Gl harusha
ಪ್ರಚಲಿತರಾಜ್ಯ ವಾರ್ತೆಸ್ಥಳೀಯ

ಸಿಲಿಂಡರ್ ಸ್ಪೋಟ: ಐವರು ಮೃತ್ಯು, ಕೆಲವರ ಸ್ಥಿತಿ ಗಂಭೀರ!!

ಅಡುಗೆ ಅನಿಲ ಸ್ಫೋಟಗೊಂಡ ಪರಿಣಾಮ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ, ಉಳಿದವರು ಸ್ಥಿತಿ ಗಂಭೀರ.ಎಂದು ಪೊಲೀಸರು ತಿಳಿಸಿದ್ದಾರೆ

ಈ ಸುದ್ದಿಯನ್ನು ಶೇರ್ ಮಾಡಿ

ಅಡುಗೆ ಅನಿಲ ಸ್ಫೋಟಗೊಂಡ ಪರಿಣಾಮ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಉಳಿದವರು ಸ್ಥಿತಿ ಗಂಭೀರ ಎಂದು ಪೊಲೀಸರು ತಿಳಿಸಿದ್ದಾರೆ

srk ladders
Pashupathi
Muliya

ಉತ್ತರ ಪ್ರದೇಶದ ಸಿಕಂದರಾಬಾದ್ ಪ್ರದೇಶದ  ರಿಯಾಜುದ್ದೀನ್ ಎಂಬುವರ ಮನೆಯಲ್ಲಿ ರಾತ್ರಿ 8.30 ರಿಂದ 9 ರ ನಡುವೆ ಈ ಘಟನೆ ಸಂಭವಿಸಿದ್ದು, ಮನೆಯಲ್ಲಿ  ಸುಮಾರು 19 ಜನರು ವಾಸಿಸುತ್ತಿದ್ದರು. ಸ್ಫೋಟದಿಂದಾಗಿ ಮನೆಯ ಒಂದು ಭಾಗ ಕುಸಿದಿದ್ದು, ಎಂಟು ಜನರನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಯಿತು. ಕೆಲವರ ಸ್ಥಿತಿ ತುಂಬಾ ಗಂಭೀರವಾಗಿದೆ. ಕೆಲವರು ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮೀರತ್ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಧ್ರುವ ಕಾಂತ್ ಠಾಕೂರ್ ತಿಳಿಸಿದ್ದಾರೆ.

ಹೆಚ್ಚಿನ ಜನರು ಅಲ್ಲಿ ಜಮಾಯಿಸಿದ ನಂತರ ನಡೆಯುತ್ತಿರುವ ರಕ್ಷಣ ಕಾರ್ಯಾಚರಣೆಯಲ್ಲಿ ಯಾವುದೇ ಅಡೆತಡೆಗಳನ್ನು ಉಂಟುಮಾಡದಂತೆ ಮತ್ತು ಸ್ಥಳದಿಂದ ದೂರ ಹೋಗುವಂತೆ ಜನರನ್ನು ಪೊಲೀಸ್ ಸಿಬಂದಿಗಳು ಒತ್ತಾಯಿಸುತ್ತಿರುವುದು ಕಂಡುಬಂದಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts