಖೆ ಮಾಡುತ್ತಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 119