Gl harusha
ಕರಾವಳಿಸ್ಥಳೀಯ

ಪಿಕಪ್ ವಾಹನದಲ್ಲಿ ಮಾದಕ ವಸ್ತು ಮಾರಾಟ ಮೂವರ ಸೆರೆ!!

ಪಿಕಪ್ ವ್ಯಾನ್ ನಲ್ಲಿ ಮಾದಕವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಕ್ರಿಮಿನಲ್ ಗ್ಯಾಂಗ್ ಗೆ ಸೇರಿದ ಮೂವರನ್ನು ವಾಹನ ಸಹಿತ ಬಂಧಿಸಲಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪಿಕಪ್ ವ್ಯಾನ್ ನಲ್ಲಿ ಮಾದಕವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಕ್ರಿಮಿನಲ್ ಗ್ಯಾಂಗ್ ಗೆ ಸೇರಿದ ಮೂವರನ್ನು ವಾಹನ ಸಹಿತ ಬಂಧಿಸಲಾಗಿದೆ.

srk ladders
Pashupathi
Muliya

ಜಿಲ್ಲಾ ಪೋಲೀಸ್‌ ವರಿಷ್ಠಾಧಿಕಾರಿ ಡಿ. ಶಿಲ್ಪ ಅವರ ನಿರ್ದೇಶನದಂತೆ ಮಾದಕವಸ್ತು ದಂಧೆ ವಿರುದ್ಧ ನಡೆಯುವ ಕಾರ್ಯಾಚರಣೆಯಂಗವಾಗಿ ಕಾಸರಗೋಡು ಬಳಿಯ ಕುಂಬಳೆ ಪೋಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ಕುಂಬಳೆ ಠಾಣಾ ಪೋಲೀಸರು ಗಸ್ತು ತಿರುಗಾಟ ನಡೆಸುವಾಗ ಆದಿತ್ಯವಾರ ಸಂಜೆ ಮಾಟಂಗುಯಿ ಎಂಬಲ್ಲಿ ಶಂಕಿತ ಪಿಕಪ್ ವ್ಯಾನ್ ಕಂಡುಬಂದಿದ್ದು, ಇದರಲ್ಲಿದ್ದವರನ್ನು ವಿಚಾರಿಸಿದಾಗ ಎಂಡಿಎಂಎ ಮಾರಾಟ ಸುಳಿವು ದೊರೆಯಿತು. ಇದರಂತೆ ಮಾಟಂಗುಯಿಯಲ್ಲಿ ವಾಸಿಸುವ ತಮಿಳುನಾಡು ಮೂಲದ ಮೋಹನನ್(35), ಶಾಂತಿಪಳ್ಳ ವಾಸಿಸುವ ತಮಿಳುನಾಡು ದಿಂಡಿಗಲ್‌ ಮೂಲದ ಸೆಲ್ವನ್ ಯಾನೆ ಸೆಲ್ವರಾಜ್ (24), ಕುಂಬಳೆ ಕೊಯ್ದಾಡಿ ಕಡಲತೀರದ ಸಾದಿಖ್(33) ಎಂಬಿವರನ್ನು 2.2ಗ್ರಾಂ ತೂಕದ ಎಂಡಿಎಂಎ ಸಹಿತ ಬಂಧಿಸಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಸುಬ್ರಹ್ಮಣ್ಯಕ್ಕೆ ದಿನದ 3 ಹೊತ್ತು ರೈಲು ಸೇವೆ| ಮಂಗಳೂರು – ಪುತ್ತೂರು ರೈಲು ಓಡಾಟ ವಿಸ್ತರಣೆ: ಬದಲಾದ ಸಮಯ ಹೀಗಿದೆ

ಮಂಗಳೂರು-ಕಬಕ ಪ್ಯಾಸೆಂಜ‌ರ್ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ