Gl harusha
ಸ್ಥಳೀಯ

ಜ.4: ಅರಸು ಮುಂಡ್ಯತ್ತಾಯ ದೈವಗಳ’ಪಾಂಗಳಾಯಿ ನೇಮೋತ್ಸವ’; ಪುತ್ತೂರಿನ ಎರಡನೇ ದಂಡನಾಯಕ ಅರಸು ಮುಂಡ್ಯತ್ತಾಯ ದೈವ!!

ಕಾರಣಿಕ ಕೇತ್ರವಾಗಿರುವ ಪರ್ಲಡ್ಕದ ಪಾಂಗಳಾಯಿ ಅರಸು ಮುಂಡ್ಯತ್ತಾಯ ದೈವಗಳ ವಾರ್ಷಿಕ ನೇಮೋತ್ಸವ, ವರ್ಷಾವಧಿ ಪೂಜೆ, ಗಣಹೋಮ, ಸತ್ಯನಾರಾಯಣ ಪೂಜಾ ಕಾರ್ಯಕ್ರಮಗಳು ಜ. 4ರಂದು ನಡೆಯಲಿದೆ ಎಂದು ಅರಸು ಮುಂಡ್ಯತ್ತಾಯ ದೈವಸ್ಥಾನದ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯ್ಕ ಕಲ್ಲಿಮಾರ್ ತಿಳಿಸಿದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕಾರಣಿಕ ಕ್ಷೇತ್ರವಾಗಿರುವ ಪರ್ಲಡ್ಕದ ಪಾಂಗಳಾಯಿ ಅರಸು ಮುಂಡ್ಯತ್ತಾಯ ದೈವಗಳ ವಾರ್ಷಿಕ ನೇಮೋತ್ಸವ, ವರ್ಷಾವಧಿ ಪೂಜೆ, ಗಣಹೋಮ, ಸತ್ಯನಾರಾಯಣ ಪೂಜಾ ಕಾರ್ಯಕ್ರಮಗಳು ಜ. 4ರಂದು ನಡೆಯಲಿದೆ ಎಂದು ಅರಸು ಮುಂಡ್ಯತ್ತಾಯ ದೈವಸ್ಥಾನದ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯ್ಕ ಕಲ್ಲಿಮಾರ್ ತಿಳಿಸಿದರು.

srk ladders
Pashupathi
Muliya

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 16 ವರ್ಷಗಳಿಂದ ಪಾಂಗಳಾಯಿ ನೇಮೋತ್ಸವ ನಿರಂತರವಾಗಿ ಅದ್ದೂರಿಯಾಗಿ ನಡೆಯುತ್ತಿದೆ. ಅರಸು ಮುಂಡ್ಯತ್ತಾಯ ಹಾಗೂ ಪರಿವಾರ ದೈವಗಳು ಮನುಷ್ಯನಿಗೆ ಬರುವ ಅಪಘಾತ, ದುರ್ಮರಣ, ಬೆಂಕಿ ಆಕಸ್ಮಿಕ ಮುಂತಾದ ಸರ್ವ ಅವಘಡಗಳಿಂದ ರಕ್ಷಣೆ ನೀಡುವ ದೈವಗಳಾಗಿದ್ದು, ಭಕ್ತರ ಅಭಿಲಾಷೆಯನ್ನು ಈಡೇರಿಸುವ ಕಾರಣಿಕ ಶಕ್ತಿಗಳಾಗಿವೆ.

ಪುತ್ತೂರು ನಗರದ ಕೇಂದ್ರ ಭಾಗದಲ್ಲಿರುವ ಈ ದೈವಗಳ ತಾಣದಲ್ಲಿ ಅರಸು ಮುಂಡ್ಯತ್ತಾಯ, ನಾಗದೇವರು, ನಾಗರಕ್ತೇಶ್ವರಿ, ಗುಳಿಗ, ಪಂಜುರ್ಲಿ ಹಾಗೂ ಪೊಟ್ಟನ್ ದೈವಗಳ ಸನ್ನಿಧಿಯಾಗಿದೆ. ಆರಂಭದಲ್ಲಿ ಈ ದೈವಗಳ ತಾಣಕ್ಕೆ ಕೇವಲ ಅರ್ಧ ಸೆಂಟ್ಸ್ ಸ್ಥಳ ಇತ್ತು. ಈಗ ಭಕ್ತರ ನೆರವಿನಿಂದ 84 ಸೆಂಟ್ಸ್ ಸ್ಥಳ ದೈವಗಳದ್ದಾಗಿದೆ. ಪುತ್ತೂರಿನ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ದೇವರ ಸವಾರಿ ಪಾಂಗಳಾಯಿ ಕಟ್ಟೆಗೆ ಆಗಮಿಸುತ್ತದೆ.

ಪಾಂಗಳಾಯಿ ದೈವಕ್ಷೇತ್ರದಲ್ಲಿ ಪ್ರತೀ ಸಂಕ್ರಮಣ ಪೂಜೆ, ತಂಬಿಲ ಸೇವೆ, ಪತ್ತನಾಜೆ, ನಾಗರಪಂಚಮಿ, ಶ್ರೀಕೃಷ್ಣ ಜನ್ಮಾಷ್ಟಮಿ, ಆಯುಧಪೂಜೆ, ಬಲಿಪಾಡ್ಯಮಿ ಕಾರ್ಯಕ್ರಮಗಳು ನಡೆಯುತ್ತಿವೆ. ವಿಶೇಷವಾಗಿ ಮಹಿಳಾ ಭಜನಾ ಸಂಘ ಹಾಗೂ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಕಲಿಸುವ ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಜ. 3ರಂದು ಸಂಜೆ 6ರ ಅನಂತರ ದೇವತಾ ಪ್ರಾರ್ಥನೆ, ದುರ್ಗಾ ನಮಸ್ಕಾರ ಪೂಜೆ ನಡೆಯಲಿದೆ. ಜ. 4ರಂದು ಬೆಳಗ್ಗೆ 7.30ರಿಂದ ಗಣಹೋಮ, ಸಾಮೂಹಿಕ ಆಶ್ಲೇಷಾ ಬಲಿ, ದೈವಗಳಿಗೆ ಕಲಶ ತಂಬಿಲ, ಸಾಮೂಹಿಕ ಸತ್ಯನಾರಾಯಣ ಪೂಜೆ, ಮಹಾ ಪೂಜೆ ಅನಂತರ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 5ರಿಂದ ದೈವಗಳ ಭಂಡಾರ ತೆಗೆದು ನೇಮೋತ್ಸವ ನಡೆಯಲಿದೆ. ಜ. 5ರಂದು ಮುಂಜಾನೆ ಗುಳಿಗ ದೈವದ ನೇಮೋತ್ಸವ ಜರಗಲಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಸಮಿತಿಯ ನಿಕಟಪೂರ್ವ ಅಧ್ಯಕ್ಷ ತಾರಾನಾಥ ರೈ, ಕೋಶಾಧಿಕಾರಿ ಜಯಶಂಕರ ರೈ, ಸದಸ್ಯರಾದ ಕರುಣಾಕರ ಆಲೆಟ್ಟಿ, ಪಿ.ಎಸ್.ರಾಜಗೋಪಾಲ ಶಗ್ರಿತ್ತಾಯ, ಉಮಾಶಂಕರ್ ನಾÊಕ್ ಪಾಂಗಳಾಯಿ ಉಪಸ್ಥಿತರಿದ್ದರು.

ಎರಡನೇ ದಂಡನಾಯಕ

ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಪುರಾಣ ಇತಿಹಾಸದಲ್ಲೂ ಮುಂಡ್ಯತ್ತಾಯ ದೈವಕ್ಕೆ ವಿಶೇಷ ಸ್ಥಾನಮಾನವಿದೆ. ಶ್ರೀ ಮಹಾಲಿಂಗೇಶ್ವರ ದೇವರ ಎರಡನೇ ದಂಡನಾಯಕ ಎಂಬ ಉಲ್ಲೇಖವೂ ಸಿಗುತ್ತದೆ. ಅರಸು ಮುಂಡ್ಯತ್ತಾಯ ದೈವವು ಮೂರು ದಿಕ್ಕಿನಿಂದ ಮಾನವ ರೂಪದಲ್ಲಿ ಪಾಂಗಳಾಯಿ ಮಣ್ಣಿನಲ್ಲಿ ನೆಲೆಯಾಯಿತು ಎಂದು ನುಡಿಗಟ್ಟಿನಲ್ಲಿ ತಿಳಿಸಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಸುಬ್ರಹ್ಮಣ್ಯಕ್ಕೆ ದಿನದ 3 ಹೊತ್ತು ರೈಲು ಸೇವೆ| ಮಂಗಳೂರು – ಪುತ್ತೂರು ರೈಲು ಓಡಾಟ ವಿಸ್ತರಣೆ: ಬದಲಾದ ಸಮಯ ಹೀಗಿದೆ

ಮಂಗಳೂರು-ಕಬಕ ಪ್ಯಾಸೆಂಜ‌ರ್ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ