ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ನಡೆಯುವ ಕರಾವಳಿ ಉತ್ಸವದ ಪ್ರಯುಕ್ತ ನಡೆಯುವ ಫಿಲಂ ಫೆಸ್ಟಿವಲ್ ನಲ್ಲಿ ತುಳು ಚಿತ್ರರಂಗವನ್ನು ಕಡೆಗಣಿಸಿರುವುದು ಅತ್ಯಂತ ಬೇಸರದ ಸಂಗತಿ ಎಂದು ಕೋಸ್ಟಲ್ ವುಡ್ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರಿ ಒಕ್ಕೂಟ ತಿಳಿಸಿದೆ.
ಈಗಾಗಲೇ ತುಳು ಚಿತ್ರರಂಗ ಐತಿಹಾಸಿಕ ಮೈಲುಗಲ್ಲನ್ನು ಸಾಧಿಸಿರುವ ಚಿತ್ರ ರಂಗವಾಗಿದೆ. ವರ್ಷದಲ್ಲಿ 8 ರಿಂದ 10 ಚಿತ್ರಗಳು ಬಿಡುಗಡೆ ಆಗಿರುವ ತುಳು ಚಿತ್ರಗಳಿಗೆ ಕರಾವಳಿ ಭಾಗದ ತುಳುನಾಡಿನಲ್ಲಿ ನಡೆಯುವ ಫಿಲಂ ಫೆಸ್ಟಿವಲ್ ನಲ್ಲಿ ತುಳು ಚಿತ್ರರಂಗಕ್ಕೆ ಯಾವುದೇ ರೀತಿಯ ಪ್ರೋತ್ಸಾಹ ನೀಡದೇ ಇರುವುದು ಅತ್ಯಂತ ಬೇಸರದ ಸಂಗತಿ ಎಂದು ಖೇದ ವ್ಯಕ್ತಪಡಿಸಿದ್ದಾರೆ.
ಸಂಬಂಧಪಟ್ಟ ಇಲಾಖೆಯು ಆಗಿರುವ ತಪ್ಪುಗಳನ್ನು ಸರಿ ಮಾಡಿ ಕರಾವಳಿ ಉತ್ಸವದ ಪ್ರಯುಕ್ತ ನಡೆಯುವ ಫಿಲಂ ಫೆಸ್ಟಿವಲ್ ನಲ್ಲಿ ತುಳು ಚಿತ್ರರಂಗಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಆಗ್ರಹ ಮಾಡಿದೆ.