ಪ್ರಚಲಿತ

ಸುಪ್ತ ಪ್ರತಿಭೆ ಬೆಳಕಿಗೆ ತರಲು ಚಿತ್ರಕಲಾ ಸ್ಪರ್ಧೆ | ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಿಸಿ ಲಕ್ಷ್ಮೀಕಾಂತ್ ಬಿ. ಆಚಾರ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ನಮ್ಮೊಳಗೆ ಸುಪ್ತವಾಗಿರುವ ಪ್ರತಿಭೆಯನ್ನು ಇನ್ನಷ್ಟು ಕ್ರಿಯಾತ್ಮಕಗೊಳಿಸುವ ಕಲೆಯೇ ಚಿತ್ರಕಲೆ. ಮಕ್ಕಳಲ್ಲಿ, ಸಾರ್ವಜನಿಕರಲ್ಲಿ ಈ ಕಲೆಯ ಜಾಗೃತಿ ಅಗತ್ಯ ಎನ್ನುವ ದೃಷ್ಟಿಯಲ್ಲಿ ಈ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್’ನ ಆಡಳಿತ ಪಾಲುದಾರರಾದ ಲಕ್ಷ್ಮೀಕಾಂತ್ ಬಿ. ಆಚಾರ್ಯ ಹೇಳಿದರು.

ಪುತ್ತೂರು ಜಿಎಲ್ ವನ್ ಮಾಲ್ ನಲ್ಲಿ ಜಿಎಲ್ ಮಾಲ್ ಉತ್ಸವದ ಅಂಗವಾಗಿ ನಡೆದ ಚಿತ್ರಕಲಾ ಸ್ಪರ್ಧೆಯ ಸಮಾರೋಪದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.

ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧೆ ಏರ್ಪಡಿಸಿರುವಂತೆ ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಒತ್ತು ನೀಡಲು ಸಾರ್ವಜನಿಕ ವಿಭಾಗವನ್ನು ಇಟ್ಟಿದ್ದೇವು. ಇದರೊಂದಿಗೆ ವಿಶೇಷವಾಗಿ ದಿವ್ಯಾಂಗ ವಿಭಾಗವನ್ನು ಇಟ್ಟಿದ್ದು, ಅವರಿಗೂ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದರು.

ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷ ಕುಸುಮಾಧರ್ ಉಪಸ್ಥಿತರಿದ್ದರು.

ಕ್ಲಬ್ ಕಾರ್ಯದರ್ಶಿ ಅಭೀಷ್ ವಂದಿಸಿದರು. ಪೂರ್ವಾಧ್ಯಕ್ಷ ಪಶುಪತಿ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.

ಚಿತ್ರಕಲಾ ಸ್ಪರ್ಧೆಯ ವಿಜೇತರ ವಿವರ ಈ ಕೆಳಗಿನಂತಿದೆ.

ಎಲ್.ಕೆ.ಜಿ, ಯು.ಕೆ.ಜಿ. ವಿಭಾಗ:

ಸಂತ ಫಿಲೋಮಿನಾ ಸ್ಕೂಲಿನ ಕೆ.ಎಸ್. ನಿಶಿಕಾ ಪ್ರಥಮ, ಬೆಳ್ಳಾರೆ ಕೆಪಿಎಸ್ ಸ್ಕೂಲಿನ ಪೂರ್ವಜ್ ದ್ವಿತೀಯ, ಪುತ್ತೂರು ಮಾಯಿ ದೇ ದೇವುಸ್ ಸ್ಕೂಲಿನ ಫಾತಿಮತ್ ಶಝ್’ಮಾ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.

ಪ್ರಾಥಮಿಕ ವಿಭಾಗ:

ಸಂತ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಸುಶಾಂತ್ ಜೆ. ಪ್ರಥಮ, ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ಕುಶಿತ್ ಮಲ್ಲಾರ ದ್ವಿತೀಯ, ಹಾರಾಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಪ್ರಸ್ತುತ್ ಆರ್. ಶೆಟ್ಟಿ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.

ಪ್ರೌಢಶಾಲಾ ವಿಭಾಗ:

ಕುಳಾಯಿ ಅಂಕುರ್ ಸ್ಕೂಲಿನ ಕೀರ್ತನ್ ಪ್ರಥಮ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅವನಿ ಎಸ್.ವಿ. ದ್ವಿತೀಯ, ಅಗ್ರಾರ್ ಹೋಲಿ ಕ್ಸೇವಿಯರ್ ಆಂಗ್ಲ ಮಾಧ್ಯಮ ಶಾಲೆಯ ಕೃಪಾ ಆರ್.ಕೆ. ಕೋಟ್ಯಾನ್ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.

ಕಾಲೇಜು ವಿಭಾಗ:

ವಿವೇಕಾನಂದ ಕಾಲೇಜಿನ ಮಹಾಲಸಾ ಕೋಡಿಕಲ್ ಪ್ರಥಮ, ಕೊಂಬೆಟ್ಟು ಜಿ.ಪಿ.ಯು.ಸಿ.ಯ ಪ್ರಜ್ವಲ್ ದ್ವಿತೀಯ, ಅಂಬಿಕಾ ಕಾಲೇಜಿನ ಆದೇಶ್ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.

ಸಾರ್ವಜನಿಕ ವಿಭಾಗ:

ಹರ್ಷಿತ್ ವಿ. ಹಾರಾಡಿ ಪುತ್ತೂರು ಪ್ರಥಮ, ಪ್ರಖ್ಯಾತ್ ಆಚಾರ್ಯ ಹಿರೇಬಂಡಾಡಿ ಉಪ್ಪಿನಂಗಡಿ ದ್ವಿತೀಯ, ಲಾವಣ್ಯ ಭಟ್ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.

ದಿವ್ಯಾಂಗ ವಿಭಾಗ:

ರಕ್ಷಿತಾ ಆರ್. ಪ್ರಥಮ, ಸುಹಾನ್ ರೈ ದ್ವಿತೀಯ, ಯು. ಶ್ರೀದೇವಿ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಫೆ. 11ಕ್ಕೆ ಕರ್ನಾಟಕ ರಾಜ್ಯ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದಿಂದ ಮಂಗಳೂರು ಪುರಭವನದಲ್ಲಿ ರಾಜ್ಯ ಸಮಾವೇಶ

ಪುತ್ತೂರು: ಕರ್ನಾಟಕ ರಾಜ್ಯ ಕನ್ನಡ ಉಳಿಸಿ, ಬೆಳೆಸಿ ಅಭಿಯಾನ ಇದರ ವತಿಯಿಂದ ಕನ್ನಡ ಮನಸ್ಸುಗಳ…

ಚಾಮುಂಡಿ ಬೆಟ್ಟದಲ್ಲಿ ಕಾಣಿಸಿಕೊಂಡ ಬೆಂಕಿ ನಂದಿಸಲು ಹರಸಾಹಸ! 100 ಎಕರೆಯಷ್ಟು ಅರಣ್ಯ ಪ್ರದೇಶ ಬೆಂಕಿಗಾಹುತಿ!

ಕಿಡಿಗೇಡಿಗಳ ಕೃತ್ಯದಿಂದ ಚಾಮುಂಡಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡು…