ಪ್ರಚಲಿತ

ಜಿ.ಎಲ್. ಜ್ಯುವೆಲ್ಲರ್ಸ್’ನಲ್ಲಿ ಸ್ವರ್ಣಧಾರ ಚಿನ್ನಾಭರಣ ಹೂಡಿಕೆಯ ಉಳಿತಾಯ ಯೋಜನೆ ಉದ್ಘಾಟನೆ

ಗ್ರಾಹಕರ ಬಹುಬೇಡಿಕೆಯ ಸ್ವರ್ಣಧಾರಾ ಚಿನ್ನಭರಣ ಹೂಡಿಕೆಯ ಉಳಿತಾಯ ಯೋಜನೆಯನ್ನು ಪುತ್ತೂರಿನ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್'ನಲ್ಲಿ ಗುರುವಾರ ಉದ್ಘಾಟಿಸಲಾಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಗ್ರಾಹಕರ ಬಹುಬೇಡಿಕೆಯ ಸ್ವರ್ಣಧಾರಾ ಚಿನ್ನಭರಣ ಹೂಡಿಕೆಯ ಉಳಿತಾಯ ಯೋಜನೆಯನ್ನು ಪುತ್ತೂರಿನ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್’ನಲ್ಲಿ ಗುರುವಾರ ಉದ್ಘಾಟಿಸಲಾಯಿತು.

akshaya college

ಸ್ವರ್ಣಧಾರಾ ಯೋಜನೆಯ ಬಗ್ಗೆ ಮಾತನಾಡಿದ ಸಂಸ್ಥೆಯ ಮಾಲಕರಾದ ಬಲರಾಮ ಆಚಾರ್ಯ, ಸ್ವರ್ಣಧಾರಾ ಯೋಜನೆಗೆ ಗ್ರಾಹಕರಿಂದ ಉತ್ತಮ ಬೇಡಿಕೆ ಇದೆ. ಹಾಗಾಗಿ ಗ್ರಾಹಕರಿಗೆ ಇನ್ನಷ್ಟು ಅನುಕೂಲತೆ ಆಗುವಂತೆ ಯೋಜನೆಯನ್ನು ಒಂದಷ್ಡು ಬದಲಾವಣೆಯೊಂದಿಗೆ ಅಪ್ಡೇಟ್ ಮಾಡಿ ಪರಿಚಯಿಸುತ್ತಿದ್ದೇವೆ. ಇಂದು ಉದ್ಘಾಟನೆಗೊಂಡ ಹೊಸ ಸ್ಕೀಂನಲ್ಲಿ ಗ್ರಾಹಕರು ಪ್ರತಿ ತಿಂಗಳು ಹೂಡಿಕೆ ಮಾಡುವ ಮೊತ್ತದ ಚಿನ್ನವನ್ನು ತೆಗೆದಿಡಲಾಗುವುದು. ಅಂದರೆ ಇಂದು ಹೂಡಿಕೆ ಮಾಡಿದರೆ, ಇಂದಿನ ಚಿನ್ನದ ಧಾರಣೆಯಲ್ಲೇ ಇಂದೇ ಚಿನ್ನ ಖರೀದಿ ಮಾಡಲಾಗುವುದು. ಇದರಿಂದ ಏರಿಕೆಯಾಗುತ್ತಿರುವ ಚಿನ್ನದ ಧಾರಣೆಯ ಹೊರೆ ಗ್ರಾಹಕರ ಮೇಲೆ ಬೀಳುವುದಿಲ್ಲ. ಮಾತ್ರವಲ್ಲ, ಗ್ರಾಹಕರಿಗೆ ಬೋನಸ್ ಕೂಡ ಸಿಗುತ್ತದೆ. ಗ್ರಾಹಕರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ವಿನಂತಿಸಿದರು.

ಈ ಹಿಂದಿನ ಸ್ಕೀಂನಲ್ಲಿ, ಪ್ರತಿ ತಿಂಗಳು ಮೊತ್ತ ಪಾವತಿಸಿ, ವರ್ಷದ ಕೊನೆಗೆ ಚಿನ್ನದ ರೂಪದಲ್ಲಿ ಅದನ್ನು ಗ್ರಾಹಕರ ಮುಂದಿಡಲಾಗುತ್ತಿತ್ತು. ಸ್ಕೀಂನ ಕೊನೆ ದಿನದ ಚಿನ್ನ ಖರೀದಿ ಮಾಡುವಾಗ ಅಂದಿನ ಧಾರಣೆಯಷ್ಟೇ ಚಿನ್ನವನ್ನು ಗ್ರಾಹಕರಿಗೆ ನೀಡಲಾಗುತ್ತಿತ್ತು. ಇಂದು‌ ಪ್ರತಿದಿನ ಚಿನ್ನ ಧಾರಣೆ ಹೆಚ್ಚಿಸಿಕೊಳ್ಳುತ್ತಿದೆ. ಗ್ರಾಹಕರು ಹೂಡಿಕೆ ಮಾಡಿದ ದರಕ್ಕೆ ಸರಿಸಮನಾಗಿ ಚಿನ್ನ ನೀಡಬೇಕು ಎನ್ನುವ ನೆಲೆಯಲ್ಲಿ ಇರೀಗ ಸ್ವರ್ಣಧಾರಾ ಯೋಜನೆಯನ್ನು ಅಪ್ಡೇಟ್ ಮಾಡಿ ಗ್ರಾಹಕರ ಮುಂದಿಡುತ್ತಿದ್ದೇವೆ ಎಂದು ವಿವರಿಸಿದರು.

ಮುಖ್ಯ ಅತಿಥಿಯಾಗಿದ್ದ ಬಿ.ಎಸ್.ಎನ್.ಎಲ್. ನಿವೃತ್ತ ಉದ್ಯೋಗಿ ಲಕ್ಷ್ಮೀಶ್ ಪಾರ್ಲ ಮಾತನಾಡಿ, ಅನ್ನದಾತ ಸಂಸ್ಥೆಯಾಗಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್, ಗ್ರಾಹಕರ ನಂಬಿಕೆಯನ್ನು ಉಳಿಸಿಕೊಂಡಿದೆ. ರಾಯರನ್ನು ಭಜಿಸುವ ದಿನವಾದ ಗುರುವಾರ ಸ್ವರ್ಣಧಾರ ಯೋಜನೆಯನ್ನು ಅನಾವರಣ ಮಾಡಿರುವುದು ಸಂತೋಷದ ವಿಷಯ ಎಂದರು.

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಜೊತೆಗಿನ ತಮ್ಮ ನಂಟನ್ನು ಬಿಚ್ಚಿಟ್ಟ ಅವರು, 20 ವರ್ಷಗಳ ಹಿಂದೆ ಈ ಜಿಲ್ಲೆಗೆ ಅಳಿಯನಾಗಿ ಬಂದ ಪ್ರಾರಂಭದಲ್ಲಿ ಪರಿಚಯವಾದವರು ಬಲರಾಮ ಆಚಾರ್ಯ. ಆಗಿನ ಸಂಬಳದಲ್ಲಿ ಕೂಡಿಟ್ಟ ಹಣದಲ್ಲಿ ಮಡದಿಗೆ ಒಂದು ಬಳೆ ತೆಗೆದೆ. ಅದರ ವಿನ್ಯಾಸ ಅದ್ಭುತ. ಅದು ಇಂದು ಇದೆ ಎಂದು ಹರ್ಷ ವ್ಯಕ್ತಪಡಿಸಿದರು.

ಜಾಗದ ಬದಲಿಗೆ ಚಿನ್ನಕ್ಕೆ ಹೂಡಿಕೆ ಮಾಡಿದರೆ ತುಂಬಾ ಲಾಭ. ಬೋನಸ್ ರೀತಿಯಲ್ಲೂ ನಮಗೆ ಲಾಭ ಸಿಗುತ್ತದೆ. ಇದರ ಬದಲಿಗೆ ಜಾಗದ ಮೇಲೆ ಹೂಡಿಕೆ ಮಾಡಿದರೆ, ಫೇಸ್ ವ್ಯಾಲ್ಯೂ ಮೇಲೆ ಬೆಲೆ ನಿಗದಿ ಆಗುತ್ತದೆ. ಚಿನ್ನದ ಹೂಡಿಕೆ ಅಪತ್ಕಾಲದಲ್ಲಿ ಪ್ರಯೋಜನಕಾರಿ. ಮಾತ್ರವಲ್ಲ, ಧಾರಣೆಯಲ್ಲಿ ಕಡಿಮೆ ಎಂದೂ ಆಗುವುದಿಲ್ಲ. ಆದ್ದರಿಂದ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಅನಾವರಣ ಮಾಡಿರುವ ಸ್ವರ್ಣಧಾರಾ ಯೋಜನೆಯ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳುವಂತೆ ವಿನಂತಿಸಿದರು.

ಪುತ್ತೂರಿನ ಸೊಸೆ, ಸೂರತ್’ನಲ್ಲಿ ಹೋಟೆಲ್ ಉದ್ಯಮಿಯಾಗಿರುವ ಮಾನಸ ಪ್ರವೀಣ್ ಮಾತನಾಡಿ, ಚಿಕ್ಕಂದಿನಿಂದಲೇ ನಾವು ಇಲ್ಲಿನ ಗ್ರಾಹಕರು. ಸೂರತ್ ನಲ್ಲಿ ಇದ್ದರೂ, ವರ್ಷಕ್ಕೊಮ್ಮೆ ಬರುವಾಗ ಚಿನ್ನ ಖರೀದಿಯನ್ನು ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್’ನಲ್ಲೇ ಮಾಡುತ್ತೇವೆ. ಹಾಗಾಗಿ ಸೂರತ್ ನಲ್ಲೇ ಈ ಸಂಸ್ಥೆಯ ಬ್ರಾಂಚ್ ಓಪನ್ ಆಗಿ, ದೇಶಾದ್ಯಂತ ಸಂಸ್ಥೆ ಬೆಳಗಲಿ ಎಂದು ಹಾರೈಸಿದರು.

ಸ್ವರ್ಣಧಾರಾ ಸ್ಕೀಂ ಉತ್ತಮ ಯೋಜನೆಯಾಗಿದ್ದು, ಗ್ರಾಹಕರು ಇದಕ್ಕೆ ತುಂಬು ಹೃದಯದ ಬೆಂಬಲ ನೀಡುತ್ತಾರೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಪಾಲುದಾರರಾದ ಸುಧನ್ವ ಬಿ. ಆಚಾರ್ಯ, ಫ್ಲೋರ್ ಮ್ಯಾನೇಜರ್’ಗಳಾದ ಶೇಖರ್, ಪುರಂದರ, ಮಾರ್ಕೆಟಿಂಗ್ ಮ್ಯಾನೇಜರ್ ಕೀರ್ತನ್ ಉಪಸ್ಥಿತರಿದ್ದರು.

ಸಂಸ್ಥೆಯ ಸಿಬ್ಬಂದಿಗಳಾದ ಉದಯ್, ಮಮತಾ ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಕೀರ್ತನ್ ಸಹಕರಿಸಿದರು. ಭಾರ್ಗವ ಕಾರ್ಯಕ್ರಮ ನಿರೂಪಿಸಿದರು.

 

 


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಅನಧಿಕೃತ ಶಾಲೆಗಳ ಸಂಖ್ಯೆ ಬಹಿರಂಗಪಡಿಸಿದ ಸರ್ಕಾರ: ಕಠಿಣ ಕ್ರಮದ ಸೂಚನೆ | ದ.ಕ., ಉಡುಪಿಯಲ್ಲೂ ಇದೆ ಅಕ್ರಮ ಶಾಲೆಗಳು!!

ಬೆಂಗಳೂರು: ರಾಜ್ಯದಲ್ಲಿ ಅನಧಿಕೃತ ಶಾಲೆಗಳ ಸಂಖ್ಯೆಯನ್ನು‌ ಸರಕಾರ ಬಹಿರಂಗಪಡಿ ಸಿದ್ದು, ಶಾಲಾ…

ಜುಲೈ 12ರಂದು ರಾಷ್ಟ್ರೀಯ ಲೋಕ ಅದಾಲತ್ | ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಪುತ್ತೂರಿನ ನ್ಯಾಯಾಧೀಶರು

ಪುತ್ತೂರು: ರಾಜೀ ಸಂದಾನದ ಮೂಲಕ ಬಗೆಹರಿಸಿಕೊಳ್ಳಬಹುದಾದ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು…

ಅಂಬಿಕಾದ ಅಡುಗೆಮನೆಗೆ ಆಧುನಿಕ ಸ್ಪರ್ಶ! ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಂಬಿಕಾ ಶಿಕ್ಷಣ ಸಂಸ್ಥೆಗಳಿಂದ ಹೈಟೆಕ್ ವ್ಯವಸ್ಥೆ

ಪುತ್ತೂರು: ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ…