ಟ್ರೆಂಡಿಂಗ್ ನ್ಯೂಸ್

ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್‌ ನಲ್ಲಿ ‘ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್‌’ ಶೀರ್ಷಿಕೆಯ ಆ್ಯಪ್ ಬಿಡುಗಡೆ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಗ್ರಾಹಕರು ತಮ್ಮ ಆಭರಣ ಯೋಜನೆಗಳನ್ನು ನಿರ್ವಹಿಸಲು, ಆರ್ಡರ್ ಸ್ಥಿತಿಯನ್ನು ವೀಕ್ಷಿಸಲು,ಲೋಹದ ದರಗಳನ್ನು ಪರಿಶೀಲಿಸಲು ಮತ್ತು ಬ್ಯಾಲೆನ್ಸ್ ವಿವರಗಳ ಮಾಹಿತಿಗಾಗಿ ಗ್ರಾಹಕರ ಸಮ್ಮುಖದಲ್ಲೇ ‘ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್” ಶೀರ್ಷಿಕೆಯ ಹೊಸ ಅಪ್ಲಿಕೇಶನ್‌ನನ್ನು ಬಿಡುಗಡೆ ಮಾಡಲಾಯಿತು.

chennai-shopping
maithri

ಈ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹಾಗೂ ಆ್ಯಪ್ ಸ್ಟೋ‌ರ್ನನಲ್ಲಿ ಲಭ್ಯವಿದ್ದು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಈ ಆ್ಯಪ್‌ನಲ್ಲಿ ಗ್ರಾಹಕರಿಗೆ ದಿನನಿತ್ಯದ ಚಿನ್ನದ ದರ ಲಭ್ಯವಿದ್ದು, ಗ್ರಾಹಕರ ವಿವರ,ಡಿಜಿಟಲ್ ಪಾಸ್‌ಬುಕ್ ವಿವರ,ಆರ್ಡರ್ ವಿವರಗಳು, ಅಲ್ಲದೆ ಗ್ರಾಹಕರು ಪಾವತಿಸಿರುವ ಮೊತ್ತದ ವಿವರಗಳನ್ನು ಸಹ ಪರಿಶೀಲಿಸಬಹುದು.ಯಾವುದೇ ಪಾವತಿ ಶುಲ್ಕವನ್ನು ಬರಿಸದೇ ಗ್ರಾಹಕರು ಸ್ಟೀಮ್ ಪೇಮೆಂಟ್ ಮಾಡಬಹುದು.ಈ ಆ್ಯಪ್ ಮುಖಾಂತರ ಮನೆಯಲ್ಲೇ ಕುಳಿತುಕೊಂಡು ಪೇಮೆಂಟ್‌ ಮಾಡಿ ರಶೀದಿ ಪಡೆಯಬಹುದು.

ಈ ಅಪ್ಲಿಕೇಶನ್ ಸಮಯದ ಅಭಾವವಿರುವವರಿಗೆ ಇದು ತುಂಬಾ ಅನುಕೂಲಕರವಾಗಿದೆ.ಈ ಆ್ಯಪ್ ಮೂಲಕ ಸಮಾಜಿಕ ಜಾಲತಾಣಗಳನ್ನು ಸಂಪರ್ಕಿಸಿ ನಮ್ಮ ಆಭರಣಗಳ ಬಗೆಗಿನ ಹೊಸ ಅಪ್‌ಡೇಟ್ಸ್‌ಗಳ ಮಾಹಿತಿಗಳನ್ನು ತಿಳಿದುಕೊಳ್ಳಬಹುದು. 24 ಕ್ಯಾರೆಟ್,22ಕ್ಯಾರೆಟ್ ಚಿನ್ನದ ಹಾಗೂ ಬೆಳ್ಳಿಯ ದಿನನಿತ್ಯದ ಬೆಲೆಗಳನ್ನು ವೀಕ್ಷಿಸಬಹುದು. ಹೂಡಿಕೆಯ ಚಿನ್ನದ ಬೆಲೆ ಹಾಗೂ ತೂಕ ಮತ್ತು ಬೆಲೆಯ ವಿವರಗಳನ್ನು ದಿನಾಂಕ ಸಹಿತ ಎಲ್ಲಾ ಸವಿವರಗಳನ್ನು ಪಾರದರ್ಶಕತೆಯಿಂದ ತಿಳಿದುಕೊಳ್ಳಬಹುದು. ಶಂಕರ್ ಗ್ರೂಪ್ ಆಫ್ ಕಂಪೆನಿಯ ಚೇ‌ರ್ ಮ್ಯಾನ್ ಸತ್ಯ ಶಂಕರ್ ಈ ಯೋಜನೆಗೆ ಚಾಲನೆ ನೀಡಿದರು.

ಶಂಕರ್ ಗ್ರೂಪ್ ಆಫ್ ಕಂಪೆನಿಯ ಇ.ಡಿ ರಂಜಿತ ಶಂಕರ್, ಶಂಕರ್ ಗ್ರೂಪ್ ಆಫ್ ಕಂಪೆನಿಯ ಡೈರೆಕ್ಟರ್ ಆಗಿರುವ ಮನಸ್ವಿತ್, ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್‌ ನ ಮುಖ್ಯಸ್ಥರಾದ ಬಲರಾಮ ಆಚಾರ್ಯ, ರಾಜೇಶ್ವರೀ ಬಲರಾಮ ಆಚಾರ್ಯ, ಲಕ್ಷ್ಮೀಕಾಂತ್ ಬಿ. ಆಚಾರ್ಯ, ವೇದ ಲಕ್ಷ್ಮೀಕಾಂತ್, ಸುದನ್ವ ಬಿ. ಆಚಾರ್ಯ, ಅರುಂದತಿ ಆಚಾರ್ಯ, ಶ್ರೀರಾಮ್ ಆಚಾರ್ಯ, ರಕ್ಷಿತ್ ರಾವ್ ಮತ್ತು ನರೇಶ್, ಶೋರೂಂ ಮ್ಯಾನೇಜರ್ ಶೇಖರ್ ಹಾಗೂ ಪುರಂದರ, ಮಾರ್ಕೆಟಿಂಗ್ ಮ್ಯಾನೇಜರ್ ಕೀರ್ತನ್ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಲೈವ್ ಜ್ಯೂಸ್ ಕೌಂಟರ್ ಆರಂಭಿಸಿದ ಪ್ರಭುಸ್! ಪ್ರಭುಸ್ ಆಗಿ ಮರುನಾಮಕರಣಗೊಂಡ ಪ್ರಭು ಚರುಂಬುರಿ!!

ಪುತ್ತೂರು: ಪ್ರಸಿದ್ಧ ಚರುಂಬುರಿ ಹಾಗೂ ಚಾಟ್ಸ್ ಸಂಸ್ಥೆ ಪ್ರಭು ಚರುಂಬುರಿ ಇದೀಗ ಪ್ರಭುಸ್ ಆಗಿ…

ಸಿಬಿಜಿ ಘಟಕ ಅಧ್ಯಯನಕ್ಕೆ ರಾಜ್ಯದಿಂದ ತಂಡ | ಕಂಪ್ರೆಸ್ಡ್ ಬಯೋ ಗ್ಯಾಸ್ ಘಟಕ ಲೋಕಾರ್ಪಣಾ ಸಮಾರಂಭದಲ್ಲಿ ಶಾಸಕ ಅಶೋಕ್ ರೈ

ಪುತ್ತೂರು: ಪುತ್ತೂರಿನ ಕಂಪ್ರೆಸ್ಡ್ ಬಯೋಗ್ಯಾಸ್ ಘಟಕದ ಬಗ್ಗೆ ಬಿಬಿಎಂಪಿಯಲ್ಲೂ ಚರ್ಚೆ ನಡೆದಿದೆ.…