Gl harusha
ಕರಾವಳಿರಾಜ್ಯ ವಾರ್ತೆಸ್ಥಳೀಯ

ನೆಲಮಂಗಲದಲ್ಲಿ ಕೆಟ್ಟು ನಿಂತ‌ ಬೆಂಗಳೂರು- ಮಂಗಳೂರು‌ ಸರಕಾರಿ‌ ಬಸ್.. ಶಾಸಕ ಅಶೋಕ್ ರೈ ಮೂಲಕ ಬದಲಿ ವ್ಯವಸ್ಥೆ!!

ಬೆಂಗಳೂರಿಂದ‌ಮಂಗಳೂರಿಗೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನೆಲಮಂಗಳದಲ್ಲಿ ಕೆಟ್ಟು ನಿಂತಿದ್ದು ಅತಂತ್ರ ಸ್ಥಿತಿಯಲ್ಲಿದ್ದ ಪ್ರಯಾಣಿಕರಿಗೆ ಪುತ್ತೂರು ಶಾಸಕ ಅಶೋಕ್ ರೈ ಅವರು ಬದಲಿ ಬಸ್ ವ್ಯವಸ್ಥೆ ಮಾಡುವ ಮೂಲಕ ಸಾರ್ವತ್ರಿಕ ಶ್ಲಾಘನೆಗೆ ಕಾರಣರಾಗಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಬೆಂಗಳೂರಿಂದ‌ಮಂಗಳೂರಿಗೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನೆಲಮಂಗಳದಲ್ಲಿ ಕೆಟ್ಟು ನಿಂತಿದ್ದು ಅತಂತ್ರ ಸ್ಥಿತಿಯಲ್ಲಿದ್ದ ಪ್ರಯಾಣಿಕರಿಗೆ ಪುತ್ತೂರು ಶಾಸಕ ಅಶೋಕ್ ರೈ ಅವರು ಬದಲಿ ಬಸ್ ವ್ಯವಸ್ಥೆ ಮಾಡುವ ಮೂಲಕ ಸಾರ್ವತ್ರಿಕ ಶ್ಲಾಘನೆಗೆ ಕಾರಣರಾಗಿದ್ದಾರೆ.

srk ladders
Pashupathi
Muliya

ಈ ಬಸ್ಸಿನಲ್ಲಿ‌30 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು.‌ಬಸ್ಸಿನಲ್ಲಿ‌ಮಹಿಳೆಯರೇ‌ಹೆಚ್ಚಿನ ಸಂಖ್ಯೆಯಲ್ಲಿದ್ದರು. ಬಸ್ ಅರ್ಧ ದಾರಿಯಲ್ಲಿ ಕೆಟ್ಟು ನಿಂತಾಗ ಪ್ರಯಾಣಿಕರಿಗೆ ದಿಕ್ಕೇ ತೋಚದಂತಾಗಿತ್ತು. ಬಸ್ಸಿನಲ್ಲಿದ್ದ‌ಮಿತ್ತೂರು ನಿವಾಸಿ ಶಬೀರ್ ಎಂಬವರು ಶಾಸಕ ಅಶೋಕ್ ರೈ ಅವರಿಗೆ ಕರೆ ಮಾಡಿ ಬಸ್ಸು ಕೆಟ್ಟು ಹೋಗಿ ಅರ್ಧ ದಾರಿಯಲ್ಲೇ ಬಾಕಿಯಾದ ವಿಚಾರವನ್ನು ತಿಳಿಸಿದರು. ತಕ್ಷಣ ಕಾರ್ಯಪೃವೃತ್ತರಾದ ಶಾಸಕ ಅಶೋಕ್ ಕುಮಾರ್ ರೈ ಅವರು ಬೆಂಗಳೂರು‌ಡಿಪೋಗೆ ಕರೆ ಮಾಡಿ ಬಸ್ಸು ಕೆಟ್ಟು ಹೋದ ವಿಚಾರವನ್ನು ಅಧಿಕಾರಿಗಳ‌ಗಮನಕ್ಕೆ ತಂದು ತಕ್ಷಣ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ. ಶಾಸಕರು ಕರೆ ಮಾಡಿದ ತಕ್ಷಣವೇ ಬೇರೊಂದು ಬಸ್ಸನ್ನು ಅಧಿಕಾರಿಗಳು ಕಳುಹಿಸಿದ್ದು ಅದರಲ್ಲಿ ಪ್ರಯಾಣ ಬೆಳೆಸಿದ್ದಾರೆ.

ಬಸ್ಸು ಕೆಟ್ಟು ಹೋಗಿ ದಿಕ್ಕೇ ತೋಚದಂತಾಗಿದ್ದ ನಮ್ಮ ಸಹಾಯಕ್ಕೆ ಯಾರೂ ಬರಲಿಲ್ಲ.‌ತಕ್ಷಣ ನಾವು ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದೆವು. ಬಸ್ಸಲ್ಲಿ ಪುತ್ತೂರು ಹಾಗೂ ಮಂಗಳೂರಿನ ಪ್ರಯಾಣಿಕರಿದ್ದರು. ಅಶೋಕ್ ರೈ ಅವರ ನೆರವಿನಿಂದ ನಮಗೆ ಬದಲಿ ವ್ಯವಸ್ಥೆ ಮಾಡಿದ್ದಾರೆ. ಶಾಸಕರಿಗೆ ಧನ್ಯವಾದಗಳು


ಈ ಸುದ್ದಿಯನ್ನು ಶೇರ್ ಮಾಡಿ

Related Posts