Gl harusha
ಅಪರಾಧ

ಉಗ್ರರ ದಾಳಿಗೆ ಶಿವಮೊಗ್ಗ ಮೂಲದ ಪ್ರವಾಸಿಗ ಸಾವು!

ಜಮ್ಮು-ಕಾಶ್ಮೀರ ಪಹಲ್ಗಾಮ್ ಪ್ರದೇಶದ ಬೈಸರನ್ ವ್ಯಾಲಿಯಲ್ಲಿ ಉಗ್ರರು ಗುಂಡಿನ ದಾಳಿ ಮಾಡಿದ್ದು, ಈ ಘಟನೆಯಲ್ಲಿ ಶಿವಮೊಗ್ಗ ಮೂಲದ ಪ್ರವಾಸಿಗ ಸೇರಿ ಇಬ್ಬರು ಸಾವಿಗೀಡಾಗಿದ್ದಾರೆ. 12 ಜನರು ಗಾಯಗೊಂಡಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

Shrinagara: ಜಮ್ಮು-ಕಾಶ್ಮೀರ ಪಹಲ್ಗಾಮ್ ಪ್ರದೇಶದ ಬೈಸರನ್ ವ್ಯಾಲಿಯಲ್ಲಿ ಉಗ್ರರು ಗುಂಡಿನ ದಾಳಿ ಮಾಡಿದ್ದು, ಈ ಘಟನೆಯಲ್ಲಿ ಶಿವಮೊಗ್ಗ ಮೂಲದ ಪ್ರವಾಸಿಗ ಸೇರಿ ಇಬ್ಬರು ಸಾವಿಗೀಡಾಗಿದ್ದಾರೆ. 12 ಜನರು ಗಾಯಗೊಂಡಿದ್ದಾರೆ. ಪತ್ನಿ ಹಾಗೂ ಮಗನ ಕಣ್ಮುಂದೆಯೇ ಪತಿಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿರುವ ಕುರಿತು ವರದಿಯಾಗಿದೆ.

srk ladders
Pashupathi
Muliya

ಶಿವಮೊಗ್ಗ ನಗರದ ನಿವಾಸಿ ಮಂಜುನಾಥ್ ಹತ್ಯೆಗೀಡಾದ ವ್ಯಕ್ತಿ. ಇನ್ನೊಬ್ಬರ ಗುರುತು ಪತ್ತೆಯಾಗಿಲ್ಲ. ಮಂಜುನಾಥ್ ಪತ್ನಿ ಪಲ್ಲವಿ ಉಗ್ರರ ದಾಳಿ ಕುರಿತು ಮಾಹಿತಿ ನೀಡಿದ್ದಾರೆ.

ನನ್ನ ಹಾಗೂ ಮಗನ ಕಣ್ಮುಂದೆಯೇ ನನ್ನ ಪತಿಯ ಹತ್ಯೆ ಮಾಡಿದ್ದಾರೆ. ಮಗನಿಗೆ ತಿಂಡಿ ತರಲೆಂದು ಅಂಗಡಿಯಲ್ಲಿ ವಿಚಾರಿಸುತ್ತಿದ್ದರು. ಗುಂಡಿನ ಶಬ್ದ ಕೇಳಿ ನಾನು ತಿರುಗಿ ನೋಡಿದಾಗ, ಪತಿ ಕೆಳಗೆ ಬಿದ್ದಿದ್ದಾರೆ. ಪತಿಯ ತಲೆಗೆ ಉಗ್ರರು ಗುಂಡು ಹಾರಿಸಿದ್ದಾರೆ. ನನ್ನ ಪತಿಯನ್ನು ಕೊಂದಿದ್ದೀಯಾ ನನ್ನ ನನ್ನ ಮಗನನ್ನೂ ಕೊಂದು ಬಿಡು ಎಂದು ಉಗ್ರನ ಬಳಿ ಕೇಳಿದೆ. ನಮ್ಮನ್ನು ಕೊಂದಿಲ್ಲ, ಹೋಗಿ ಮೋದಿಗೆ ಹೇಳು ಎಂದು ಅಲ್ಲಿಂದ ಎಸ್ಕೆಪ್ ಆಗಿದ್ದಾನೆ ಎಂದು ಮೃತರ  ಪತ್ನಿ ಪಲ್ಲವಿ ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts