ಟ್ರೆಂಡಿಂಗ್ ನ್ಯೂಸ್

ಪಶುಪತಿ ಲೈಟ್ಸ್, ಫ್ಯಾನ್ಸ್ ಆ್ಯಂಡ್ ಇಲೆಕ್ಟ್ರಿಕಲ್ಸ್’ನಲ್ಲಿ ಅಂತಾರಾಷ್ಟ್ರೀಯ ಎಲೆಕ್ಟ್ರೀಷಿಯನ್ ಡೇ | ಸಾಧಕ ಎಲೆಕ್ಟ್ರೀಷಿಯನ್’ಗಳಿಗೆ ಸನ್ಮಾನ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಅಂತಾರಾಷ್ಟ್ರೀಯ ಎಲೆಕ್ಟ್ರೀಷಿಯನ್ ಡೇ ಪ್ರಯುಕ್ತ ಇಲ್ಲಿನ ಪಶುಪತಿ ಲೈಟ್ಸ್, ಫ್ಯಾನ್ಸ್ ಆ್ಯಂಡ್ ಇಲೆಕ್ಟ್ರೀಕಲ್ಸ್’ನ ಕೊಂಬೆಟ್ಟು ಜಿ.ಎಲ್. ಟ್ರೇಡ್ ಸೆಂಟರ್ನ ಕಚೇರಿಯಲ್ಲಿ ಜೂನ್ 11ರಂದು ಎಲೆಕ್ಟ್ರೀಷಿಯನ್’ಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ಜರಗಿತು.

akshaya college

ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷೆ ಅಶ್ವಿನಿ ಕೃಷ್ಣ ಮುಳಿಯ ಮಾತನಾಡಿ, ಮದರ್ಸ್ ಡೇ, ಫಾದರ್ಸ್ ಡೇ ಸೇರಿದಂತೆ ಹಲವು ರೀತಿಯ ಆಚರಣೆಗಳು ನಮ್ಮಲ್ಲಿವೆ. ಇದರಲ್ಲಿ ಒಂದು ಎಲೆಕ್ಟ್ರೀಷಿಯನ್ ಡೇ. ಹೀಗೊಂದು ಆಚರಣೆ ಇದೆ ಎನ್ನುವುದನ್ನು ಪಶುಪತಿ ಲೈಟ್ಸ್, ಫ್ಯಾನ್ಸ್ ಆ್ಯಂಡ್ ಇಲೆಕ್ಟ್ರಿಕಲ್ಸ್’ನಿಂದ ತಿಳಿದುಕೊಂಡೆ. ಪಶುಪತಿ ಲೈಟ್ಸ್ ಕತ್ತಲನ್ನು ನೀಗಿಸುವುದು ಮಾತ್ರವಲ್ಲ, ಹೊಸ ಹೊಸ ವಿಷಯಗಳಿಗೂ ಬೆಳಕು ಹಾಯಿಸುತ್ತಿದೆ. ವಿಸ್ತೃತ ಮಳಿಗೆಯಲ್ಲಿ ಇಂತಹ ವಿನೂತನ ಕಾರ್ಯಕ್ರಮಗಳಿಗೆ ನಾಂದಿ ಹಾಡಿದ್ದೀರಿ. ಮುಂದೆಯೂ ಉತ್ತಮ ವಿಚಾರಗಳು ನಿಮ್ಮಿಂದ ಮೂಡಿಬರಲಿ ಎಂದು ಶುಭಹಾರೈಸಿದರು.

ರೋಟರಿ ಜಿಲ್ಲೆ 3181 ಇದರ ಅಸಿಸ್ಟೆಂಟ್ ಗವರ್ನರ್ ಡಾ. ಹರ್ಷ ಕುಮಾರ್ ರೈ ಮಾತನಾಡಿ, ವಿನೂತನ ವಿಷಯಗಳನ್ನು ನೀಡುತ್ತಾ ಬಂದಿರುವುದು ಪಶುಪತಿ ಅವರ ವಿಶೇಷತೆ. ಹೊಸತನ ಹುಡುಕುತ್ತಿರುವ ಪಶುಪತಿ ಲೈಟ್ಸ್, ಫ್ಯಾನ್ಸ್ ಆ್ಯಂಡ್ ಇಲೆಕ್ಟ್ರಿಕಲ್ಸ್’ಗೆ ಶುಭವಾಗಲಿ ಎಂದರು.

pashupathi lights fans and electricals

ಪ್ರಾಸ್ತಾವಿಕವಾಗಿ ಮಾತನಾಡಿದ ರೋಟರಿ ಕ್ಲಬ್ ಪುತ್ತೂರು ಯುವ ಪೂರ್ವಾಧ್ಯಕ್ಷರೂ ಸಂಸ್ಥೆಯ ಮಾಲಕರೂ ಆದ ಪಶುಪತಿ ಶರ್ಮಾ ಮಾತನಾಡಿ, ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಎಲೆಕ್ಟ್ರೀಷಿಯನ್, ಎಂಜಿನಿಯರ್ಗಳು ಮತ್ತು ತಂತ್ರಜ್ಞರು ಪ್ರಮುಖ ಪಾತ್ರ ವಹಿಸುತ್ತಾರೆ. ಅವರ ಶ್ರಮವನ್ನು, ನೌಪುಣ್ಯವನ್ನು ಗುರುತಿಸುವ ದಿನವೇ ಎಲೆಕ್ಟ್ರೀಷಿಯನ್ ಡೇ. ವಿದ್ಯುತ್ಕಾಂತೀಯತೆಗೆ ಗಮನಾರ್ಹ ಕೊಡುಗೆ ನೀಡಿದ ಫ್ರೆಂಚ್ ಭೌತಶಾಸ್ತ್ರಜ್ಞ ಮತ್ತು ಗಣಿತಶಾಸ್ತ್ರಜ್ಞ ಆಂಡ್ರೆ ಮೇರಿ ಆಂಪಿಯರ್ ಅವರ ಮರಣದ 150ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಈ ದಿನವನ್ನು 1986ರಲ್ಲಿ ಜಾರಿಗೆ ತರಲಾಯಿತು. ಇಂದು ನಾವು ಅವಲಂಭಿಸಿರುವ ವಿದ್ಯುತ್ ವ್ಯವಸ್ಥೆಗೆ ಅವರ ಕೆಲಸ ಅಡಿಪಾಯ ಹಾಕಿದೆ ಎಂದರು.

ಇದೇ ಸಂದರ್ಭ ಎಲೆಕ್ಟ್ರೀಷಿಯನ್’ಗಳಾದ ಸಂತೋಷ್ ಆಚಾರ್ಯ, ಹರೀಶ್, ಎಂ. ಸುರೇಶ್ ಅಮೀನ್, ಅನಿಲ್ ಕಾಟುಕುಕ್ಕೆ, ಅಶೋಕ್ ಪೂಜಾರಿ, ಧನಂಜಯ ಬುಡೋಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ನಿಯೋಜಿತ ಅಧ್ಯಕ್ಷ ಕುಸುಮ್ ರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಲಬ್ ಸದಸ್ಯರು ಹಾಗೂ ಸಂಸ್ಥೆಯ ಸಿಬ್ಬಂದಿಗಳು ಪಾಲ್ಗೊಂಡರು.

ಜಿಎಲ್ ವನ್ ಮಾಲ್‌’ನಲ್ಲಿ ಕಾರ್ಯಾಚರಿಸುತ್ತಿರುವ ಕ್ಸಿತಿ ಕಲೆಕ್ಷನ್ ಫ್ಯಾಷನ್ ಜ್ಯುವೆಲ್ಲರಿಯ ಮಾಲಕಿ ಅನ್ನಪೂರ್ಣ ಶರ್ಮಾ ಪ್ರಾರ್ಥಿಸಿದರು. ಕ್ಲಬ್ ಕಾರ್ಯದರ್ಶಿ ವಚನಾ ಜಯರಾಂ ವಂದಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts