ಪುತ್ತೂರು: ತಂಬೂರಿ ಮೀಟಿದವ ಧ್ವನಿ ಸುರುಳಿಯನ್ನು ಶ್ರೀ ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ಬಿಡುಗಡೆ ಮಾಡಲಾಯಿತು.

ನಾಗರಪಂಚಮಿಯ ಶುಭದಿನದಂದು ಮಾಸ್ಟರ್ ವಿಹಾನ್ ಹಾಡಿರುವ ಹಾಡನ್ನು ಲೋಕಾರ್ಪಣೆಗೊಳಿಸಲಾಯಿತು.
ಲೋಹಿತ್ ಮತ್ತು ರಂಜಿನಿ ಪ್ರಸ್ತುತ ಪಡಿಸುವ ಈ ಧ್ವನಿ ಸುರುಳಿಗೆ ಪುರಂದರ ದಾಸರ ಸಾಹಿತ್ಯ, ಕರೋಪಾಡಿ ಅಕ್ಷಯ್ ನಾಯಕ್ ನಿರ್ದೇಶನ, ಅರುಣ್ ರೈ ಪುತ್ತೂರು ಛಾಯಾಗ್ರಹಣ, ಸಾತ್ವಿಕ್ ಪಡಿಯಾರ್ ಸಂಗೀತ ನಿರ್ದೇಶನ ಮಾಡಿದ್ದಾರೆ.
























