ಸಿನೇಮಾ

ಡಾ.ವಿಷ್ಣುವರ್ಧನ್ ಸ್ಮಾರಕಕ್ಕೆ ಜಾಗ ಖರೀದಿಸಿದ ಕಿಚ್ಚ ಸುದೀಪ್!!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಸಾಹಸಸಿಂಹ ಡಾ| ವಿಷ್ಣುವರ್ಧನ್ ಅವರ ಸ್ಮಾರಕ ವಿವಾದಕ್ಕೆ ಒಂದು ತಾರ್ಕಿಕ ಆಂತ್ಯ ಸಿಗುವ ಕಾಲ ಸನಿಹಿತವಾಗಿದೆ. ನಟ ಕಿಚ್ಚ ಸುದೀಪ್ ಅವರು ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಅರ್ಧ ಎಕ್ರೆ ಜಾಗ ಖರೀದಿಸಿದ್ದು, ವಿಷ್ಣುವರ್ಧನ್ ಜನ್ಮದಿನವಾದ ಸೆ. 18ರಂದು ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲು ಪೂಜೆ ನೆರವೇರಲಿದೆ. ಬೆಂಗಳೂರಿನ ಕೆಂಗೇರಿ ಬಳಿ ಖರೀದಿಸಿರುವ ಈ ಜಾಗದಲ್ಲಿ ಗ್ರಂಥಾಲಯ, ವಿಷ್ಣು ಅವರ 25 ಅಡಿಯ ಪುತ್ಥಳಿ ಹಾಗೂ ಒಂದು ಗ್ಯಾಲರಿ ನಿರ್ಮಾಣವಾಗಲಿದೆ.

akshaya college

ಈ ಕುರಿತು ಮಾಹಿತಿ ನೀಡಿದ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ಸೆ. 2ರಂದು ಸುದೀಪ್ ಅವರ ಹುಟ್ಟುಹಬ್ಬ. ಅವರು ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ. ಸುದೀಪ್ ಅವರ ಹುಟ್ಟುಹಬ್ಬದಂದೇ ಸ್ಮಾರಕದ ನೀಲಿನಕ್ಷೆಯನ್ನು ಸ್ವತಃ ಸುದೀಪ್ ಅನಾವರಣ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. ಸೆ.18ರಂದು ವಿಷ್ಣುವರ್ಧನ್ ಬರ್ತಡೇ ದಿನವೇ ಸ್ಮಾರಕಕ್ಕೆ ಅಡಿಗಲ್ಲು ಹಾಕಲಾಗುವುದು. ಕೆಂಗೇರಿ ಬಳಿ ನಿರ್ಮಾಣ ಆಗುವ ಸ್ಮಾರಕ, ಅಭಿಮಾನ್ ಸ್ಟುಡಿಯೋ ಪುಣ್ಯಭೂಮಿಗೆ ಸಮ ಅಲ್ಲ ಎಂದು ತಿಳಿಸಿದ್ದಾರೆ.

ಅಮೃತ ಮಹೋತ್ಸವ:

ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವ ಅಂಗವಾಗಿ ಒಂದು ದಿನ ಕಾರ್ಯಕ್ರಮ ಮಾಡಲು ಯೋಜಿಸಲಾಗಿದೆ. ಬೆಂಗಳೂರಿನ ನಂದಿ ಲಿಂಕ್ಸ್ ಗೌಂಡ್‌ನಲ್ಲಿ ಈ ಸಂಭ್ರಮ ಮಾಡಲಾಗುತ್ತಿದೆ. ಇಡೀ ಚಿತ್ರರಂಗ ಭಾಗಿ ಆಗಲಿದೆ ಎಂದು ತಿಳಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಧರ್ಮದೈವಕ್ಕಿಂತ ವಿಭಿನ್ನ ಕಥಾಹಂದರದ ಧರ್ಮಚಾವಡಿ | ನಾಳೆ (ಜುಲೈ 11) ಉಭಯ ಜಿಲ್ಲೆಗಳಲ್ಲಿ ಬಿಡುಗಡೆ: ನಿತಿನ್ ರೈ ಕುಕ್ಕುವಳ್ಳಿ

ಪುತ್ತೂರು: ತುಳು ಸಿನಿರಂಗದಲ್ಲಿ ಸದ್ದು ಮಾಡಿದ ಧರ್ಮ ದೈವ ಸಿನಿಮಾದ ಬಳಿಕ ಇದೀಗ ಧರ್ಮ ಚಾವಡಿ…