Gl
ಅಪರಾಧ

ತಂದೆಯ ಕೊಲೆಗೈದ ಪುತ್ರ: ಮಹತ್ವದ ಸಾಕ್ಷ್ಯಾಧಾರದ ಸುಳಿವಲ್ಲಿ ಅರೆಸ್ಟ್!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು ಜಿಲ್ಲೆಯಲ್ಲಿ ನಡೆದ ಭೀಕರ ಘಟನೆಯೊಂದು ಬೆಳಕಿಗೆ ಬಂದಿದ್ದು, ಮಗನೊಬ್ಬ ತನ್ನ ತಂದೆಯನ್ನು ಕೊಂದು ಅದನ್ನು ವಿದ್ಯುತ್ ಅವಘಡದಿಂದ ಸಂಭವಿಸಿದ ಸಾವು ಎಂದು ಬಿಂಬಿಸಲು ಯತ್ನಿಸಿದ್ದಾನೆ. ಮೇ 11 ರಂದು ನಡೆದ ಕೊಲೆ ಪ್ರಕರಣ, ಪೊಲೀಸರು ತನಿಖೆ ನಡೆಸಲು ಮುಂದಾದಾಗ ಮತ್ತು ಅಪರಾಧ ನಡೆದ ಸ್ಥಳದ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಬಯಲಾಗಿದೆ.

ನಾಗೇಶ್ ಮತ್ತು ಅವರ ಮಗ ಸೂರ್ಯ ಮೇ 11 ರಾತ್ರಿ ಅಪೋಲೋ ಐಸ್ ಕ್ರೀಮ್ ಕಾರ್ಖಾನೆಯಲ್ಲಿದ್ದರು. ಸಿಸಿ ಟಿವಿ ದೃಶ್ಯಾವಳಿಗಳ ಪ್ರಕಾರ, ಸುಮಾರು 1:45 ಸುಮಾರಿಗೆ ತಂದೆ ಮತ್ತು ಮಗನ ನಡುವೆ ಮಾತಿನ ಚಕಮಕಿ ನಡೆಯಿತು, ಅದು ಶೀಘ್ರದಲ್ಲೇ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.

 

ವಿಡಿಯೋ ಸಾಕ್ಷ್ಯದಲ್ಲಿ, 55 ವರ್ಷದ ನಾಗೇಶ್ ತನ್ನ ಮಗನಿಗೆ ಕಪಾಳಮೋಕ್ಷ ಮಾಡುವುದು ಸ್ಪಷ್ಟವಾಗಿ ಕಾಣಿಸುತ್ತದೆ. ನಂತರ ಅವರು ತಮ್ಮ ಕಾಲಿನ ಚಪ್ಪಲಿಯನ್ನು ತೆಗೆದುಕೊಂಡು ಸೂರ್ಯನಿಗೆ ಹೊಡೆಯುತ್ತಾರೆ. ನಾಗೇಶ್ ಕೋಲೊಂದನ್ನು ತೆಗೆದುಕೊಂಡು ಸೂರ್ಯನನ್ನು ಹೊಡೆಯಲು ಮುಂದಾದಾಗ, ಸೂರ್ಯ ತನ. ತಂದೆಯನು, ತಡೆಯಲು ಪ್ರಯತ್ನಿಸುತ್ತಾನೆ.

ಸೂರ್ಯನು ಘಟನೆಯುದ್ದಕ್ಕೂ ಬಿಳಿ ಬಟ್ಟೆಯೊಂದನ್ನು ಹಿಡಿದಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ. ನಾಗೇಶ್ ತನ್ನ ಮಗನಿಗೆ ಬೆನ್ನು ತಿರುಗಿಸುತ್ತಿದ್ದಂತೆ, ಸೂರ್ಯ ಬಿಳಿ ಬಟ್ಟೆಯನ್ನು ತನ್ನ ತಂದೆಯ ಕುತ್ತಿಗೆಗೆ ಸುತ್ತಿ, ಅವರನ್ನು ಕೆಡವಿ ಕತ್ತು ಹಿಸುಕುತ್ತಾನೆ. ಸೂರ್ಯನ ಸ್ನೇಹಿತ ಎಂದು ನಂಬಲಾದ ಮತ್ತೊಬ್ಬ ವ್ಯಕ್ತಿ ಅವನಿಗೆ ಸಹಾಯ ಮಾಡುತ್ತಾನೆ ಮತ್ತು ನಾಗೇಶ್ ಸತ್ತಿರುವುದನ್ನು ಖಚಿತಪಡಿಸಿಕೊಳ್ಳುತ್ತಾನೆ.

ಕೃತ್ಯವನ್ನು ಮುಚ್ಚಿಹಾಕಲು, ಇಬ್ಬರು ಸ್ನೇಹಿತರು ನಂತರ ಮೃತದೇಹವನ್ನು ಹಾಸಿಗೆಯ ಮೇಲೆ ಮಲಗಿಸಿ, ಬೆರಳುಗಳಿಗೆ ವಿದ್ಯುತ್ ಶಾಕ್ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಇದು ವಿದ್ಯುತ್ ಸ್ಪರ್ಶದಿಂದ ಆದ ಸಾವು ಎಂದು ನಂಬಿಸಲು ಅವರು ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನಾಗೇಶ್ ಅವರ ಸಹೋದರಿ ಸವಿತಾ ಅವರಿಗೆ ಏನೋ ಸಂಶಯ ಬಂದ ಕಾರಣ ಅವರು ಪೊಲೀಸರಿಗೆ ದೂರು ನೀಡಿದಾಗ ಇಬ್ಬರು ಆರೋಪಿಗಳ ಕೃತ್ಯ ಬಯಲಾಗಿದೆ. ಆಕೆಯ ದೂರಿನಿಂದಾಗಿ ಪೊಲೀಸರು ಆಳವಾದ ತನಿಖೆ ನಡೆಸಿದ್ದರು.

ಪೊಲೀಸರು ಕಾರ್ಖಾನೆಯೊಳಗಿನ ಸಿಸಿಟಿವಿ ಪೊಲೀಸರು ಕಾರ್ಖಾನೆಯೊಳಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ನಾಗೇಶ್ ನಿಜವಾಗಿ ಹೇಗೆ ಸಾವನ್ನಪ್ಪಿದರು ಎಂಬುದು ಬೆಳಕಿಗೆ ಬಂದಿತು.

ತಂದೆಯ ಕೊಲೆಗಾಗಿ ಸೂರ್ಯನನ್ನು ಬಂಧಿಸಲಾಗಿದೆ. ಆತನ ಸ್ನೇಹಿತನನ್ನು ಇನ್ನೂ ಗುರುತಿಸಲಾಗಿಲ್ಲ. ತಂದೆ ಮತ್ತು ಮಗನ ನಡುವೆ ದೀರ್ಘಕಾಲದ ದ್ವೇಷವಿತ್ತೇ ಮತ್ತು ಕೊಲೆಗೆ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಕೊಟ್ಟಿಯೂರು: ಭಾರೀ ಜನಸಂದಣಿ, 10 ನಿಮಿಷದ ಹಾದಿಗೆ 3.30 ತಾಸು!! ಮಗು ಸಾವು; ಹೊಳೆ ನೀರಲ್ಲಿ ಕೊಚ್ಚಿ ಹೋದ ತರುಣರು!!

ಕಣ್ಣೂರು: ಕೊಟ್ಟಿಯೂರಿನಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಸಂಚಾರ ದಟ್ಟಣೆ…