pashupathi
ಟ್ರೆಂಡಿಂಗ್ ನ್ಯೂಸ್

ಗಣೇಶ ಚತುರ್ಥಿ ಪ್ರಯುಕ್ತ ಸಾಮೂಹಿಕ ಯೋಗ ಗಣಪತಿ ನಮಸ್ಕಾರ | ಬಲ್ನಾಡು ಶ್ರೀ ಭಟ್ಟಿ ವಿನಾಯಕ ದೇವಸ್ಥಾನದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಆಯೋಜನೆ

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಇದರ ನೇತ್ರಾವತಿ ವಲಯ, ಪುತ್ತೂರು ತಾಲೂಕು ವತಿಯಿಂದ ಇತಿಹಾಸ ಪ್ರಸಿದ್ಧ ಶ್ರೀ ಭಟ್ಟಿ ವಿನಾಯಕ ದೇವಸ್ಥಾನ ಬಲ್ನಾಡುವಿನಲ್ಲಿ ಗಣೇಶ ಚತುರ್ಥಿ ಪ್ರಯುಕ್ತ 4ನೇ ವರುಷದ ಸಾಮೂಹಿಕ ಯೋಗ ಗಣಪತಿ ನಮಸ್ಕಾರ ಆಗಸ್ಟ್‌ 27ರಂದು ಪೂರ್ವಾಹ್ನ 4.50ರಿಂದ 7.00ರ ತನಕ ನಡೆಯಿತು.

akshaya college

ಕಾರ್ಯಕ್ರಮದ ಉದ್ಘಾಟನೆಯನ್ನು  ಶ್ರೀ ಭಟ್ಟಿ ವಿನಾಯಕ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಮಾಧವ ಗೌಡ ಕಾಂತಿಲ ನೆರವೇರಿಸಿ ಸಮಿತಿಯ ಶಿಸ್ತು, ಸಂಘಟನೆ, ಸಂಸ್ಕಾರಗಳ ಬಗ್ಗೆ ಪ್ರಶಂಸಿಸಿ, ಶುಭಹಾರೈಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಹಸಂಚಾಲಕರಾದ ಯೋಗೀಶ ಆಚಾರ್ಯ, ತಾಲೂಕು ಸಂಚಾಲಕರಾದ ಕೃಷ್ಣಾನಂದ ಹಾಗೂ ಬಲ್ನಾಡು ಶಾಖೆಯ ಯೋಗಬಂಧುಗಳು ಉಪಸ್ಥಿತರಿದ್ದರು.
ಬಳಿಕ ಯೋಗ ಸಮಿತಿಯ ಪಠ್ಯಕ್ರಮದಂತೆ ಭಜನೆ, ಅಮೃತವಚನ, ಪಂಚಾಂಗ ಪಠಣ, ಮಾನಸಿಕ ಸಿದ್ಧತೆ, ಉಸಿರಾಟ ಕ್ರಿಯೆಗಳ ಬಳಿಕ 21 ಬಾರಿ ಮಂತ್ರಸಹಿತ ಸಾಮೂಹಿಕ ಯೋಗ ಗಣಪತಿ ನಮಸ್ಕಾರ ಮಾಡಲಾಯಿತು.

ಬಲ್ನಾಡು ಶ್ರೀ ಉಳ್ಳಾಲ್ತಿಯ ದೇವಿಯ ಕ್ಷೇತ್ರವಾದ ಕಾರಣ ವಿಶೇಷ ಸಾಮೂಹಿಕ ಯೋಗ ದುರ್ಗಾ ನಮಸ್ಕಾರವನ್ನೂ ಮಾಡಿದ ಬಳಿಕ 3 ಬಾರಿ ಸೂರ್ಯ ನಮಸ್ಕಾರ ಮಾಡಲಾಯಿತು.

ತಾರಾನಾಥ ಅವರು ಗಣೇಶ ಚತುರ್ಥಿಯ ವಿಶೇಷತೆ ಬಗ್ಗೆ ಬೌದ್ಧಿಕ ನೀಡಿದರು. ತದನಂತರ ಅನ್ನಪೂರ್ಣ ಮಂತ್ರದೊಂದಿಗೆ ಗಣೇಶ ಚತುರ್ಥಿಯ ವಿಶೇಷ ಪ್ರಸಾದ ನೀಡಲಾಯಿತು. 200ಕ್ಕೂ ಮಿಕ್ಕಿ ಯೋಗ ಬಂಧುಗಳು ಭಾಗವಹಿಸಿದ್ದರು.

ಅಗ್ನಿಹೋತ್ರವನ್ನು ಬಲ್ನಾಡಿನ ಬಾಲಕೃಷ್ಣ ದಂಪತಿಗಳು ನೆರವೇರಿಸಿದರು. ಹೇಮಲತಾ ಕಾರ್ಯಕ್ರಮ ನಿರೂಪಿಸಿದರು, ಚೈತ್ರಿಕಾ ನಾಗೇಶ್‌ ಶಿಕ್ಷಣ ವಿಧಿ ನೆರವೇರಿಸಿದರು. ಕಾರ್ಯಕ್ರಮ ಸಂಚಾಲಕಿ ವಿನಯ ಪೈ  ವಂದಿಸಿದರು. ತುಕಾರಾಮ ಮಾರ್ಗದರ್ಶನ ನೀಡಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

LED Tvಗಳ ಮೇಲೆ ಬೊಂಬಾಟ್ ಆಫರ್: 4444 ರೂ.ನಿಂದ ಆರಂಭ | ನಮ್ಮೂರಿನ ಟಿವಿ ಬ್ರ್ಯಾಂಡ್ STVC ನೀಡಿದೆ ಹಬ್ಬಗಳ ಆಫರ್

ಪುತ್ತೂರಿನಲ್ಲೇ ತಯಾರಾದ ಪುತ್ತೂರಿನ ಬ್ರಾಂಡ್ ಆಗಿರುವ STVC (ಶಂಕರ್ಸ್ ಟಿವಿ ಕ್ಲಿನಿಕ್)ನಲ್ಲಿ…

ಶಿಕ್ಷಕರ ದಿನಾಚರಣೆ ಪ್ರಯುಕ್ತ ಮಾರ್ಕೆಟ್ ವಾಣಿ ನಡೆಸಿದ ಪ್ರಬಂಧ ಸ್ಪರ್ಧೆಯ ವಿಜೇತರ ಪಟ್ಟಿ ಪ್ರಕಟ

ಪುತ್ತೂರು: ಶಿಕ್ಷಕರ ದಿನಾಚರಣೆ ಪ್ರಯುಕ್ತ ಮಾರ್ಕೆಟ್ ವಾಣಿ ನಡೆಸಿದ ಪ್ರಬಂಧ ಸ್ಪರ್ಧೆಯ ವಿಜೇತರ…