ಪುತ್ತೂರು: ಸಹಜ್ ರೈ ಬಳೆಜ್ಜ ನೇತೃತ್ವದ ವಿಜಯ ಸಾಮ್ರಾಟ್ ಪುತ್ತೂರು ಇದರ ಆಶ್ರಯದಲ್ಲಿ ಪುತ್ತೂರುದ ಪಿಲಿಗೊಬ್ಬು ಸೀಸನ್-2 ಕಾರ್ಯಕ್ರಮದ ಹುಲಿಕುಣಿತ ವೇಷ ಸ್ಪರ್ಧೆ ಅ.6ರಂದು ಅದ್ದೂರಿಯಾಗಿ ನಡೆಯಿತು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಉದ್ಯಮಿ ರವಿ ಶೆಟ್ಟಿ ಮೂಡಂಬೈಲು ಪಿಲಿಗೊಬ್ಬು ಸ್ಪರ್ಧಾ ಕಾರ್ಯಕ್ರಮದ ವೇದಿಕೆಯನ್ನು ಹಿಂಗಾರ ಅರಳಿಸಿ ಹುಲಿವೇಷ ಕುಣಿತ ಸ್ಪರ್ಧೆಗೆ ಚಾಲನೆ ನೀಡಿದರು.
Browsing: tiger dance
ಪುತ್ತೂರು: ‘ಪಿಲಿಗೊಬ್ಬು’ ಕೇವಲ ಮನರಂಜನೆಯ ಆಟವಾಗಿರದೆ ಧಾರ್ಮಿಕ ನೆಲೆಗಟ್ಟನ್ನು ಹೊಂದಿದೆ. ತುಳುನಾಡಿನ ಪ್ರತಿ ಜನಪದೀಯ ಚಟುವಟಿಕೆಗಳಿಗೂ ಧಾರ್ಮಿಕ ಹಿನ್ನಲೆ ಇದೆ. ಕಂಬಳ, ಕೋಳಿ ಅಂಕ, ಯಕ್ಷಗಾನ ಹಾಗೂ ಹುಲಿ ಕುಣಿತ ಎಲ್ಲದಕ್ಕೂ ಧಾರ್ಮಿಕ ಸ್ಪರ್ಶವನ್ನು ಹಿರಿಯರು ನೀಡಿದ್ದಾರೆ. ಕೋಳಿ ಅಂಕ ಕೂಡ ನಿಷಿದ್ಧ ಅಲ್ಲ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.
ಪುತ್ತೂರು: ನವರಾತ್ರಿಯ ದಿನಗಳಲ್ಲಿ ವಿಶೇಷವಾಗಿ ಆರಾಧಿಸಲ್ಪಡುವ ದುರ್ಗೆಯ ವಾಹನ ಹುಲಿಯ ಕುಣಿತವನ್ನು ಸ್ಪರ್ಧೆಯ ರೂಪದಲ್ಲಿ ಪ್ರದರ್ಶಿಸುವ ಈ ವೇದಿಕೆ ಅತ್ಯಾಪೂರ್ವವಾದದ್ದು. ತುಳುನಾಡಿನ ಜನಪದ ಕ್ರೀಡೆಯ ಪ್ರದರ್ಶನಕ್ಕೆಪುತ್ತೂರಿನಲ್ಲಿ ವೇದಿಕೆ ಕಲ್ಪಿಸಿಕೊಟ್ಟ ಕೀರ್ತಿ ವಿಜಯ ಸಾಮ್ರಾಟ್ ತಂಡಕ್ಕೆ ಸಲ್ಲುತ್ತದೆ. ಪಿಲಿಗೊಬ್ಬು 1ನ್ನು ಮೀರಿದ ಯಶಸ್ಸು ಜನಸ್ಪಂದನೆ ಸೀಸನ್ 2ಕ್ಕೆ ಸಿಗಲಿ. ಆ ಮೂಲಕ ಈ ಆಯೋಜನೆ ಹತ್ತೂರಿಗೂ ಮಾದರಿಯಾಗಬೇಕು. ಇಂತಹದೊಂದು ಅಭೂತಪೂರ್ವ ಕಾರ್ಯಕ್ರಮವನ್ನು ಆಯೋಜಿಸಿದ ಸಹಜ್ ಮತ್ತು ಬಳಗದ ಕೆಲಸಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಉದ್ಯಮಿ ಉಜ್ವಲ್ ಪ್ರಭು ಹೇಳಿದರು.