pashupathi
ಕೃಷಿ

ದೇಶಾದ್ಯಂತ ವಿಸ್ತರಣೆಯಾಗಲಿದೆ ದಕ ತೆಂಗು ರೈತ ಉತ್ಪಾದಕರ ಕಂಪೆನಿ! | ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಕುಸುಮಾಧರ ಎಸ್.ಕೆ. | ತೆಂಗಿನಲ್ಲಿ 12ರಷ್ಟು ವಿಧದ ಔಷಧೀಯ ಗುಣಗಳಿವೆ: ಬದನಾಜೆ ಶಂಕರ ಭಟ್

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ತೆಂಗಿನಲ್ಲಿ 12ರಷ್ಟು ಔಷಧೀಯ ಗುಣಗಳಿವೆ. ಇದರ ಕೊತ್ತಳಿಗೆಯಲ್ಲೂ ಉಪ್ಪಿನ ಅಂಶವಿದೆ. ಶ್ರೇಷ್ಠತೆಯನ್ನು ಮೈಗೂಡಿಸಿಕೊಂಡಿರುವ ತೆಂಗನ್ನು ಉಳಿಸಿ, ಬೆಳೆಸುವುದು ತುಂಬಾ ಅಗತ್ಯ ಎಂದು ತೆಂಗು ರೈತ ಉತ್ಪಾದಕರ ಕಂಪನಿಯ ಸಲಹೆಗಾರ ಬದನಾಜೆ ಶಂಕರ ಭಟ್ ಹೇಳಿದರು.

akshaya college

ಗುರುವಾರ ಜೈನ ಭವನದಲ್ಲಿ ನಡೆದ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಕಂಪನಿಯ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಶ್ರೀಲಂಕಾ ಹಾಗೂ ಇತರ ದೇಶಗಳಿಂದ ಆಗಮಿಸಿದ ತೆಂಗು ಬೆಳೆ, ಉಪ್ಪಿನ ಅಂಶ ಇರುವ ಸಮುದ್ರದ ತಟದಲ್ಲಿ ಆರಂಭವಾಯಿತು. ತೆಂಗಿನ ಮರಕ್ಕೆ ಉಪ್ಪು ಅಗತ್ಯ. ಇದಕ್ಕೆ ಧಾರ್ಮಿಕ ಮಹತ್ವವೂ ಇದೆ ಎಂದರು.

ಸಲಹೆಗಾರ ಕಡಮಜಲು ಸುಭಾಷ್ ರೈ ಮಾತನಾಡಿ, ತೆಂಗು ಧಾರಣೆ ಇಂದು 70 ರೂ.ಗೆ ತಲುಪಿದೆ. ಈ ಧಾರಣೆಯನ್ನು ಎತ್ತರಿಸಿದ ಕೀರ್ತಿ ತೆಂಗು ರೈತ ಉತ್ಪಾದಕರ ಕಂಪೆನಿಗೆ ಸಲ್ಲುತ್ತದೆ ಎಂದರು.

ದೇಶಾದ್ಯಂತ ವಿಸ್ತರಣೆ:

ಅಧ್ಯಕ್ಷತೆ ವಹಿಸಿದ್ದ ತೆಂಗು ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಕುಸುಮಾಧರ ಎಸ್.ಕೆ. ಮಾತನಾಡಿ, ಸಂಸ್ಥೆಯನ್ನು ದೇಶಾದ್ಯಂತ ವಿಸ್ತರಿಸಲು ಯೋಜನೆ ರೂಪಿಸಿದ್ದು, ಈಗಾಗಲೇ 10 ಸಾವಿರಕ್ಕೂ ಹೆಚ್ಚು ರೈತ ಸದಸ್ಯರು ಸಂಸ್ಥೆಯಲ್ಲಿ ಪಾಲು ಬಂಡವಾಳ ಹೊಂದಿದ್ದಾರೆ. ಸಿಪಿಸಿಆರ್ ಐ, ವಿಜ್ಞಾನಿಗಳು ಹಾಗೂ ಕೃಷಿ ತಜ್ಞರನ್ನು ಒಳಗೂಡಿಸಿಕೊಂಡು 4 ವರ್ಷಕ್ಕೆ ಕಾಲಿಡುತ್ತಿದ್ದೇವೆ. ತೆಂಗಿನಮರದ ಬೇರಿನಿಂದ ಗರಿಯವರೆಗೆ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಬಹುದು ಎನ್ನುವುದನ್ನು ಸಂಸ್ಥೆ ಸಾಬೀತುಪಡಿಸಿದೆ. ಕಲ್ಪರಸ, ಐಸ್‌ಕ್ರೀಮ್, ತೆಂಗಿನೆಣ್ಣೆ, ಮುಂತಾದ ಉತ್ಪನ್ನಗಳನ್ನು ಹೊರತಂದಿದ್ದೇವೆ. ನಮ್ಮಲ್ಲಿ ತರಬೇತಿ ಪಡೆದು ಗೆರಟೆಯಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾಡಿ ತಿಂಗಳಿಗೆ 30 ರಿಂದ 40 ಸಾವಿರ ರೂ. ಉತ್ಪತ್ತಿ ಮಾಡುವ ರೈತ ಮಹಿಳೆಯರಿದ್ದಾರೆ. ಮುಂದಿನ ದಿನದಲ್ಲಿ ತೆಂಗಿಗೆ 100 ರೂ. ಬೆಲೆ ಆಗುತ್ತದೆ ಎಂದರು.

ಲೆಕ್ಕಪರಿಶೋಧಕ ಕಿರಣ್ ಅವರು 2023-24ನೇ ಸಾಲಿನ ಹಣಕಾಸು ವ್ಯವಹಾರಗಳನ್ನು ವಿವರಿಸಿ, ಕಂಪನಿಯು ಒಟ್ಟು 5 ಕೋಟಿ ರೂ.ನಷ್ಟು ವ್ಯವಹಾರ ನಡೆಸಿದೆ ಎಂದರು.

ಕಂಪನಿಯ ಸಲಹಾ ಸಮಿತಿ ಸದಸ್ಯರಾದ ನಿತ್ಯಾನಂದ ಮುಂಡೋಡಿ, ಚಿದಾನಂದ ಬೈಲಾಡಿ, ಕುಮಾರ್ ಪೆರ್ನಾಜೆ, ಪ್ರಭಾಕರ ಮಯ್ಯ, ಮಹಾಲಿಂಗ ನಾಯ್ಕ, ಗಣಪಯ್ಯ ಭಟ್, ಡೇವಿಡ್, ಪೂವಪ್ಪ ಗೌಡ ಐತ್ತೂರು, ನಿರ್ದೇಶಕರಾದ ಲತಾ ಪಿ., ವರ್ಧಮಾನ ಶೆಟ್ಟಿ, ಚಂದ್ರಹಾಸ, ಹರಿಪ್ರಸಾದ ಟಿ.ಬಿ., ವಸಂತ ಕೆ. ಉಪಸ್ಥಿತರಿದ್ದರು.

ನವ್ಯಾ ಅಮೈ ವಾರ್ಷಿಕ ವರದಿ ವಾಚಿಸಿದರು. ಸರಸ್ವತಿ ಪ್ರಾರ್ಥಿಸಿ, ಉಪಾಧ್ಯಕ್ಷ ಗಿರಿಧರ ಸ್ಕಂದ ಸ್ವಾಗತಿಸಿದರು. ನಿರ್ದೇಶಕ ತಿಮ್ಮಪ್ಪ ವಿ. ವಂದಿಸಿ, ನವ್ಯಾ ಅಮೈ ಮತ್ತು ಶ್ರೀನಿಧಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಲಹೆಗಾರ ಯತೀಶ್ ಕೆ.ಎಸ್. ಭವಿಷ್ಯದ ಯೋಜನೆಗಳನ್ನು ವಿವರಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ | ಫಲಾನುಭವಿ ರೈತರು ಯೋಜನೆ ಪಡೆದುಕೊಳ್ಳಲು ಅಗತ್ಯ ಮಾಹಿತಿ ಇಲ್ಲಿದೆ…

ಕೇಂದ್ರ ಸರ್ಕಾರ ರೈತರಿಗಾಗಿ 2019 ರಲ್ಲಿ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್…