ದೇಶರಾಜ್ಯ ವಾರ್ತೆಸ್ಥಳೀಯ

ರೈಲ್ವೆ ಟಿಕೆಟ್  ರಿಸರ್ವೇಷನಲ್ಲಿ ಬದಲಾವಣೆ:ಬದಲಾಗಲಿದೆ ಕ್ರೆಡಿಟ್ ಕಾರ್ಡ್ ನಿಯಮ!!

ಮುಂಗಡ ರೈಲು ಟಿಕೆಟ್ ಕಾಯ್ದಿರಿಸಲು ಅಸ್ತಿತ್ವದಲ್ಲಿರುವ ಸಮಯ ಮಿತಿಯನ್ನು ಕಡಿಮೆ ಮಾಡುವುದಾಗಿ ಭಾರತೀಯ ರೈಲ್ವೇ ಈಗಾಗಲೇ ಘೋಷಣೆ ಮಾಡಿದ್ದು, ನವೆಂಬರ್ 1ರಿಂದ ಜಾರಿಯಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ: ಮುಂಗಡ ರೈಲು ಟಿಕೆಟ್ ಕಾಯ್ದಿರಿಸಲು

ಅಸ್ತಿತ್ವದಲ್ಲಿರುವ ಸಮಯ ಮಿತಿಯನ್ನು ಕಡಿಮೆ ಮಾಡುವುದಾಗಿ ಭಾರತೀಯ ರೈಲ್ವೇ ಈಗಾಗಲೇ ಘೋಷಣೆ ಮಾಡಿದ್ದು, ನವೆಂಬರ್ 1ರಿಂದ ಜಾರಿಯಾಗಿದೆ.

SRK Ladders

ಈ ಹಿಂದೆ 120 ದಿನಗಳ ಮುಂಚಿತವಾಗಿ ಟಿಕೆಟ್‌ ಬುಕ್ಕಿಂಗ್ ಮಾಡಬಹುದಿತ್ತು. ಆದರೆ ಇನ್ನು ಪ್ರಯಾಣಿಕರು ಕೇವಲ 60 ದಿನಗಳ ಮುಂಚಿತವಾಗಿ ಮಾತ್ರ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯ.

ಮುಂಗಡ ಕಾಯ್ದಿರಿಸುವಿಕೆಯ ಅವಧಿಯು ರೈಲು ಹೊರಡುವ ದಿನವನ್ನು ಹೊರತುಪಡಿಸಿದೆ. ಹೊಸ ನಿಯಮವು ನವೆಂಬರ್ 1ರಿಂದ ಜಾರಿಯಾಗಿದೆ.

ಹಣ ವರ್ಗಾವಣೆ ಭದ್ರತೆ ಹೆಚ್ಚಳ:

ದೇಶೀಯ ಹಣ ವರ್ಗಾವಣೆ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊಸ ನಿಯಮವನ್ನು ಘೋಷಿಸಿದೆ. ಈ ನಿಯಮದ ಮೂಲಕ ಹಣಕಾಸು ಕಾನೂನು ಪಾಲನೆ ಮತ್ತು ದೇಶೀಯ ಹಣ ವರ್ಗಾವಣೆಯ ಭದ್ರತೆಯನ್ನು ನವೆಂಬರ್ 1ರಿಂದ ಹೆಚ್ಚಿಸಲಾಗಿದೆ.

ಆರ್‌ಬಿಐ ಪ್ರಕಾರ ಜುಲೈ 24ರ ಸುತ್ತೋಲೆಯಲ್ಲಿ ಬ್ಯಾಂಕಿಂಗ್‌ ಔಟ್‌ಲೆಟ್‌ಗಳ ಲಭ್ಯತೆ, ಹಣ ವರ್ಗಾವಣೆಗಾಗಿ ಪಾವತಿ ವ್ಯವಸ್ಥೆ ಮತ್ತು ಕೆವೈಸಿ ಅವಶ್ಯಕತೆಗಳನ್ನು ಸುಲಭವಾಗಿ ಪೂರೈಸುವ ಸೇವೆಗಳಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ. ಈಗ ಬಳಕೆದಾರರಿಗೆ ಹಣ ವರ್ಗಾವಣೆಯನ್ನು ಸುಲಭ ಮತ್ತು ಸುರಕ್ಷಿತಗೊಳಿಸಲು ಬಹು ಡಿಜಿಟಲ್ ಆಯ್ಕೆಗಳನ್ನು ನೀಡಲಾಗಿದೆ.

ಎಸ್‌ಬಿಐ ಕ್ರೆಡಿಟ್ ಕಾರ್ಡ್ ಸೇವೆ ದುಬಾರಿ:

ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಯುಟಿಲಿಟಿ ಬಿಲ್‌ ಪಾವತಿ ಮತ್ತು ಹಣಕಾಸು ಶುಲ್ಕಗಳ ಮೇಲೆ ಪರಿಣಾಮ ಬೀರುವ ಪ್ರಮುಖ ಬದಲಾವಣೆಯೊಂದು ನವೆಂಬ‌ರ್ 1ರಿಂದ ಜಾರಿಗೆ ಬಂದಿದೆ. ಅಸುರಕ್ಷಿತ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಹಣಕಾಸು ಶುಲ್ಕಗಳು ತಿಂಗಳಿಗೆ ಶೇ. 3.75ಕ್ಕೆ ಹೆಚ್ಚಳವಾಗಲಿದೆ. ಬಿಲ್ಲಿಂಗ್ ಅವಧಿಯಲ್ಲಿ ಮಾಡಿದ ಯುಟಿಲಿಟಿ ಪಾವತಿಗಳ ಒಟ್ಟು ಮೊತ್ತವು 50,000 ರೂ. ಮೀರಿದರೆ ಶೇ. 1ರಷ್ಟು ಶುಲ್ಕ ಹೆಚ್ಚಳವಾಗಲಿದೆ. ಇದು ಡಿಸೆಂಬರ್ 1ರಿಂದ ಅನ್ವಯವಾಗಲಿದೆ.

ಐಸಿಐಸಿಐ ಕ್ರೆಡಿಟ್ ಕಾರ್ಡ್ ರಿವಾರ್ಡ್

ಐಸಿಐಸಿಐ ಬ್ಯಾಂಕ್ ತನ್ನ ಶುಲ್ಕ ರಚನೆ ಮತ್ತು ಕ್ರೆಡಿಟ್ ಕಾರ್ಡ್ ರಿವಾರ್ಡ್ ಪ್ರೋಗ್ರಾಂನಲ್ಲಿ ಬದಲಾವಣೆಗಳನ್ನು ಮಾಡಿದೆ. ಈ ಬದಲಾವಣೆಗಳು ವಿಮೆ, ದಿನಸಿ ಖರೀದಿ ಸೇರಿದಂತೆ ಹಲವು ಸೇವೆಗಳ ಮೇಲೆ ಪರಿಣಾಮ ಬೀರುತ್ತವೆ. ಇದು ನವೆಂಬರ್ 15ರಿಂದ ಅನ್ವಯವಾಗಲಿದೆ.

ಇಂಡಿಯನ್ ಬ್ಯಾಂಕ್ ವಿಶೇಷ ಎಫ್‌ಡಿ ಗಡುವು:

ಇಂಡಿಯನ್ ಬ್ಯಾಂಕ್ ವಿಶೇಷ ಎಫ್‌ಡಿಯಲ್ಲಿ ಹೂಡಿಕೆ ಮಾಡಲು ನವೆಂಬರ್ 30 ಕೊನೆಯ ದಿನವಾಗಿದೆ. ಇಂಡಿಯನ್ ಬ್ಯಾಂಕ್ ಈಗ ಇಂಡ್ ಸೂಪರ್ 300 ದಿನಗಳ ಎಫ್‌ಡಿಯಲ್ಲಿ ಸಾಮಾನ್ಯ ಜನರಿಗೆ ಶೇ. 7.05, ಹಿರಿಯರಿಗೆ ಶೇ. 7.55 ಮತ್ತು ಸೂಪರ್ ಸೀನಿಯರ್ ಸಿಟಿಜನ್‌ಗಳಿಗೆ ಶೇ. 7.80 ಬಡ್ಡಿ ದರಗಳನ್ನು ನೀಡುತ್ತದೆ. 400 ದಿನಗಳವರೆಗೆ ಇಂಡಿಯನ್ ಬ್ಯಾಂಕ್ ಈಗ ಸಾಮಾನ್ಯ ಜನರಿಗೆ ಶೇ. 7.25, ಹಿರಿಯರಿಗೆ ಶೇ. 7.75 ಮತ್ತು ಸೂಪರ್ ಸೀನಿಯರ್ ನಾಗರಿಕರಿಗೆ ಶೇ. 8 ಬಡ್ಡಿ ದರಗಳನ್ನು ನೀಡುತ್ತದೆ.

ಟಿಆರ್‌ಎಐ ಹೊಸ ನಿಯಮ

ನವೆಂಬ‌ರ್ 1ರಿಂದ ಟೆಲಿಕಾಂ ಕಂಪನಿಗಳು ಸ್ಪ್ಯಾಮ್ ಮತ್ತು ವಂಚನೆಯನ್ನು ಎದುರಿಸಲು ಹೊಸ ನಿಯಮಗಳ ಭಾಗವಾಗಿ ಸಂದೇಶ ಪತ್ತೆ ಹಚ್ಚುವಿಕೆಯನ್ನು ಜಾರಿಗೆ ತಂದಿದೆ. ಇದು ಸಂದೇಶಗಳ ಮೂಲವನ್ನು ಮೇಲ್ವಿಚಾರಣೆ ಮಾಡಲಿದೆ. ನಿರ್ದಿಷ್ಟ ಮಾನದಂಡಗಳನ್ನು ಪೂರೈಸಲು ವಿಫಲವಾದವುಗಳಿಗೆ ನಿರ್ಬಂಧ ವಿಧಿಸಲಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ವಿವಿ ಪ್ರಾಧ್ಯಾಪಕಿಯಾದ ಮಂಗಳಮುಖಿ; ಉನ್ನತ ಶಿಕ್ಷಣದ ಪ್ರಾಧ್ಯಾಪಕಿಯಾದದ್ದು ಇದೇ ಮೊದಲು!!

ತೃತೀಯ ಲಿಂಗಿಯೊಬ್ಬರು ವಿಶ್ವವಿದ್ಯಾಲಯವೊಂದರ ಅರೆಕಾಲಿಕ ಪ್ರಾಧ್ಯಾಪಕಿಯಾಗಿ ನೇಮಕಗೊಳ್ಳುವ ಮೂಲಕ…

1 of 4