Gl harusha
ಅಪರಾಧ

ಮಂಗಳೂರು ವಿಶ್ವವಿದ್ಯಾಲಯದ ಎರಡು ಹಾಸ್ಟೆಲ್’ಗಳೇ ಕಣ್ಮರೆ! ದುರುಪಯೋಗವಾದ ಹಣ ವಸೂಲಿಗೆ, ದಂಡ ವಿಧಿಸಲು ಉನ್ನತ ಶಿಕ್ಷಣ ಮಂಡಳಿ ಶಿಫಾರಸು!

7 ಕೋಟಿ ರೂ. ಖರ್ಚು ಮಾಡಿ ನಿರ್ಮಿಸಿದ ಎರಡು ಹಾಸ್ಟೆಲ್‌ಗಳು ಕಣ್ಮರೆಯಾಗಿರುವ ಘಟನೆ ಮಂಗಳೂರು (Mangaluru) ವಿಶ್ವವಿದ್ಯಾಲಯದಲ್ಲಿ ನಡೆದಿದೆ. ತಜ್ಞರ ಸಮಿತಿ ಪರಿಶೀಲನೆಗೆ ತೆರಳಿದ್ದ ವೇಳೆ ಈ ಘಟನೆ ಬಹಿರಂಗವಾಗಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

7 ಕೋಟಿ ರೂ. ಖರ್ಚು ಮಾಡಿ ನಿರ್ಮಿಸಿದ ಎರಡು ಹಾಸ್ಟೆಲ್‌ಗಳು ಕಣ್ಮರೆಯಾಗಿರುವ ಘಟನೆ ಮಂಗಳೂರು (Mangaluru) ವಿಶ್ವವಿದ್ಯಾಲಯದಲ್ಲಿ ನಡೆದಿದೆ. ತಜ್ಞರ ಸಮಿತಿ ಪರಿಶೀಲನೆಗೆ ತೆರಳಿದ್ದ ವೇಳೆ ಈ ಘಟನೆ ಬಹಿರಂಗವಾಗಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ.

srk ladders
Pashupathi
Muliya

ವಿಶ್ವವಿದ್ಯಾಲಯವು ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಮಾಧ್ಯಮ (DH) ವರದಿ ಹೇಳಿದೆ.

ವಿಶ್ವವಿದ್ಯಾಲಯ ಆವರಣದಲ್ಲಿ ಯಾವುದೇ ಹಾಸ್ಟೆಲ್‌ ಕಟ್ಟಡಗಳು ಕಾಣಿಸದಿದ್ದರಿಂದ ಪರಿಶೀಲನೆಗಾಗಿ ತೆರಳಿದ್ದ ತಜ್ಞರ ಸಮಿತಿ ಆಘಾತಕ್ಕೊಳಗಾಯಿತು ಎಂದು ವರದಿ ಉಲ್ಲೇಖಿಸಿದೆ. ಈ ವೇಳೆ ಸಮಿತಿಯು ಅಧಿಕಾರಿಗಳನ್ನು ದಾಖಲೆಗಳನ್ನು ನೀಡುವಂತೆ ಒತ್ತಾಯಿಸಿದಾಗ, ಅಧಿಕಾರಿಗಳು “ಅಂತಾರಾಷ್ಟ್ರೀಯ ಹಾಸ್ಟೆಲ್” ನಿರ್ಮಾಣಕ್ಕಾಗಿ ಹಣವನ್ನು ಬೇರೆಡೆಗೆ ತಿರುಗಿಸಲಾಗಿದೆ ಎಂದು ಹೇಳುವ ಮೂಲಕ ಸಮಿತಿಯನ್ನು “ತಪ್ಪು ದಾರಿಗೆಳೆಯಲು ಪ್ರಯತ್ನಿಸಿದರು ಎಂದು ವರದಿ ತಿಳಿಸಿದೆ.

ಕುತೂಹಲಕಾರಿ ವಿಚಾರ ಏನೆಂದರೆ, ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಸಿದ ಬಳಕೆಯ ಪ್ರಮಾಣಪತ್ರದಲ್ಲಿ, ವಿಶ್ವವಿದ್ಯಾಲಯವು ಎರಡು ಹಾಸ್ಟೆಲ್‌ಗಳನ್ನು ನಿರ್ಮಿಸಿದೆ ಎಂದು ಹೇಳಿಕೊಂಡಿದೆ.

“ವಿಶ್ವವಿದ್ಯಾಲಯವು ದುರುಪಯೋಗಪಡಿಸಿಕೊಂಡ ಹಣವನ್ನು ವಸೂಲಿ ಮಾಡಲು ಮತ್ತು ದಂಡ ವಿಧಿಸಲು ಉನ್ನತ ಶಿಕ್ಷಣ ಮಂಡಳಿ ಶಿಫಾರಸು ಮಾಡಿದೆ. ಹೊಸ ಕಾರ್ಯದರ್ಶಿ ಈಗ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಮತ್ತು ನಾವು ಈ ವಿಷಯವನ್ನು ಅವರ ಮುಂದೆ ಇಡುತ್ತೇವೆ” ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts