Gl
ಟ್ರೆಂಡಿಂಗ್ ನ್ಯೂಸ್

ಆರ್ಯಾಪು ಪ್ರಾ.ಕೃ. ಪತ್ತಿನ ಸಹಕಾರ ಸಂಘಕ್ಕೆ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿಂದ ಪ್ರಶಸ್ತಿ ಪ್ರದಾನ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ 2024-25ನೇ ಸಾಲಿನ ಸಾಧನೆಗಾಗಿ ನೀಡಲ್ಪಡುವ ಪ್ರಶಸ್ತಿಯನ್ನು ಇಂದು ಮಂಗಳೂರಿನಲ್ಲಿ ನಡೆದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಸಂಘದ ಮಹಾಸಭೆಯಲ್ಲಿ ಪ್ರದಾನ ಮಾಡಲಾಯಿತು.

core technologies

ಸತತ ಏಳನೇ ಬಾರಿಗೆ ಪ್ರಶಸ್ತಿಗೆ ಭಾಜನರಾಗಿರುವ ಆರ್ಯಾಪು ಸಹಕಾರಿ ಸಂಘಕ್ಕ ಸಹಕಾರಿ ಸಂಘದ ಅಧ್ಯಕ್ಷ ಎಚ್. ಮಹಮ್ಮದ್ ಆಲಿ ಹಾಗೂ ಮುಖ್ಯ ಕಾರ್ಯ ನಿರ್ವಾಣಾಧಿಕಾರಿಗಳಾದ ಶ್ರೀಮತಿ ಜಯಂತಿ ಭಾಸ್ಕರ್ ರವರಿಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾದ ಸಹಕಾರಿ ರತ್ನ ಡಾ :ಎಂ. ಎನ್. ರಾಜೇಂದ್ರ ಕುಮಾರ್ ರವರು ಪ್ರಶಸ್ತಿ ನೀಡಿ ಶಾಲು, ಹೂಹಾರ ಹಾಕಿ, ಸನ್ಮಾನಿಸಿದರು.

ಈ ಸಂದರ್ಭದಲ್ಲಿ ದ ಕ ಮತ್ತು ಉಡುಪಿ ಜಿಲ್ಲೆಯ ಸಹಕಾರ ಇಲಾಖೆಯ ನಿಬಂಧಕ ರಾಗಿರುವ ರಮೇಶ್,ಹಾಗೂ ಲಾವಣ್ಯ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಉಪಾಧ್ಯಕ್ಷರಾದ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್ ಬಿ ಜಯರಾಮ ರೈ, ಕುಶಾಲಪ್ಪ ಗೌಡ ಬೆಳ್ತಂಗಡಿ, ಮನ್ಮಥ ಸುಳ್ಯ, ಸದಾಶಿವ ಉಲ್ಲಾಳ್ ಮೊದಲಾದವರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಬೆಳ್ಳಿ ನಾಣ್ಯದಿಂದ ಹುಟ್ಟಿಕೊಂಡ `ರೂಪಾಯಿ’ ಹೆಸರು! ಇತಿಹಾಸದ ಬಗ್ಗೆ ಬೆಳಕು ಚೆಲ್ಲಿದ ಮುಂಬೈ ಎಕ್ಸಿಬಿಷನ್!!

ಮುಂಬೈನಲ್ಲಿ ಏರ್ಪಡಿಸಿದ್ದ ಒಂದು ಎಕ್ಸಿಬಿಷನ್’ನಲ್ಲಿ ರೂಪಾಯಿ ಹಿಂದಿನ ಇತಿಹಾಸಕ್ಕೆ ಬೆಳಕು…

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಬಟ್ಟೆಗಳ ಕೌಂಟರ್ ಉದ್ಘಾಟನೆ | ರೋಟರಿ ಕ್ಲಬ್ ಪುತ್ತೂರು ಯುವದಿಂದ ಕೊಡುಗೆ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ ವತಿಯಿಂದ ಪುತ್ತೂರು ಸರಕಾರಿ ಆಸ್ಪತ್ರೆಗೆ ಕೊಡುಗೆಯಾಗಿ…