ಅಪರಾಧಪ್ರಚಲಿತ

ಜಾತಿ ನಿಂದನೆ ಆರೋಪ: ವಕೀಲ ಜಗದೀಶ್ ಬಂಧನ!!

ಈ ಸುದ್ದಿಯನ್ನು ಶೇರ್ ಮಾಡಿ

ಜಾತಿ ನಿಂದನೆ ಆರೋಪದಡಿ ಬೆಂಗಳೂರಿನ ಕೊಡಿಗೇಹಳ್ಳಿ ಠಾಣೆ ಪೋಲೀಸರು ವಕೀಲ ಕೆ.ಎನ್. ಜಗದೀಶ್ ಕುಮಾರ್ ಅವರನ್ನು ಬಂಧಿಸಿದ್ದಾರೆ.

akshaya college

ಮಂಜುನಾಥ್‌ ಎಂಬುವವರು ನೀಡಿದ್ದ ದೂರಿನ ಮೇರೆಗೆ ಎಫ್‌ಐಆರ್ (FIR) ದಾಖಲು ಮಾಡಲಾಗಿತ್ತು. ಇಂದು (ಆಗಸ್ಟ್ 22) ಬೆಂಗಳೂರಿನಲ್ಲಿ ಲಾಯರ್ ಜಗದೀಶ್ ಅವರನ್ನು ಬಂಧಿಸಲಾಗಿದೆ. ಬೆಂಗಳೂರಿನ ಕೊಡಿಗೆಹಳ್ಳಿ ಠಾಣೆ ಪೊಲೀಸರಿಂದ ವಕೀಲ ಜಗದೀಶ್ ಅವರ ಬಂಧನ ಆಗಿದೆ. ಅವರನ್ನು ಠಾಣೆಗೆ ಕರೆತಂದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಮಂಜುನಾಥ್‌ ಎಂಬ ವ್ಯಕ್ತಿ ನೀಡಿದ್ದ ದೂರಿನ ಅನ್ವಯ, ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 196 ಮತ್ತು 299 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಲಾಯರ್ ಜಗದೇಶ್ ಅವರ ಜಾತಿಯ ಕುರಿತ ಈ ರೀತಿಯ ಹೇಳಿಕೆಗಳು ಸಮಾಜದಲ್ಲಿ ಬಿರುಕು ಮತ್ತು ದ್ವೇಷಕ್ಕೆ ಕಾರಣವಾಗುವ ಸಾಧ್ಯತೆಯಿದೆ ಎಂದು ಮಂಜುನಾಥ್ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಹೀಗಾಗಿ ಈ ಪ್ರಕರಣದ ತನಿಖೆಯನ್ನು ಪೊಲೀಸರು ಪ್ರಾರಂಭಿಸಿದ್ದು, ಆರೋಪದ ಸತ್ಯಾಸತ್ಯತೆಯನ್ನು ಈಗಾಗಲೇ ಪರಿಶೀಲಿಸಿದ್ದಾರೆ.ಆ ಬಳಿಕ ಇಂದು (ಆ.22) ಸಂಜೆ ಕೋಡಿಗೆಹಳ್ಳಿ ಪೊಲೀಸರು ಲಾಯ‌ರ್ ಜಗದೀಶ್ ರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದ ಬಳಿಕ ಬಂಧನ ಮಾಡುವ ಸಾಧ್ಯತೆ ದಟ್ಟವಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪುತ್ತೂರು ತಹಸೀಲ್ದಾರ್ ಕಚೇರಿಗೆ ಲೋಕಾಯುಕ್ತ ದಾಳಿ!! ಬಲೆಗೆ ಬಿದ್ದ ಎಫ್‌ಡಿಎ ಸುನೀಲ್, ತಲೆಮರೆಸಿಕೊಂಡ ತಹಸೀಲ್ದಾರ್!!

ಪುತ್ತೂರು: ತಾಲೂಕಿನ ಆಡಳಿತ ಸೌಧದಲ್ಲಿರುವ ತಹಶೀಲ್ದಾರ್ ಕಚೇರಿಯ ಭೂ ಸುಧಾರಣಾ ಶಾಖೆಯ ಎಫ್.ಡಿ.ಎ…

ಪೆರ್ನಾಜೆ ಬಳಿ ಬಸ್ – ಕಾರು ಅಪಘಾತ! ರಸ್ತೆಯಲ್ಲಿ ಚೆಲ್ಲಿದ್ದ ತೈಲಕ್ಕೆ ಜಾರಿದ ಕೆವಿಜಿ ನಿವೃತ್ತ ಪ್ರಾಂಶುಪಾಲರಿದ್ದ ಕಾರು!!

ಪುತ್ತೂರು: ಸುಳ್ಯದಿಂದ ಪುತ್ತೂರಿಗೆ ಆಗಮಿಸುತ್ತಿದ್ದ ಕಾರು ಹಾಗೂ ಮೈಸೂರು ಕಡೆ ತೆರಳುತ್ತಿದ್ದ…