Browsing: ಧಾರ್ಮಿಕ

ಪುತ್ತೂರು: ಸಂಪ್ಯ ಶ್ರೀರಾಮ ನಗರದ ನವಚೇತನಾ ಯುವಕ ಮಂಡಲದ ವತಿಯಿಂದ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ, ಆಟೋಟ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎರಡು ದಿನಗಳ ಕಾಲ ನಡೆಯಲಿರುವ 42ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ ಸೆ.7ರಂದು ಪ್ರಾರಂಭಗೊಂಡಿತು.

ಪುತ್ತೂರು: ಕಾರಣಿಕ ಮೂರ್ತಿ ಕಿಲ್ಲೆ ಶ್ರೀ ಮಹಾಗಣೇಶೋತ್ಸವ ಹತ್ತೂರಿನಲ್ಲೂ ಪ್ರಸಿದ್ಧ. ಗಣೇಶೋತ್ಸವಕ್ಕೆ ಒಮ್ಮೆಯಾದರೂ ಆಗಮಿಸಿ, ತಲೆ ಬಾಗಿ ನಮಿಸಿ, ಕೈನೀಡಿ ಪ್ರಸಾದ ಸ್ವೀಕರಿಸಿದರೆ ಏನೋ ಒಂದು ರೀತಿಯ ಆಹ್ಲಾದತೆ.

ಶ್ರೀ ಶಿವ ಸುಜ್ಞಾನ ಮೂರ್ತಿ ಸ್ವಾಮಿಗಳು ಅರೆಮಾದನಹಳ್ಳಿ ಹಾಸನ ಜಿಲ್ಲೆ ಇವರ 42ನೇ ಚಾತುರ್ಮಾಸ್ಯದ ಅಂಗವಾಗಿ ಬ್ರಹ್ಮಾವರ ತಾಲ್ಲೂಕು ಕಜ್ಕೆ ಶಾಖಾ ಮಠದ ಶ್ರೀ ಅನ್ನಪೂರ್ಣೇಶ್ವರಿ ದೇವಳದಲ್ಲಿ ಶಿಲ್ಪ ದರ್ಶಕ ತಾಳಮದ್ದಳೆ ಜರಗಿತು.

ಪುತ್ತೂರು: ಇಲ್ಲಿನ ಕೊಡಿಪ್ಪಾಡಿ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದ ಪ್ರತಿವರ್ಷದಂತೆ ಸೆ. 3ರಂದು ಬೆಳಿಗ್ಗೆ ಕೊಡಿಪ್ಪಾಡಿ ತೀರ್ಥ ನಡೆಯಲಿದೆ.

ಪುತ್ತೂರು: ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾಸೇವಾ ಸಂಘದ 50ನೇ ವರ್ಷಾ ಚರಣೆ ಪ್ರಯುಕ್ತ ಶ್ರೀ ಮಹಾಭಾರತ ಸರಣಿಯಲ್ಲಿ 44ನೇ ಕಾರ್ಯಕ್ರಮವಾಗಿ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ ಉಪ್ಪಿನಂಗಡಿ ವತಿಯಿಂದ
ಕೃಷ್ಣಾರ್ಜುನ ಕಾಳಗ ತಾಳಮದ್ದಳೆ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು.

ಪುತ್ತೂರು: ವಿಶ್ವ ಹಿಂದೂ ಪರಿಷದ್, ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ವತಿಯಿಂದ ವಿಶ್ವ ಹಿಂದೂ ಪರಿಷದ್ ನ ಸ್ಥಾಪನಾ ದಿನಾಚರಣೆ ಅಂಗವಾಗಿ 14ನೇ ವರ್ಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಮತ್ತು ಶೋಭಾಯಾತ್ರೆ ಆ. 31ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷೆ ಕೃಷ್ಣವೇಣಿ ಮುಳಿಯ ಹೇಳಿದರು.