Gl harusha
ಸ್ಥಳೀಯ

‘ರಜತ ಮೆಟ್ಟಿಲು’ ಹತ್ತಿದ ಸಂಭ್ರಮದ ದೀಪಾವಳಿ | ಎಸ್.ಆರ್.ಕೆ ಲ್ಯಾಡರ್ಸ್, ಪುತ್ತೂರು ರೋಟರಿ ಕ್ಲಬ್ ಆಶ್ರಯದಲ್ಲಿ ದೀಪಾವಳಿ ಸಂಭ್ರಮ, ಸ್ಮರಣ ಸಂಚಿಕೆ ಬಿಡುಗಡೆ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು, ಎಸ್.ಆರ್.ಕೆ. ಲ್ಯಾಡರ್ಸ್ ಆಶ್ರಯದಲ್ಲಿ ದೀಪಾವಳಿ ಆಚರಣೆ ಹಾಗೂ ಎಸ್.ಆರ್.ಕೆ. ಲ್ಯಾಡರ್ಸ್ ರಜತ ಸಂಭ್ರಮದ ರಜತ ಮೆಟ್ಟಿಲು ಸ್ಮರಣ ಸಂಚಿಕೆ ಅನಾವರಣ ಸಮಾರಂಭ ನ. 8ರಂದು ಕೊಯಿಲ ಕಲಾಯಿಗುತ್ತುವಿನಲ್ಲಿ ನಡೆಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು, ಎಸ್.ಆರ್.ಕೆ. ಲ್ಯಾಡರ್ಸ್ ಆಶ್ರಯದಲ್ಲಿ ದೀಪಾವಳಿ ಆಚರಣೆ ಹಾಗೂ ಎಸ್.ಆರ್.ಕೆ. ಲ್ಯಾಡರ್ಸ್ ರಜತ ಸಂಭ್ರಮದ ರಜತ ಮೆಟ್ಟಿಲು ಸ್ಮರಣ ಸಂಚಿಕೆ ಅನಾವರಣ ಸಮಾರಂಭ ನ. 8ರಂದು ಕೊಯಿಲ ಕಲಾಯಿಗುತ್ತುವಿನಲ್ಲಿ ನಡೆಯಿತು.

srk ladders
Pashupathi
Muliya

ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಮಾತನಾಡಿ, ಆಧುನಿಕತೆ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಮುಂದಿರುವ ಕರಾವಳಿ ಜಿಲ್ಲೆ, ಸಾಂಸ್ಕೃತಿಕವಾಗಿಯೂ ಸಂಪದ್ಭರಿತವಾಗಿದೆ. ಆಧುನಿಕತೆಯ ನಡುವಿನಲ್ಲಿ ಸಂಸ್ಕೃತಿ, ಸಂಸ್ಕಾರಗಳು ಒಂದೊಂದಾಗಿ ಮರೆಯಾಗುತ್ತಿರುವ ನಡುವೆ, ದೀಪಾವಳಿ ಮೊದಲಾದ ಹಬ್ಬಗಳನ್ನು ಆಚರಿಸುತ್ತಿರುವುದು ಸಂತೋಷದ ವಿಚಾರ. ಇದರ ಮೂಲಕ ಮೂಲಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಹಕಾರಿ ಆಗುತ್ತದೆ ಎಂದರು.

ಬ್ರಿಟಿಷರು ಭಾರತವನ್ನು ಕೊಳ್ಳೆ ಹೊಡೆದಿದ್ದರು. ಸ್ವಾತಂತ್ರ್ಯ ಸಿಕ್ಕಿ ಭಾರತ 76 ವರ್ಷಗಳನ್ನು ಯಶಸ್ವಿಯಾಗಿ ಕ್ರಮಿಸಿರುವುದು ಮಾತ್ರವಲ್ಲ, ವಿಶ್ವದ ಆರ್ಥಿಕತೆಯಲ್ಲಿ ಇಂದು ಐದನೇ ಸ್ಥಾನಕ್ಕೆ ತಲುಪುವಂತಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಯ ಉತ್ತುಂಗಕ್ಕೆ ಏರಿದೆ. ವಿಶ್ವದ ದೊಡ್ಡಣ್ಣ ಅಮೆರಿಕ ತನ್ನ 350 ವರ್ಷಗಳ ಇತಿಹಾಸವನ್ನು ಕ್ರಮಿಸಿದೆ. ಭಾರತವನ್ನು ಇದಕ್ಕೆ ಹೋಲಿಸಿದರೆ, ಭಾರತದ ಸಾಧನೆ ಬಹಳ ಉನ್ನತ ಮಟ್ಟದಲ್ಲಿ ನಿಲ್ಲುತ್ತದೆ. ಈ ಸಾಧನೆಗೆ ಭಾರತದ ಪ್ರತಿಯೊಬ್ಬರೂ ಕಾರಣಕರ್ತರು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೋಟರಿ ಕ್ಲಬ್ ಯುವ ಪುತ್ತೂರು ಇದರ ಕಾರ್ಯದರ್ಶಿ ವಚನಾ ಜಯರಾಂ, ಶುಭಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನ ಬಲರಾಮ್ ಆಚಾರ್ಯ ಮಾತನಾಡಿ, ಲಾಭ ದೃಷ್ಟಿಯಿಂದ ಮಾತ್ರವೇ ಉದ್ಯಮ ನಡೆಸಬಾರದು. ಉದ್ಯಮದ ಜೊತೆಗೆ ಸಮಾಜಮುಖಿ ಚಿಂತನೆ ಹೊಂದಿದ್ದಾಗ ಮಾತ್ರ ಎಸ್.ಆರ್.ಕೆ.ಯ ಕೇಶವ ಅಮೈ ಅವರಂತೆ ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಡಾ. ಶ್ರೀಪತಿ ರಾವ್ ಅಧ್ಯಕ್ಷತೆ ವಹಿಸಿದ್ದರು.

ಗುತ್ತಿಗಾರು ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ನಿತ್ಯಾನಂದ ಮುಂಡೋಡಿ, ರೋಟರಿ ಕ್ಲಬ್ ಕಾರ್ಯದರ್ಶಿ ದಾಮೋದರ್ ಕೆ.ಎ., ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅವರ ಪತ್ನಿ ಶಿಖಾ ಶರ್ಮಾ ಅತಿಥಿಯಾಗಿದ್ದರು.

ಮೌನೇಶ್ ವಿಶ್ವಕರ್ಮ ಸಂಪಾದಕತ್ವದಲ್ಲಿ ಹೊರತರಲಾದ ರಜತ ಮೆಟ್ಟಿಲು ಸ್ಮರಣ ಸಂಚಿಕೆಯನ್ನು ಅನಾವರಣಗೊಳಿಸಲಾಯಿತು.

ಎಸ್.ಆರ್.ಕೆ. ಲ್ಯಾಡರ್ಸ್ ಮಾಲಕ ಕೇಶವ್ ಅಮೈ ಕಲಾಯಿಗುತ್ತು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪುತ್ತೂರು ರೋಟರಿ ಕ್ಲಬ್ಬಿನ ಕ್ಲಬ್ ಸರ್ವಿಸ್ ಡೈರೆಕ್ಟರ್ ಪರಮೇಶ್ವರ್ ವಂದಿಸಿದರು. ಚೇತನ್ ಆನೆಗುಂಡಿ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭ ದೀಪಾವಳಿ ಪ್ರಯುಕ್ತ ಸಿಂಗಾರಿ ಚೆಂಡೆ ಮೇಳ, ಸುಮಾ ಕೋಟೆ, ರಾಶಿ ಬರೆಪ್ಪಾಡಿ ಬಳಗದಿಂದ ಸಂಗೀತ ರಸಸಂಜೆ ನಡೆದು, ಪಟಾಕಿ ಸಂಭ್ರಮ ಜರಗಿತು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಸುಬ್ರಹ್ಮಣ್ಯಕ್ಕೆ ದಿನದ 3 ಹೊತ್ತು ರೈಲು ಸೇವೆ| ಮಂಗಳೂರು – ಪುತ್ತೂರು ರೈಲು ಓಡಾಟ ವಿಸ್ತರಣೆ: ಬದಲಾದ ಸಮಯ ಹೀಗಿದೆ

ಮಂಗಳೂರು-ಕಬಕ ಪ್ಯಾಸೆಂಜ‌ರ್ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ