ಟ್ರೆಂಡಿಂಗ್ ನ್ಯೂಸ್

ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ರಿಪಬ್ಲಿಕ್ ಸೇಲ್ ಕೊಡುಗೆ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಗಣರಾಜ್ಯೋತ್ಸವ ಹಬ್ಬದ ಪ್ರಯುಕ್ತ ಜನವರಿ 22ರಿಂದ 26ರವರೆಗೆ ರಿಪಬ್ಲಿಕ್ ಸೇಲ್ ವಿಶೇಷ ರಿಯಾಯಿತಿ ಕೊಡುಗೆಗಳನ್ನು ಪ್ರಕಟಿಸಲಾಗಿದೆ.

ಚಿನ್ನ ಹಾಗೂ ವಜ್ರಾಭರಣಗಳ ವಿಶೇಷ ಸಂಗ್ರಹವೇ ಗ್ರಾಹಕರಿಗೆ ಹಬ್ಬದ ವಾತಾವರಣ ಸೃಷ್ಟಿಸಿದೆ. 24 ಕ್ಯಾರೆಟ್ ಚಿನ್ನದ ದರ 15,000 ದಾಟಿದೆ. ಈ ಫೆಸ್ಟಿವ್ ಶಾಪಿಂಗ್ ಸೀಸನ್‌ನಲ್ಲಿ ಚಿನ್ನದ ದರ ಬೆಲೆ ಏರಿಕೆಯ ಪರಿಣಾಮವನ್ನು ಕಡಿಮೆ ಮಾಡಲು ಈ ರಿಪಬ್ಲಿಕ್ ಸೇಲ್ ಆಫರ್ ಒಂದು ಸುವರ್ಣಾವಕಾಶ.

ಚಿನ್ನದ ಆಭರಣಗಳ ತಯಾರಿಕಾ ಶುಲ್ಕದ ಮೇಲೆ ಫ್ಲಾಟ್ ರೂ.3,500/- 10 ಗ್ರಾಂಗೆ ರಿಯಾಯಿತಿ ನೀಡಲಾಗಿದೆ. ಚಿನ್ನದ ದರ ಏರಿಕೆಯಿಂದಾಗಿ ಲೈಟ್‌ವೈಟ್, 18 ಕ್ಯಾರೆಟ್‌ನಲ್ಲಿ ತಯಾರಿಸಿದಂತಹ ಗ್ಲೋ ಇಲೈಟ್ ವಜ್ರಾಭರಣಗಳು ಈಗ ಕೈಗೆಟಕುವ ದರದಲ್ಲಿ ಲಭ್ಯವಿದ್ದು ಅಷ್ಟೇ ಅಲ್ಲದೆ ವಜ್ರದ ಮೌಲ್ಯದ ಮೇಲೆ 90 % ಬೈಬ್ಯಾಕ್ ಹೊಂದಿರುವ ಕಾರಣ ಮುಂದಿನ ದಿನಗಳಲ್ಲಿ ಅದನ್ನು ವಿನಿಮಯ ಮಾಡಲು ಅನುಕೂಲವಾಗುತ್ತದೆ. ಅಲ್ಲದೆ ವಜ್ರಾಭರಣಗಳ ಕ್ಯಾರಟ್ ಮೇಲೆ ರೂ.5000/- ಫ್ಲ್ಯಾಟ್ ಡಿಸೌಂಟ್ ಮಾಡುವುದಾಗಿ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಲಾಂಗ್ ವೀಕೆಂಡ್ ಇರುವ ಕಾರಣ ಕುಟುಂಬದೊಂದಿಗೆ ಶಾಪಿಂಗ್ ಮಾಡುವ ಅನುಭವವನ್ನು ಪಡೆಯಬಹುದು. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಆಧುನಿಕ ಮತ್ತು ಪಾರಂಪರಿಕ ಚಿನ್ನದ ಆಭರಣಗಳು, ಮದುಮಗಳ ಅಲಂಕಾರ ಆಭರಣಗಳ ವಿನೂತನ ಸಂಗ್ರಹ, ಪ್ರಾಚಿ ಇಲೈಟ್ ಮತ್ತು ಲೈಟ್‌ ವೈಟ್ ಆಭರಣಗಳು ಸಹ ಲಭ್ಯವಿದ್ದು ವಜ್ರಾಭರಣಗಳಿಗೆ ಹಾಗೂ ಗುಣಮಟ್ಟದ ಚಿನ್ನಾಭರಣಗಳ ಮಾರಾಟದಲ್ಲಿ ಹೆಸರುವಾಸಿಯಾಗಿರುವ ಸಂಸ್ಥೆಯು ಮೂಡಬಿದ್ರೆ, ಸುಳ್ಯ, ಕುಶಾಲನಗರ ಹಾಗೂ ಹಾಸನದಲ್ಲಿ ತಮ್ಮ ಮಳಿಗೆಗಳನ್ನು ಹೊಂದಿದೆ. ಷರತ್ತುಗಳ ಅನ್ನಯದೊಂದಿಗೆ ಈ ಕೊಡುಗೆ ತಮ್ಮ ಎಲ್ಲಾ ಮಳಿಗೆಗಳಲ್ಲಿ ಲಭ್ಯವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts