ಪುತ್ತೂರು: ಇಲ್ಲಿನ ಮುಖ್ಯರಸ್ತೆಯ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ದೀಪಾವಳಿ ಸಂದರ್ಭ ಹಮ್ಮಿಕೊಂಡಿದ್ದ ವಿಶೇಷ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಿ ಗೌರವಿಸಿದೆ.
ತಮ್ಮ ಕುಟುಂಬದೊಂದಿಗೆ ಕಳೆದಂತಹ ಸುಂದರ ಕ್ಷಣಗಳ ಫೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಪೇಜ್ ಫಾಲೋ ಹಾಗೂ ಟ್ಯಾಗ್ ಮಾಡಿ ಹೆಚ್ಚು ಶೇರ್ ಗಳನ್ನು ಪಡೆಯುವ ಕುಟುಂಬದ ಪೋಸ್ಟ್ ಗಳಿಗೆ ಆಕರ್ಷಕ ಬಹುಮಾನ ಗೆಲ್ಲುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ ಮಂಗಳೂರಿನ ಅನನ್ಯ ಅವರು ವಿಜೇತರಾಗಿದ್ದು, ಸಂಸ್ಥೆಯಲ್ಲಿ ಬಲರಾಮ ಆಚಾರ್ಯ ಅವರು ಡೈಮಂಡ್ ಪೆಂಡೆಂಟ್ ನೀಡಿ ಗೌರವಿಸಿದರು.
























