ಪ್ರಚಲಿತ

ಸಂತ ಫಿಲೋಮಿನಾ ಕಾಲೇಜಿನಲ್ಲಿ ಶೈಕ್ಷಣಿಕ ಸಾಧಕರಿಗೆ ಸನ್ಮಾನ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಸಂತ  ಫಿಲೋಮಿನಾ ಕಾಲೇಜು (ಸ್ವಾಯತ್ತ) ಇದರ ವಿದ್ಯಾರ್ಥಿ ಸಂಘದ ವತಿಯಿಂದ ಶೈಕ್ಷಣಿಕ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮಾರ್ಚ್ 27ರಂದು ಕಾಲೇಜಿನ ರಜತ ಮಹೋತ್ಸವ ಸಭಾಂಗಣದಲ್ಲಿ ಜರುಗಿತು.

chennai-shopping
maithri

ಕಾಲೇಜಿನ  ಸಂಚಾಲಕ ಅತಿ ವಂ ಫಾ ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ, ಶೈಕ್ಷಣಿಕ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಯರನ್ನು ಶುಭಹಾರೈಸಿ, ಅವಕಾಶಗಳು ಎಲ್ಲರಿಗೂ ಸಿಗುತ್ತವೆ. ಆದರೆ ನಾವು ಅದನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಇಂದಿನ ದಿನಗಳಲ್ಲಿ ಪ್ರಮುಖವಾದ ಪ್ರಶ್ನೆಯಾಗಿದೆ. ಇಂದು ಹಿಂದೆಂದಿಗಿಂತಲೂ ಹೆಚ್ಚು ಅವಕಾಶಗಳು ಮತ್ತು ಹಂತಗಳು ನಮಗೆ ಲಭ್ಯವಿವೆ. ನಿಮ್ಮ ಪೋಷಕರು ನೀವು ಬೆಳೆಯುವುದನ್ನು ಮತ್ತು ಒಬ್ಬ ಉತ್ತಮ ವ್ಯಕ್ತಿಯಾಗುವುದನ್ನು ನೋಡಲು ಬಯಸುತ್ತಾರೆ. ನಮ್ಮ ಕಾಲೇಜು ಕೂಡ ಉತ್ತಮ ವಾತಾವರಣ ಮತ್ತು ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ. ಇದರ ಸದುಪಯೋಗ ಪಡಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ಸಿಗುವ ಅವಕಾಶಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳಿ ಮತ್ತು ಸಾಧನೆ ಮಾಡಿ. ಪ್ರತಿಯೊಬ್ಬ ಸಾಧಕನ ಹಿಂದೆಯೂ ಅವರ ಶ್ರಮವಿರುತ್ತದೆ. ದೇವರು ನಮಗೆ ಪ್ರತಿಭೆಯನ್ನು ನೀಡಿದ್ದಾನೆ, ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಕಾಲೇಜಿನ ಹಳೆ ವಿದ್ಯಾರ್ಥಿ ಮತ್ತು ಕೆನರಾ ಕಾಲೇಜಿನ ಸಂಚಾಲಕ ಸಿಎ ಜಗನ್ನಾಥ್ ಕಾಮತ್ ಮಾತನಾಡಿ, ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ. ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆ ಮಾಡಿದಾಗ ಅವರ ಪೋಷಕರಿಗೆ ಎಲ್ಲರಿಗಿಂತ ಹೆಚ್ಚು ಸಂತೋಷವಾಗುತ್ತದೆ. ನಾವು ಸಾಧಕರನ್ನು ಸನ್ಮಾನಿಸಿದಾಗ, ಅದು ಇತರ ವಿದ್ಯಾರ್ಥಿಗಳಿಗೆ ‘ನಾವು ಕೂಡ ರ್‍ಯಾಂಕ್ ಪಡೆಯಬೇಕು’ ಎಂಬ ಪ್ರೇರಣೆಯನ್ನು ನೀಡುತ್ತದೆ. ವಿದ್ಯಾರ್ಥಿಗಳು ರ್‍ಯಾಂಕ್ ಸಾಧಿಸುವಲ್ಲಿ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ, ಪ್ರೋತ್ಸಾಹಿಸುವಲ್ಲಿ ಶಿಕ್ಷಕರು ಮತ್ತು ಪೋಷಕರ ಪಾತ್ರ ಬಹಳ ದೊಡ್ಡದು ಎಂದರು.

ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆ್ಯಂಟನಿ ಪ್ರಕಾಶ್‌ ಮೊಂತೇರೊ ಮಾತನಾಡಿ, ಓಟದ ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲರಿಗೂ ಬಹುಮಾನ ಸಿಗದಿರಬಹುದು. ಆದರೆ ಸ್ಪರ್ಧೆಯಲ್ಲಿರುವ ಪ್ರತಿಯೊಬ್ಬರೂ ತಮ್ಮ ಶಕ್ತಿಯ ಮೀರಿ ಪ್ರಯತ್ನ ಪಡುತ್ತಾರೆ. ನಾವೆಲ್ಲರೂ ಪ್ರಥಮ ಸ್ಥಾನ ಪಡೆಯಲು ಸದಾ ಪ್ರಯತ್ನಿಸಬೇಕು. ಆದರೆ ಈ ಸಾಧನೆ ಮಾಡಿದ ನಮ್ಮ ಸಹಪಾಠಿಗಳನ್ನು ಅಭಿನಂದಿಸುವುದು ಮತ್ತು ಅವರಿಗೆ ಶುಭ ಹಾರೈಸುವುದು ನಮ್ಮೆಲ್ಲರ ಕರ್ತವ್ಯ. ಅಂತಹ ಸದ್ಗುಣವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಬೆಂಬಲವಾಗಿ ನಿಂತ ಆಡಳಿತ ಮಂಡಳಿ, ಶಿಕ್ಷಕರು ಮತ್ತು ಪೋಷಕರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯವು 2024-25ನೇ ಸಾಲಿನಲ್ಲಿ ನಡೆಸಿದ ಪದವಿ ಪರೀಕ್ಷೆಗಳಲ್ಲಿ ಕಾಲೇಜಿನ  ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದು, ಕಾಲೇಜಿನ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಬಿ ಎಸ್ಸಿ ವಿಭಾಗದಲ್ಲಿ ಶ್ರೀದೇವಿ ಅವರು 9.89 CGPA ನೊಂದಿಗೆ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಪ್ರಥಮ ರ್ಯಾಂಕ್ ಪಡೆದು ಕಾಲೇಜಿಗೆ ಅತೀವ ಹೆಮ್ಮೆ ತಂದಿದ್ದಾರೆ. ಇದೇ ವಿಭಾಗದ ಆಯಿಷತ್ ಸಮ ಅವರು 9.87 CGPA ನೊಂದಿಗೆ 4ನೇ ರ್ಯಾಂಕ್ ಗಳಿಸಿದ್ದಾರೆ. ಇವರ ಹೆಸರುಗಳನ್ನು  ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಮಾಲಿನಿ ಅವರು ವಾಚಿಸಿ, ಪರಿಚಯಿಸಿದರು. ಬಿಎ ವಿಭಾಗದಲ್ಲಿ ಮಾದ್ರಿ ಅರ್ಚನಾ ಅವರು ವಿಶ್ವವಿದ್ಯಾನಿಲಯಕ್ಕೆ 8ನೇ ರ್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಇವರ ಹೆಸರನ್ನು ಬಿ ಎ ವಿಭಾಗದ ಮುಖ್ಯಸ್ಥರಾದ ಡಾ  ನೋರ್ಬರ್ಟ್ ಮಸ್ಕರೇನ್ಹಸ್ ಅವರು ಘೋಷಿಸಿದರು. ಬಿ ಬಿ ಎ ವಿಭಾಗದಲ್ಲಿ ಶಾಯಿರಿನ್ ಬಾನು ಅವರು 9.76 CGPA ಗಳಿಸಿ 10ನೇ ರ್ಯಾಂಕ್ ಪಡೆದಿದ್ದಾರೆ. ಇವರ ಹೆಸರನ್ನು ಉಪನ್ಯಾಸಕರಾದ ಪ್ರಶಾಂತ್ ರೈ ಅವರು ವಾಚಿಸಿದರು.

ಲಿಲಿತ ಕಲಾ  ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಗಳಾದ ಡಾ ರಾಧಾಕೃಷ್ಣ ಗೌಡ ಸ್ವಾಗತಿಸಿ, ಸ್ಪರ್ಲ್ ಫಿಯೋನಾ ಪಿರೇರಾ ವಂದಿಸಿದರು. ಪ್ರಥಮ ಬಿ ಎಸ್ಸಿ ವಿದ್ಯಾರ್ಥಿನಿ ಶ್ರೀವಿದ್ಯಾ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಇಬ್ಬರು ಗೆಳತಿಯರ ಜೊತೆ ಮನೆಯಲ್ಲಿದ್ದೆ: ಸುದ್ದಿಗೋಷ್ಠಿಯಲ್ಲಿ ಅರಿವಿಲ್ಲದೇ ಮಾತನಾಡಿದ ಕೆಕೆಆರ್ ಆಟಗಾರ!!

ಐಪಿಎಲ್ ಟರ‍್ನಮೆಂಟ್ ಶುರುವಾಗುವ ಸಿದ್ಧತೆಯಲ್ಲಿದ್ದಾಗಲೇ ಕೆಕೆಆರ್ ಆಟಗಾರ ಬ್ರಾವೋ ಮಾತು ಇದೀಗ…