ರಾಜ್ಯ ವಾರ್ತೆಸ್ಥಳೀಯ

ಮಹಿಳೆಯರ ಉಚಿತ ಬಸ್‌ ಪ್ರಯಾಣ (ಶಕ್ತಿ ಯೋಜನೆ) ಬಂದ್!! ಮಹತ್ವದ ಮಾಹಿತಿ ಕೊಟ್ಟ ಸಚಿವ ಪರಮೇಶ್ವರ್‌!!

ಶಕ್ತಿ ಯೋಜನೆ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಗುರುವಾರ) ಹಾಸನಾಂಬೆ ದೇವಿ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ

ಈ ಸುದ್ದಿಯನ್ನು ಶೇರ್ ಮಾಡಿ

ಶಕ್ತಿ ಯೋಜನೆ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಗುರುವಾರ) ಹಾಸನಾಂಬೆ ದೇವಿ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್, ಪ್ರಣಾಳಿಕೆ ಬರೆದವನೇ ನಾನು. ಪ್ರಣಾಳಿಕೆಯಲ್ಲಿ ಐದು ಗ್ಯಾರೆಂಟಿಗಳನ್ನ ಐದು ವರ್ಷವೂ ಕೂಡ ಅನುಷ್ಠಾನ ಮಾಡ್ತೀವಿ ಅಂಥ ಹೇಳಿದ್ದೇವೆ. ಅನೇಕ ಸಂದರ್ಭದಲ್ಲಿ ವಿರೋಧ ಪಕ್ಷದವರು ಗ್ಯಾರೆಂಟಿ ನಿಲ್ಲಿಸುತ್ತಾರೆ ಅಂತ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು, ನಾವು ಸ್ಪಷ್ಟನೆ ನೀಡಿದ್ದೇವೆ. ಯಾವುದೇ ಕಾರಣಕ್ಕೂ ನಾವು ನಿಲ್ಲಿಸುವುದಿಲ್ಲ. ಯಾವುದೇ ಗ್ಯಾರೆಂಟಿಗಳನ್ನು ನಿಲ್ಲಿಸುವುದಿಲ್ಲ ಎಂಬ ಮಾತನ್ನು ಹೇಳಿದ್ದೇವೆ ಎಂದು ತಿಳಿಸಿದರು.

akshaya college

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿರುವುದು ನನಗೆ, ಇವರು ಪ್ರಸ್ತುತ ಪಡಿಸಿದ್ದಾರೆ. ಕೆಲವು ಯೋಜನೆಗಳಿಂದ ಏಕೆ ಇಷ್ಟು ವೇಸ್ಟ್‌ ಮಾಡ್ತಿರಿ, ನಿಲ್ಲಿಸಿಬಿಡಿ ಅಂತ ಎನ್ನುವ ಮಾತನ್ನು ಹೇಳಿದ್ದಾರೆ. ಆದರೆ ಸರ್ಕಾರದಲ್ಲಿ ಯಾವುದೇ ಚರ್ಚೆ ಮಾಡಿಲ್ಲ. ಯಾವುದೇ ತೀರ್ಮಾನ ತಗೊಂಡಿಲ್ಲ, ತಗೊಳಲ್ಲ. ಅದರ ಬಗ್ಗೆ ಚರ್ಚೆನೇ ಆಗಿಲ್ಲ. ಮಾರ್ಪಾಡಾಗಲಿ, ಮರುವೀಕ್ಷಣೆ, ಪರಿಷ್ಕರಣೆ ಆಗಲಿ ಯಾವುದೇ ಶಬ್ದ ಉಪಯೋಗಿಸಿದರು ಕೂಡ ಚರ್ಚೆ ಆಗಿಲ್ಲ. ಇಲ್ಲ ಆ ರೀತಿ ಯಾರು ಹೇಳಿಕೆ ಕೊಟ್ಟಿಲ್ಲ. ಅವರು ನಿಲ್ಲಿಸುತ್ತೀವಿ ಅಂತ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಾನು ಬಹಳ ಸೂಕ್ಷ್ಮವಾಗಿ ಉಪಮುಖ್ಯಮಂತ್ರಿಗಳ ಹೇಳಿಕೆ ಗಮನಿಸಿದ್ದೇನೆ. ಅವರು ನಿಲ್ಲಿಸುತ್ತೇವೆ, ಮಾರ್ಪಾಟು ಮಾಡುತ್ತೇವೆ ಅಂಥ ಹೇಳಿಲ್ಲ. ಇದು ಸರ್ಕಾರದ ನಿರ್ಧಾರ, ವೈಯಕ್ತಿಕ ನಿರ್ಧಾರ ಅಲ್ಲ. ನನ್ನ ಯಾವುದೋ ಒಂದು ಒಪೀನಿಯನ್ ಇರಬಹುದು. ಆದರೆ ಸರ್ಕಾರ ತೀರ್ಮಾನ ತಗೊಳುತ್ತೆ. ಈ ವಿಚಾರದಲ್ಲಿ ಸರ್ಕಾರದಲ್ಲಿ ಚರ್ಚೆ, ತೀರ್ಮಾನಗಳು ಇಲ್ಲ. ಟಿವಿ, ಪೇಪರ್‌ನಲ್ಲಿ ನಿಂದೆ ಸ್ಟೇಟ್‌ಮೆಂಟ್ ಬಂದಿದೆ ಅಂಥ ಎಐಸಿಸಿ ಅಧ್ಯಕ್ಷರೇ ಹೇಳಿದ್ದಕ್ಕೆ ಡಿಸಿಎಂ ಇಲ್ಲ ಹೇಳಿದ್ದಾರೆ. ಈಗ ನಾನು ಹೇಳ್ತಾ ಇದ್ದೀನಿ ಅದು ಎಂತದು ಇಲ್ಲ ಎಂದು ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಕಡಬ ಪಟ್ಟಣ ಪಂಚಾಯತ್ ಚುನಾವಣೆ: ಬಿಜೆಪಿಗರಿಂದಲೇ ಬಿಜೆಪಿ ಮುಕ್ತ | ಪತ್ರಿಕಾಗೋಷ್ಠಿಯಲ್ಲಿ ನೂರುದ್ದೀನ್ ಸಾಲ್ಮರ

ಪುತ್ತೂರು: ಹೊಸದಾಗಿ ಮೇಲ್ದರ್ಜೆಗೇರಿದ ಕಡಬ ತಾಲೂಕಿನ ಪಟ್ಟಣ ಪಂಚಾಯತ್ ಚುನಾವಣೆಯ ಗೆಲುವಿನಿಂದ ಆ…

1 of 132