Gl jewellers
ಅಪರಾಧ

ಸ್ಕೂಟರ್ – ಲಾರಿ ಡಿಕ್ಕಿ; ಸವಾರ ಮುಹಮ್ಮದ್‌ ಅನ್ವಾಸ್ ಮೃತ್ಯು..!

ಸ್ಕೂಟರ್ ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿಯ ಮಂಜೇಶ್ವರ ಉದ್ಯಾವರದಲ್ಲಿ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಕಾಸರಗೋಡು: ಸ್ಕೂಟರ್ ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿಯ ಮಂಜೇಶ್ವರ ಉದ್ಯಾವರದಲ್ಲಿ ನಡೆದಿದೆ.

Pashupathi
Papemajalu garady
Karnapady garady

ಮೃತಪಟ್ಟ ಯುವಕನನ್ನು ಉಪ್ಪಳ ಕನ್ನಾಡಿಪಾರೆಯ ಮುಹಮ್ಮದ್ ಅನ್ವಾಸ್ (23) ಎಂದು ಗುರುತಿಸಲಾಗಿದೆ.

ಸ್ಕೂಟರ್‌ನಲ್ಲಿದ್ದ ಅಂಗಡಿ ಮೊಗರುವಿನ ಫಸಲ್ ರಹಮಾನ್ ಗಾಯಗೊಂಡಿದ್ದಾರೆ. ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ತಲಪಾಡಿ ಕಡೆಗೆ ತೆರಳುತ್ತಿದ್ದಾಗ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದರೂ ಆನ್ವಾಸ್‌ ಮೃತಪಟ್ಟರು. ಅನ್ವಾಸ್‌ ಉಪ್ಪಳದಲ್ಲಿ ಮೊಬೈಲ್ ಮಳಿಗೆಯಲ್ಲಿ  ಕೆಲಸ ನಿರ್ವಹಿಸುತಿದ್ದರು ಮಂಜೇಶ್ವರ ಪೊಲೀಸ್ ಠಾಣೆ ಯಲ್ಲಿ ಕೇಸು ದಾಖಲಿಸಿಕೊಂಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts