pashupathi
ಅಪರಾಧಪ್ರಚಲಿತ

ಡ್ರಗ್ಸ್ ಹಾವಳಿ: ಬೇಲಿಯೇ ಎದ್ದು ಹೊಲ ಮೇಯ್ದಂತಾಯ್ತು ಪೊಲೀಸರ ಈ ಕೃತ್ಯ!!

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಡ್ರಗ್ಸ್ ಹಾವಳಿಯನ್ನು ಮಟ್ಟ ಹಾಕಬೇಕಿದ್ದ ಮಹಿಳಾ ಪೊಲೀಸ್ ಕಾನ್ ಸ್ಟೇಬಲ್ ಬಳಿ 17.71 ಗ್ರಾಂ ಮಾದಕ ದ್ರವ್ಯ ಪತ್ತೆಯಾದ ಹಿನ್ನೆಲೆಯಲ್ಲಿ ಮಹಿಳಾ ಕಾನ್ ಸ್ಟೇಬಲ್‌ ಅಮನದೀಪ್ ಕೌರ್ ಅವರನ್ನು ಬಂಧಿಸಿ ಸೇವೆಯಿಂದ ವಜಾಗೊಳಿಸಿರುವ ಘಟನೆ ಪಂಜಾಬ್ ನ ಭಟಿಂಡಾದಲ್ಲಿ ನಡೆದಿದೆ.

akshaya college

ರಾಜ್ಯದಲ್ಲಿ ಡ್ರಗ್ಸ್‌ ಹಾವಳಿ ಮಿತಿಮೀರಿದ್ದು ಇದನ್ನು ಮಟ್ಟ ಹಾಕಲು ಪೊಲೀಸ್‌ ಇಲಾಖೆ ನಾನಾ ರೀತಿಯ ಕಸರತ್ತನ್ನು ನಡೆಸುತ್ತಿರುವ ಬೆನ್ನಲ್ಲೇ ಮಹಿಳಾ ಪೊಲೀಸ್‌ ಕಾನ್

ಸ್ಟೇಬಲ್‌ ವಾಹನದಲ್ಲಿ ಮಾದಕ ದ್ರವ್ಯ ಪತ್ತೆಯಾಗಿದೆ. ರಾಜ್ಯ ಸರಕಾರ ಮಾದಕ ದ್ರವ್ಯ ವಿರೋಧಿ ಅಭಿಯಾನ ನಡೆಸುತ್ತಿದ್ದು ಈ ನಡುವೆ ಖಚಿತ ಮಾಹಿತಿಯ ಆಧಾರದ ಮೇಲೆ ಬಟಿಂಡಾದ ಬಾದಲ್ ಫೈಓವರ್ ಬಳಿ ನಿಂತಿದ್ದ ಪೊಲೀಸ್ ಕಾನ್ ಸ್ಟೇಬಲ್ ಕೌರ್ ಅವರ ಕಾರನ್ನು ಪರಿಶೀಲನೆ ನಡೆಸಿದ ವೇಳೆ ಕಾರಿನಲ್ಲಿ 17.71 ಗ್ರಾಂ ತೂಕದಷ್ಟು ಮಾದಕ ದ್ರವ್ಯ ಪತ್ತೆಯಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೌ‌ರ್ ಅವರನ್ನು ವಶಕ್ಕೆ ಪಡೆದು ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಮಾದಕವಸ್ತು ಸಂಬಂಧಿತ ಅಪರಾಧಗಳಲ್ಲಿ ಭಾಗಿಯಾಗಿರುವ ಯಾರೇ ಆಗಿದ್ದರು ಅವರನ್ನು ಹುದ್ದೆಯಿಂದ ವಜಾಗೊಳಿಸುವಂತೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದ್ದು ಎಡಿಎ ಕಾರಣ ಕೌರ್ ಅವರು ಅಪರಾಧ ಎಸಗಿದ್ದು ತನಿಖೆಯಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಪೊಲೀಸ್‌ ಮಹಾನಿರೀಕ್ಷಕ ಸುಖಚೈನ್ ಸಿಂಗ್ ಗಿಲ್ ಖಚಿತಪಡಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 103