ಪರೀಕ್ಷೆ ಬರೆಯಲು ತೆರಳುತ್ತಿದ್ದ ದಲಿತ ವಿದ್ಯಾರ್ಥಿಯೊಬ್ಬನನ್ನು ದುಷ್ಕರ್ಮಿಗಳ ತಂಡ ಒಂದು ತಡೆದು ಆತನ ಮೇಲೆ ಹಲ್ಲೆ ಮಾಡಿ ಬೆರಳನ್ನು ಕತ್ತರಿಸಿರುವಂತಹ ಕ್ರೂರ ಪ್ರಕರಣ ಒಂದು ಬೆಳಕಿಗೆ ಬಂದಿದೆ.
ತಮಿಳುನಾಡಿನ(Tamilunadu) ತಿರುನಲ್ವೇಲಿ ಜಿಲ್ಲೆಯಲ್ಲಿ ದಿನಗೂಲಿ ನೌಕರನಾಗಿರುವ ತಂಗ ಗಣೇಶ್ ಅವರ ಮಗ, 11 ನೇ ತರಗತಿಯ ಬಾಲಕ ದೇವೇಂದ್ರನ್, ತನ್ನ ಮನೆಯಿಂದ ಪಳಯಂಕೊಟ್ಟೆನಲ್ಲಿರುವ ಶಾಲೆಗೆ ಪರೀಕ್ಷೆ ಬರೆಯಲು ಹೋಗುತ್ತಿದ್ದಾಗ ಆತನ ಮೇಲೆ ಅಪರಿಚಿತ ವ್ಯಕ್ತಿಗಳ ಗುಂಪೊಂದು ಹಲ್ಲೆ ನಡೆಸಿ, ಬೆರಳುಗಳನ್ನು ಕತ್ತರಿಸಿದ ಘಟನೆ ನಡೆದಿದೆ.
ಮಾರ್ಗ ಮಧ್ಯದಲ್ಲಿ, ಮೂವರು ವ್ಯಕ್ತಿಗಳು ಬಸ್ ಅನ್ನು ತಡೆದು ನಿಲ್ಲಿಸಿ, ದೇವೇಂದ್ರನನ್ನು ಬಸ್‌ನಿಂದ ಹೊರಗೆ ಎಳೆದುಕೊಂಡು ಹೋಗಿ ಅವರ ಎಡಗೈಯ ಬೆರಳುಗಳನ್ನು ಕತ್ತರಿಸಿದ್ದಾರೆ ಎಂದು ವರದಿಯಾಗಿದೆ. ಈ ಗುಂಪು ತಂದೆ ತಂಗ ಗಣೇಶ್ ಅವರ ಮೇಲೂ ಹಲ್ಲೆ ನಡೆಸಿದೆ.
ದೇವೇಂದ್ರನ್ ಉತ್ತಮ ಕಬ್ಬಡಿ ಆಟಗಾರನಾಗಿದ್ದು, ಇತ್ತೀಚೆಗೆ ನಡೆದ ಕಬಡ್ಡಿ ಪಂದ್ಯಾಟದಲ್ಲಿ ದೇವೇಂದ್ರನ್ ತಂಡವು ಎದುರಾಳಿ ತಂಡವನ್ನು ಮಣಿಸಿದ್ದೇ ಈ ಕೃತ್ಯ ಎಸಗಲು ಕಾರಣ ಎನ್ನಲಾಗಿದೆ. ದೇವೇಂದ್ರನ್ ನನ್ನು ಶ್ರೀವೈಕುಂಡಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ನಂತರ ತಿರುನಲ್ವೇಲಿ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಆತನ ಬೆರಳುಗಳನ್ನು ಮತ್ತೆ ಜೋಡಿಸಲು ಶಸ್ತ್ರಚಿಕಿತ್ಸೆ ನಡೆಯುತ್ತಿದೆ. ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಮೂವರು ಅಪ್ರಾಪ್ತ ವಯಸ್ಕರನ್ನು ಬಂಧಿಸಿದ್ದಾರೆ