ರಾಜಸ್ಥಾನದ (Rajasthan) ಜೈಸಲ್ಮೀರ್‌ನ ಮರುಭೂಮಿಯಲ್ಲಿ ವಿಸ್ಮಯವೊಂದು ನಡೆದಿದೆ. ಇದುವರೆಗೆ ಕಣ್ಮರೆಯಾಗಿದ್ದ ಸರಸ್ವತಿ ನದಿ ಮತ್ತೆ ಉದ್ಭವವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ತಾರಗಢ ಗ್ರಾಮದಲ್ಲಿ ಶನಿವಾರ ಕೆಲವು ಕಾರ್ಮಿಕರು ಮೋಹನ್‌ಗಡ್‌ನ ಚಾಕ್ 850 ಅಡಿಗಳಷ್ಟು ಬೋರ್ ಕೊರೆಯುತ್ತಿದ್ದಾಗ ಶಕ್ತಿಯುತವಾದ ನೀರಿನ ಹರಿವು ತ್ವರಿತವಾಗಿ ಹೊಲಗಳಿಗೆ ನೀರು ನುಗ್ಗಿ ಅಲ್ಲಿಯೇ ಕೆರೆಯೊಂದನ್ನು ನಿರ್ಮಿಸಿತು. ಇದು ಈಗ ಹೊಳೆಯಾಗಿ ಹರಿಯುತ್ತಿದ್ದು ಈ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಮೂಲಕ ಮರುಭೂಮಿಯಲ್ಲಿ ಮತ್ತೆ ಸರಸ್ವತಿ ನದಿ ಹುಟ್ಟಿದಳೇ? ಎಂಬ ಪ್ರಶ್ನೆ ಎದುರಾಗಿದೆ.
ಕೊಳವೆಬಾವಿ ತೆಗೆಯುವ ವೇಳೆ ಜೈಸಲ್ಮೀರ್‌ನ ಮರುಭೂಮಿಯಲ್ಲಿ ನೀರು ಇದ್ದಕ್ಕಿದ್ದಂತೆ ಉಕ್ಕಿ ಹರಿಯಲು ಆರಂಭಿಸಿದೆ. ಈ ಪ್ರದೇಶದಲ್ಲಿ ಪ್ರಾಚೀನ ನದಿ ಸರಸ್ವತಿ ಭೂಮಿಯ ಕೆಳಗೆ ಗುಪ್ತ ಗಾಮಿನಿಯಾಗಿ ಹರಿಯುತ್ತಿದ್ದಾಳೆ ಎಂಬ ಪ್ರತೀತಿ ಇರುವ ಕಾರಣಕ್ಕೆ ಈ ಘಟನೆಯೂ ಮತ್ತಷ್ಟು ಮಹತ್ವಪೂರ್ಣವೆನಿಸಿದೆ.
ಏನಿದು ಘಟನೆ?
ಶನಿವಾರ, ಮೋಹನ್‌ಗಢದ ಕಾಲುವೆ ಪ್ರದೇಶದ ಚಾಕ್ 27 ಬಿಡಿ ಬಳಿ ಕಾರ್ಮಿಕರು ಕೊಳವೆಬಾವಿಯನ್ನು ಕೊರೆಯುತ್ತಿದ್ದಾಗ, 850 ಅಡಿ ಆಳದಲ್ಲಿ, ನೀರು ಮತ್ತು ಅನಿಲವು ಒಟ್ಟಿಗೆ ನೆಲದಿಂದ ಹೊರಹೊಮ್ಮಿ ಅಪಾಯಕಾರಿ ಪರಿಸ್ಥಿತಿಯನ್ನು ಸೃಷ್ಟಿಸಿತು. ಪ್ರವಾಹದಂತೆ ಉಕ್ಕಿದ ನೀರಿನ ಹರಿವು ಸ್ವಲ್ಪ ಹೊತ್ತಿನಲ್ಲೇ ಸುತ್ತಮುತ್ತಲಿನ ಹೊಲಗಳನ್ನು ಮುಳುಗಿಸಿತು ಮತ್ತು ಬೋರ್‌ವೆಲ್ ಕೊರೆಯಲು ಬಂದಿದ್ದ ಟ್ರಕ್ ಸೇರಿದಂತೆ ಯಂತ್ರೋಪಕರಣಗಳು ಏರುತ್ತಿರುವ ನೀರಿನ ಪ್ರವಾಹದಲ್ಲಿ ಸಿಲುಕಿಕೊಂಡವು. ಕೆಲವೇ ಕ್ಷಣಗಳಲ್ಲಿ, ನೀರಿನ ಮಟ್ಟ ಏರುತ್ತಲೇ ಇದ್ದುದರಿಂದ ಆ ಪ್ರದೇಶವು ತುಂಬಿದ ಕೊಳದಂತೆ ಕಾಣಿಸಿತ್ತು. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಹೀಗಾಗಿ ಅನೇಕರು ಗುಪ್ತ ಗಾಮಿನಿ ಸರಸ್ವತಿ ಇದೆಂದು ಹೇಳುತ್ತಾರೆ.
ನೀರಿನ ಮಟ್ಟ ಏರುತಲೇ ಇದೆ. ಈ ಪ್ರದೇಶವೂ ಹಿಂದೆ ಪ್ರಾಚೀನ ನದಿ ಸರಸ್ವತಿ ಹರಿಯುತ್ತಿದ್ದ ಜಾಗದ ಕಾರಣಕ್ಕೆ ಜನರಲ್ಲಿ ಈ ಘಟನೆ ಹೆಚ್ಚಿನ ಕುತೂಹಲ ಸೃಷ್ಟಿಸಿದೆ.
ಅಂದಹಾಗೆ ಸರಸ್ವತಿ ಹೆಚ್ಚು ಪೌರಾಣಿಕ ಹೆಸರಾಗಿದ್ದ ಕಾರಣ ಈ ನದಿಯು ಋಗ್ವೇದದಲ್ಲಿ 80 ಕ್ಕೂ ಹೆಚ್ಚು ಬಾರಿ ಅದರ ಉಲ್ಲೇಖವನ್ನು ಕಂಡುಕೊಳ್ಳುತ್ತದೆ. ಹವಾಮಾನ ಮತ್ತು ಟೆಕ್ಟೋನಿಕ್ ಬದಲಾವಣೆಗಳಿಂದಾಗಿ ಸರಸ್ವತಿ ನದಿಯು 5000 ವರ್ಷಗಳ ಹಿಂದೆ ಬತ್ತಿ ಹೋಯಿತು ಎಂದು ನಂಬಲಾಗಿದೆ. ಆದಾಗ್ಯೂ, ರಾಜಸ್ಥಾನದ ಜೈಸರ್‌ನಲ್ಲಿ ರೈತರೊಬ್ಬರು ಕೊಳವೆ ಬಾವಿಯನ್ನು ಅಗೆಯುವಾಗ ನೀರು ಹೊರಹೊಮ್ಮಿದ್ದು ಸರಸ್ವತಿ ನದಿಯು ಮತ್ತೆ ಹುಟ್ಟಿ ಬಂದಿದ್ದಾಳೆ ಎನ್ನಲಾಗಿದೆ. ಪುರಾಣ ಮತ್ತು ಇತಿಹಾಸಗಳಲ್ಲಿ ಗಂಗಾ ನದಿಗಿರುವ ಪ್ರಾಮುಖ್ಯತೆಯಷ್ಟೇ ಸರಸ್ವತಿ ನದಿಗೂ ಇರುವುದರಿಂದ ಭಾರೀ ಚರ್ಚೆಗಳು ನಡೆಯುತ್ತಿವೆ.






















