Gl harusha
ಪ್ರಚಲಿತ

ಪೊಲೀಸರನ್ನು ತಳ್ಳಿ ಎಸ್ಕೆಪ್ ಆಗಿದ್ದ ಆರೋಪಿ ಪತ್ತೆ!!

ಪ್ರಕರಣವೊಂದರ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಸಲುವಾಗಿ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆತಂದ ವೇಳೆ ತಪ್ಪಿಸಿಕೊಂಡು ಪರಾಗಿಯಾಗಿದ್ದಾತನನ್ನು ಕೊನೆಗೂ ಸುಳ್ಯ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಸುಳ್ಯ : ಇತ್ತೀಚೆಗೆ ಪ್ರಕರಣವೊಂದರ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಸಲುವಾಗಿ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆತಂದ ವೇಳೆ ತಪ್ಪಿಸಿಕೊಂಡು ಪರಾಗಿಯಾಗಿದ್ದಾತನನ್ನು ಕೊನೆಗೂ ಸುಳ್ಯ ಪೊಲೀಸರು ಪತ್ತೆ ಹಚ್ಚಿದ್ದಾರೆ.

srk ladders
Pashupathi
Muliya

ತಮಿಳುನಾಡಿನ ರಾಘವನ್ ಕೆಜೀಶ್ವರನ್ ಅಲಿಯಾಸ್ ಕೂಲಿ ಕರಣ್ (25 ವರ್ಷ)ಮತ್ತೆ ಪೊಲೀಸರ ವಶವಾದ ಆರೋಪಿ.

ಅ.5 ರಂದು ಪೊಲೀಸರು ಆತನನ್ನು ಸಂಪಾಜೆಯ ಅಂಬರೀಶ್ ಭಟ್ಟರ ಮನೆಯ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಳ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲು ಸಿದ್ಧತೆ ಮಾಡಿಕೊಂಡಿದ್ದರು, ನಿಯಮ ಪ್ರಕಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ವೈದ್ಯಕೀಯ ತಪಾಸಣೆ ನಡೆಸಬೇಕು, ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಕರೆದುಕೊಂಡು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆ ತಂದಾಗ ಆತ ಪೊಲೀಸರನ್ನೇ ದೂಡಿ ಹಾಕಿ ಪರಾರಿಯಾಗಿದ್ದ.

ಸುಳ್ಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸಂತೋಷ್ ಹಾಗೂ ಕ್ರೈಂ ಪಿಸಿಐ ಸರಸ್ವತಿ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚಿಸಿದ್ದರು. ಸುಳ್ಯದಿಂದ ತಮಿಳುನಾಡಿಗೆ ಹೋಗಿರುವ ಬಗ್ಗೆ ಖಚಿತ ಮಾಹಿತಿ ಪಡೆದು ತಮಿಳುನಾಡಿಗೆ ತೆರಳಿದ್ದರು.ಸ್ಥಳೀಯರಿಂದ ಪೂರಕ ಮಾಹಿತಿ ಪಡೆದ ಪೊಲೀಸರು ತಲೆಕೂದಲು ಬೋಳಿಸಿ ಗುರುತು ಸಿಗದಂತೆ ತಿರುಗಾಟ ನಡೆಸುತ್ತಿದ್ದ ಈತನನ್ನು ವಶಕ್ಕೆ ಪಡೆದಿದ್ದಾರೆ. ಒಂದು ಕೇಸ್ ನ ವಿಚಾರಣೆಯ ನಡುವೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕೇಸ್ ದಾಖಲಾಗಿದ್ದು ಶನಿವಾರ ನ್ಯಾಯಾಲಯಲಕ್ಕೆ  ಹಾಜರುಪಡಿಸಲಾಗಿದೆ ಎಂದು ತಿಳಿದು ಬಂದಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts