ಸಿನೇಮಾ

ಶೂಟಿಂಗ್‌ನಲ್ಲಿ ಅವಘಡ, ಗಂಭೀರವಾಗಿ ಗಾಯಗೊಂಡ ನಟ ಪ್ರಭಾಸ್!

ನಟ ಪ್ರಭಾಸ್ ಅವರು ಶೂಟಿಂಗ್ ವೇಳೆ ಅವಘಡಕ್ಕೀಡಾಗಿದ್ದಾರೆ

ಈ ಸುದ್ದಿಯನ್ನು ಶೇರ್ ಮಾಡಿ

ಪ್ಯಾನ್ ಇಂಡಿಯಾ ನಟ ಪ್ರಭಾಸ್ ಅವರು ಶೂಟಿಂಗ್ ವೇಳೆ ಅವಘಡಕ್ಕೀಡಾಗಿದ್ದಾರೆ. ತನ್ನ ಮುಂಬರುವ ಹಾರರ್-ಕಾಮಿಡಿ ದಿ ರಾಜಾ ಸಾಬ್‌ಗಾಗಿ ಆಕ್ಷನ್ ಸೀಕ್ವೆನ್ಸ್‌ಗಾಗಿ ಚಿತ್ರೀಕರಣ ಮಾಡುವಾಗ ಗಂಭೀರ ಗಾಯ ಮಾಡಿಕೊಂಡಿದ್ದು,ಪರಿಣಾಮ ಅವರಿಗೆ ಚಿಕಿತ್ಸೆ ಮತ್ತು ವಿಶ್ರಾಂತಿ ಅಗತ್ಯವಿದೆ. ಹೀಗಾಗಿ ಜಪಾನ್‌ನಲ್ಲಿ ಮುಂದಿನ ತಿಂಗಳ 3ನೇ ತಾರೀಕು ಬಿಡುಗಡೆಯಾಗಲಿರುವ ಕಲ್ಕಿ ಚಿತ್ರದ ಪ್ರಚಾರಕ್ಕೆ ಹಾಜರಾಗುವುದಿಲ್ಲ ಎಂದು ಅಲ್ಲಿನ ಫ್ಯಾನ್‌ಗಳಲ್ಲಿ ಕ್ಷಮೆ ಕೇಳಿ ಸ್ಪಷ್ಟಪಡಿಸಿದ್ದಾರೆ.

akshaya college

ಮುಂಬರುವ ಹಾರರ್-ಕಾಮಿಡಿ ಮಾರುತಿ ನಿರ್ದೇಶನದ ದಿ ರಾಜಾ ಸಾಬ್‌ಗಾಗಿ ಆಕ್ಷನ್ ಸೀಕ್ವೆನ್ಸ್ ಗಾಗಿ ಶೂಟಿಂಗ್‌ನಲ್ಲಿರುವಾಗ ಅವಘಡ ಸಂಭವಿಸಿ ಪಾದ ಉಳುಕಿದೆ. ಗಾಯ ಗಂಭೀರವಾಗಿರುವ ಕಾರಣ ಪ್ರಯಾಣಿಸಲು ಮತ್ತು ಕಲ್ಕಿ ಚಿತ್ರದ ಪ್ರಚಾರಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ.

ನಿರ್ದೇಶಕ ನಾಗ್ ಅಶ್ವಿನ್ ಸೇರಿದಂತೆ ಇತರರು ಪ್ರಚಾರ ಚಟುವಟಿಕೆಗಳಿಗೆ ಇರಲಿದ್ದಾರೆ.

ಪ್ರಭಾಸ್ ಸಹಿತ ದೀಪಿಕಾ ಪಡುಕೋಣೆ, ಕಮಲ್ ಹಾಸನ್ ವ ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಕಲ್ಕಿ 2898 AD ಅನ್ನು ವೈಜಯಂತಿ ಮೂವೀಸ್ ನಿರ್ಮಿಸಿದೆ. ಕಬಾಟಾ ಕೀಜೊ ಒಡೆತನದ ವಿತರಣಾ ಕಂಪನಿಯಾದ ಟ್ವಿನ್ ಸಹಯೋಗದೊಂದಿಗೆ ಜಪಾನ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಪ್ರೊಡಕ್ಷನ್ ಹೌಸ್ ಯೋಜನೆ ಹಾಕಿಕೊಂಡಿದೆ. ಟ್ವಿನ್ ಈ ವರ್ಷದ ಆರಂಭದಲ್ಲಿ ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್‌ ಅನ್ನು ಸಹ ಬಿಡುಗಡೆ ಮಾಡಿತ್ತು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಧರ್ಮದೈವಕ್ಕಿಂತ ವಿಭಿನ್ನ ಕಥಾಹಂದರದ ಧರ್ಮಚಾವಡಿ | ನಾಳೆ (ಜುಲೈ 11) ಉಭಯ ಜಿಲ್ಲೆಗಳಲ್ಲಿ ಬಿಡುಗಡೆ: ನಿತಿನ್ ರೈ ಕುಕ್ಕುವಳ್ಳಿ

ಪುತ್ತೂರು: ತುಳು ಸಿನಿರಂಗದಲ್ಲಿ ಸದ್ದು ಮಾಡಿದ ಧರ್ಮ ದೈವ ಸಿನಿಮಾದ ಬಳಿಕ ಇದೀಗ ಧರ್ಮ ಚಾವಡಿ…