ಅಪರಾಧ

ಕೊಡಿಪ್ಪಾಡಿ: ನಾಪತ್ತೆಯಾಗಿದ್ದ ವಿದ್ಯಾರ್ಥಿ ಮೊಹಮ್ಮದ್ ಹಸೈನಾ‌ರ್ ಪತ್ತೆ!

ಶನಿವಾರ ಸಂಜೆ ಕೊಡಿಪ್ಪಾಡಿ ಮನೆಯಿಂದ ಇನ್ನು ಹುಡುಕಬೇಡಿ ಎಂದು ಹೇಳಿ ನಾಪತ್ತೆಯಾಗಿದ್ದ ವಿದ್ಯಾರ್ಥಿ ಮೊಹಮ್ಮದ್ ಹಸೈನಾರ್ ಭಾನುವಾರ ಅರಸೀಕೆರೆಯಲ್ಲಿ ಪತ್ತೆಯಾಗಿದ್ದಾನೆ.

ಶಿವಮೊಗ್ಗ:ನಾಪತ್ತೆಯಾಗಿದ್ದ 5 ಮಕ್ಕಳು ಪತ್ತೆ!!

ಶಿವಮೊಗ್ಗ: ಭದ್ರಾವತಿ ತಾಲ್ಲೂಕಿನ ತಳ್ಳಿಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮರಿ ನಾರಾಯಣಪುರ ಐವರು ಮಕ್ಕಳು ಭಾನುವಾರ(ಏ.6) ಸಂಜೆಯಿಂದ ನಾಪತ್ತೆಯಾಗಿದ್ದು ಇಡೀ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಧನಂಜಯ್ (14), ಲೋಹಿತ್ (12), ಲಕ್ಷ್ಮೀಶ (9), ಚರಣ್‌ರಾಜ್ (9), ಭುವನ್ (8)…

ವಿಷ ಸೇವಿಸಿ ಆತ್ಮಹತ್ಯೆ; ಮಗ ಸಾವು, ತಾಯಿ ಗಂಭೀರ!

ಸುಬ್ರಹ್ಮಣ್ಯ: ಇಲಿ ಪಾಷಾಣ ಸೇವಿಸಿ ಅಮ್ಮ ಮತ್ತು ಮಹಾತ್ಮೆಗೆ ಯತ್ನಿಸಿದ್ದು, ಘಟನೆಯಲ್ಲಿ ಮಗ ಸಾವನ್ನಪ್ಪಿ ತಾಯಿ ಗಂಭೀರ ಸ್ಥಿತಿಯಲ್ಲಿ ಸುಳ್ಯದ ಆಸ್ಪತ್ರೆಗೆ ದಾಖಲಾದ ಘಟನೆ ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ನಾಲ್ಕೂರು ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಮೃತಪಟ್ಟವರನ್ನು…

ಪುತ್ತೂರು: ಆಟೋ ಚಾಲಕನಿಂದ ಅತ್ಯಾಚಾರ ಫೋಕ್ಸೋ ಪ್ರಕರಣ ದಾಖಲು!!

ಆಟೋ ಚಾಲಕನೊಬ್ಬ ಪಿಯುಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ವೆಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಟೋ ಚಾಲಕ ಮಂಜುನಾಥ್ ಕಟ್ಟತ್ತಡ್ಕ ಅತ್ಯಾಚಾರ ಎಸಗಿದ ಆರೋಪಿಯಾಗಿದ್ದು ಕಳೆದ ಆಗಸ್ಟ್ ತಿಂಗಳಲ್ಲಿ ಯುವತಿ ಒಬ್ಬಳೇ ಇದ್ದ ಸಂದರ್ಭನೀರು ಕೇಳುವ ನೆಪದಲ್ಲಿ ಬಂದು ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

2 ಲಕ್ಷ ಲಂಚ; ಕೃಷಿ ಅಧಿಕಾರಿ ಲೋಕಾಯುಕ್ತ ಬಲೆಗೆ!!

ಗುತ್ತಿಗೆದಾರರೊಬ್ಬರಿಂದ ಬರೋಬ್ಬರಿ 2 ಲಕ್ಷ ರೂ. ಲಂಚದ ಹಣ ಸ್ವೀಕರಿಸುವ ವೇಳೆ ಜಿಲ್ಲಾ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಕೃಷಿ ಅಧಿಕಾರಿಯೊಬ್ಬರನ್ನು ಬಂಧಿಸುವ ಘಟನೆ ನಗರದ ಹೊರ ವಲಯದ ಜಂಟಿ ಕೃಷಿ ನಿರ್ದೇಶಕರ ಕಚೇರಿ ಬಳಿ ಎ.5ರ ಶನಿವಾರ ಮಧ್ಯಾಹ್ನ ನಡೆದಿದೆ

ನಂಬರ್ ಪ್ಲೇಟ್ ಮರೆಮಾಚಿ ಹೆಲ್ಮೆಟ್ ಧರಿಸದೆ ಚಾಲನೆ; ಆರೋಪಿ ಬಲೆಗೆ!!

ಸ್ಕೂಟರ್ ಸವಾರನೊಬ್ಬ ಸ್ಕೂಟರ್‌ನ ಹಿಂಬದಿಯ ನಂಬ‌ರ್ ಪ್ಲೇಟನ್ನು ಪ್ಲಾಸ್ಟಿಕ್ ಕವರ್‌ನಿಂದ ಮರೆಮಾಚಿ, ಹೆಲ್ಮಟ್ ಧರಿಸದೆ ಪೊಲೀಸರ ಕಣ್ಣು ತಪ್ಪಿಸಿ ಸ್ಕೂಟರ್‌ನ್ನು ಚಲಾಯಿಸಿ ಇದೀಗ ದಂಡ ಪಾವತಿಸುವಂತಾಗಿದೆ

ಕೃಷಿ ತ್ಯಾಜ್ಯಕ್ಕೆ ಬೆಂಕಿ; ಸಜೀವ ದಹನವಾದ ಕೃಷಿಕ!!

ಗದ್ದೆಯಲ್ಲಿ ಕೃಷಿ ತ್ಯಾಜ್ಯಕ್ಕೆ ಹಾಕಿದ್ದ ಬೆಂಕಿ ಸುತ್ತೆಲ್ಲಾ ಹಬ್ಬುತ್ತಿರುವ ವೇಳೆ ಅದನ್ನು ಆರಿಸಲು ಹೋದ ಕಷಿಕರೋರ್ವರು ಗದ್ದೆಯಲ್ಲೇ ಸಜೀವ ದಹನವಾದ ದಾರುಣ ಘಟನೆ ಎ. 5ರಂದು ಮಧ್ಯಾಹ್ನ ಕುಂದಾಪುರ ತಾಲೂಕಿನ ಕಾಳಾವರದ ಬಡಾಗುಡ್ಡೆ ಎಂಬಲ್ಲಿ ನಡೆದಿದೆ.

ಮಂಗಳೂರ ಹಿರಿಮೆ‌ಯ ಮೋತಿ ಮಹಲ್ ಇನ್ನಿಲ್ಲ! ವ್ಯಾಜ್ಯಕ್ಕೆ ಪೂರ್ಣ ವಿರಾಮ ಹಾಕಿದ ಸುಪ್ರೀಂ ಕೋರ್ಟ್!

ಮೋತಿ ಮಹಲ್ ಹೋಟೆಲ್ ತನ್ನ ಬಾಗಿಲು ಮುಚ್ಚುತ್ತಿದೆ ಎಂಬ ಸುದ್ದಿ ಕೇಳಿ ಮಂಗಳೂರಿಗರ ಮನಸ್ಸು ಭಾರವಾಗಿದೆ. ನಗರದ ಅತಿಥಿ ಸತ್ಕಾರದ ಇತಿಹಾಸದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಈ ಹೋಟೆಲ್‌ ಇನ್ನು ನೆನಪು ಮಾತ್ರವಾಗಲಿದೆ.