ಉಪ್ಪಿನಂಗಡಿ: ಜಿಲ್ಲೆಯ ರೈತಾಪಿ ವರ್ಗದ ಬದುಕಿನೊಂದಿಗೆ ನಂಟು ಹೊಂದಿರುವ ಕಂಬಳ ಕ್ರೀಡೆಗೆ ಸರಕಾರದಿಂದ ದೊರಕಬೇಕಾದ ಸಹಾಯಧನವನ್ನು ದೊರಕಿಸುವುದಲ್ಲದೆ, ಹೆಚ್ಚುವರಿ ಪ್ರೋತ್ಸ್ಸಾಹ ಒದಗಿಸಲು ಶ್ರಮಿಸುತ್ತಿದ್ದೇನೆ. ಉತ್ಕಷ್ಠ ಜೀವನಪದ್ದತಿಯನ್ನು ಹೊಂದಿರುವ ದ.ಕ ಜಿಲ್ಲೆಗೆ ಮತೀಯ ಸಂಘರ್ಷ ಅಪಕೀರ್ತಿಯನ್ನು…
ಶ್ರೀ ಅಯ್ಯಪ್ಪ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಮಿನಿಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಅಯ್ಯಪ್ಪ ದೇವರಿಗೆ ಮಹಾಪೂಜೆ, ಗುಳಿಗ ದೈವದ ನೇಮೋತ್ಸವ ಮಾ. 23ರಂದು ನಡೆಯಲಿದೆ.
ಪಡುಮಲೆಯಲ್ಲಿ ವೈನಸ್ಯ ಉಂಟಾಗಿ ತಮ್ಮಲ್ಲಿದ್ದ ಸುರಿಯವನ್ನು ಊರಿ, ಪಂಜ ಭಾಗದತ್ತ ಹೊರಟ ಕೋಟಿ – ಚೆನ್ನಯರಿಗೆ ಮೈದಾನ ಎದುರಾಗುತ್ತದೆ.
ತೆಂಕುತಿಟ್ಟು ಯಕ್ಷಗಾನದ ಹಿಮ್ಮೇಳ ವಾದನದ ತಜ್ಞ ಕಲಾವಿದ, ಹಿರಿಯ ಯಕ್ಷಗಾನ ಗುರು ಬಿ.ಗೋಪಾಲಕೃಷ್ಣ ಕುರುಪ್ (90) ನಿಧನರಾದರು.
ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಶನಿವಾರ ಹಾಗೂ ಭಾನುವಾರ ನಡೆಯಿತು.
ಕುರಿಯ ಗ್ರಾಮದ ಬೈಲಾಡಿ ನೆಕ್ಕಿಲ್ ಶ್ರೀ ರಾಜಾ ಗುಳಿಗ ಸಾನಿಧ್ಯದಲ್ಲಿ ಭಾನುವಾರ ರಾಜಾ ಗುಳಿಗ ದೈವದ ನೇಮ ನಡೆಯಿತು.
ಚಲನ ಚಿತ್ರರಂಗದ ನಟ, ಕೊರಿಯೋಗ್ರಾಫರ್ ಪ್ರಭುದೇವ ತಮ್ಮ ಕುಟುಂಬ ಸಮೇತರಾಗಿ ಇಂದು (ಶನಿವಾರ) ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಹಾಗೂ ದೇವಳದಲ್ಲಿ ಮಹಾಭಿಷೇಕ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.
ಪುತ್ತೂರು ರೈಲು ನಿಲ್ದಾಣದ ಬಳಿಯ ಲಕ್ಷ್ಮೀದೇವಿಬೆಟ್ಟದ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶುಕ್ರವಾರ ಮೀನ ಸಂಕ್ರಮಣದಂದು ಮುಂಜಾನೆ ಸೂರ್ಯನ ಕಿರಣಗಳು ಕ್ಷೇತ್ರದ ಮೂರು ಬಾಗಿಲುಗಳನ್ನು ದಾಟಿ ಗರ್ಭಗುಡಿಯಲ್ಲಿ ನೆಲೆಯಾಗಿರುವ ದೇವಿಯ ಬಿಂಬಕ್ಕೆ ಸ್ಪರ್ಶವಾಯಿತು.
ಪುತ್ತೂರು: ನಿಡ್ಪಳ್ಳಿ ಕರ್ನಪ್ಪಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಬುಧವಾರ ಕೊಡಮಣಿತ್ತಾಯ ದೈವದ ನೇಮ ನಡೆಯಿತು. ಗಣಪತಿ ಹೋಮ, ಬ್ರಹ್ಮರ ತಂಬಿಲ ಮತ್ತು ನಾಗ ತಂಬಿಲ ಸೇವೆ ನಡೆಯಿತು. ಸಂಜೆ ಭಜನಾ ಕಾರ್ಯಕ್ರಮದ ಬಳಿಕ ದೈವದ ಭಂಡಾರ ಇಳಿಸಲಾಯಿತು. ರಾತ್ರಿ ಕೊಡಮಂತಾಯ ದೈವದ ನೇಮ ಜರಗಿತು.
ನಿಡ್ಪಳ್ಳಿ ಕರ್ನಪ್ಪಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಸೇವಾ ಸಮಿತಿ ನೇತೃತ್ವದಲ್ಲಿ ಕರ್ನಪ್ಪಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿಯ ವಾರ್ಷಿಕ ನೇಮೋತ್ಸವ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮಾ. 13ರಂದು ವಿಜೃಂಭಣೆಯಿಂದ ನಡೆಯಿತು.
Welcome, Login to your account.
Welcome, Create your new account
A password will be e-mailed to you.