ಬೆಂಗಳೂರು-ಮಂಗಳೂರು-ಕಾರವಾರ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲು 6 ತಿಂಗಳ ನಂತರ ವಿಸ್ಟಾಡೋಮ್ ಜೊತೆಗೆ ಮತ್ತೆ ತನ್ನ ಸೇವೆಯನ್ನು ಆರಂಭಿಸಿದೆ. ಈ ಮೂಲಕ ಕರಾವಳಿಯ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರಿಗೆ ಧಾರ್ಮಿಕ ಕ್ಷೇತ್ರದ ಭೇಟಿ ಜೊತೆಗೆ, ಪಶ್ಚಿಮ ಘಟ್ಟದ ಸೌಂದರ್ಯ ಸವಿಯುವ ಅವಕಾಶ ಮತ್ತೆ ಸಿಕ್ಕಿದಂತಾಗಿದೆ.
ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲಿಗೆ ಆಧುನಿಕ ಸ್ವರ್ಶ ನೀಡಲಾಗಿದೆ. ರೈಲಿನ ಒಳಗೆ ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಕೆಲವೊಂದು ವ್ಯವಸ್ಥೆಗಳನ್ನು ಮಾಡಲಾಗಿದೆ. ವಿಸ್ಟಾಡೋಮ್ ಕೋಚ್, ಗಾಜಿನ ಕಿಟಿಕಿ, ಬೃಹತ್ ಗಾಜಿನ ಮೇಲ್ಛಾವಣಿ, ವ್ಯವಸ್ಥಿತ ಆಸನಗಳನ್ನು ಮಾಡಲಾಗಿದೆ. ಭಕ್ತರಿಗೆ ಅಥವಾ ಪ್ರಯಾಣಿಕರಿಗೆ ಇದೊಂದು ಹೊಸ ಅನುಭವವನ್ನು ನೀಡುತ್ತದೆ.
ಗೊಮ್ಮಟೇಶ್ವರ ಎಕ್ಸ್ಪ್ರೆಸ್ಗೆ ವಿಸ್ಟಾಡೋಮ್ ಸ್ವರ್ಶ ನೀಡಲಾಗಿದೆ. 2021ರಲ್ಲಿ ಯಶವಂತಪುರ- ಮಂಗಳೂರು ಜಂಕ್ಷನ್ ನಡುವೆ ವಿಶೇಷ ವಿಸ್ಟಾಡೋಮ್ ಬೋಗಿಗಳಿಗೆ ಚಾಲನೆ ನೀಡಲಾಗಿತ್ತು. ಇದೀಗ ಮತ್ತೆ ಗೊಮ್ಮಟೇಶ್ವರ ಎಕ್ಸ್ಪ್ರೆಸ್ಗೆ ಈ ಸ್ವರ್ಶ ನೀಡಿದ್ದಾರೆ. ಇದೀಗ ಈ ರೈಲು ವಿದೇಶಿ ರೈಲಿನಂತೆ ಸಿಂಗಾರಗೊಂಡಿದೆ. ಶೌಚಾಲಯ ವ್ಯವಸ್ಥೆ ಕೂಡ ಅತ್ಯುತ್ತಮವಾಗಿದೆ. ವ್ಯವಸ್ಥಿತ ಆಸನಗಳನ್ನು ಕೂಡ ನೀಡಲಾಗಿದೆ. ಬೃಹತ್ ಗಾಜಿನ ಮೇಲ್ಛಾವಣಿ ಕೂಡ ಮಾಡಲಾಗಿದೆ. ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು, ಬಂಟ್ವಾಳ ಮೂಲಕ ಮಂಗಳೂರಿಗೆ ಹಾದುಹೋಗಲಿದೆ.
ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲು (16575/16576) ತನ್ನ ಸೇವೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಕೊಂಡಿಲ್ಲ. ಅದೇ ಸಮಯಕ್ಕೆ ಈ ರೈಲು ಸಂಚಾರ ಮಾಡುತ್ತದೆ. ಆದರೆ ನಿಲ್ದಾಣದಲ್ಲಿ ನಿಲ್ಲುವ ಸಮಯದಲ್ಲಿ ಮಾತ್ರ ಬದಲಾವಣೆ ಮಾಡಿಕೊಂಡಿದೆ. ಬೆಂಗಳೂರಿನ ಯಶವಂತಪುರ ನಿಲ್ದಾಣದಿಂದ ಇದರ ಸಂಚಾರ ಆರಂಭಿಸಲಿದೆ. ಇನ್ನು ರೈಲು ಹೊಸ ಬದಲಾವಣೆಯೊಂದಿಗೆ ಪ್ರಯಾಣಿಕರಿಗೆ ಸೇವೆಯನ್ನು ನೀಡಲಿದೆ. ಇನ್ಮುಂದೆ ಪ್ರಯಾಣಿಕರು ಪ್ರಕೃತಿಯ ಸೌಂದರ್ಯವನ್ನು ನೋಡಿಕೊಂಡು ಪ್ರಯಾಣ ಮಾಡಬಹುದು.



























