ಟ್ರೆಂಡಿಂಗ್ ನ್ಯೂಸ್ಸ್ಥಳೀಯ

ನಿದ್ದೆಗೆಡಿಸಿದ್ದ ಚಿಕನ್ ಫಾಕ್ಸ್!! ಔಷಧವೇ ಇಲ್ಲದ ಮಂಕಿ ಫಾಕ್ಸ್!! ಏನಿದು ಕಾಯಿಲೆ? ಇದರ ವ್ಯತ್ಯಾಸಗಳೇನು, ಲಕ್ಷಣಗಳೇನು? ತಡೆಯುವುದಾದರೂ ಹೇಗೆ?

ಇದೀಗ ಎಲ್ಲೆಡೆ ಮಂಕಿ ಫಾಕ್ಸ್ ನದ್ದೇ ಸುದ್ದಿ. ವಿಶ್ವ ಆರೋಗ್ಯ ಸಂಸ್ಥೆಯೂ ತಲೆಕೆಡಿಸಿಕೊಂಡಿದೆ. ಹೇಳಿಕೊಳ್ಳುವಂತಹ ಗಂಭೀರ ಕಾಯಿಲೆ ಅಲ್ಲದೇ ಇದ್ದರೂ, ಮಂಕಿ ಫಾಕ್ಸ್’ಗೆ ಸೂಕ್ತ ಚಿಕಿತ್ಸೆ ಇನ್ನೂ ಲಭ್ಯವಿಲ್ಲ. ಹಾಗಾಗಿ, ಇನ್ನಷ್ಟು ಕಳವಳಕ್ಕೆ ಕಾರಣ.

ಈ ಸುದ್ದಿಯನ್ನು ಶೇರ್ ಮಾಡಿ

ಇದೀಗ ಎಲ್ಲೆಡೆ ಮಂಕಿ ಫಾಕ್ಸ್ ನದ್ದೇ ಸುದ್ದಿ. ವಿಶ್ವ ಆರೋಗ್ಯ ಸಂಸ್ಥೆಯೂ ತಲೆಕೆಡಿಸಿಕೊಂಡಿದೆ. ಹೇಳಿಕೊಳ್ಳುವಂತಹ ಗಂಭೀರ ಕಾಯಿಲೆ ಅಲ್ಲದೇ ಇದ್ದರೂ, ಮಂಕಿ ಫಾಕ್ಸ್’ಗೆ ಸೂಕ್ತ ಚಿಕಿತ್ಸೆ ಇನ್ನೂ ಲಭ್ಯವಿಲ್ಲ. ಹಾಗಾಗಿ, ಇನ್ನಷ್ಟು ಕಳವಳಕ್ಕೆ ಕಾರಣ.

ಮಂಕಿ ಫಾಕ್ಸ್ ಹಾಗೂ ಚಿಕನ್ ಫಾಕ್ಸ್. ಇವೆರಡು ಹೆಸರು ಕೇಳಿದಾಕ್ಷಣ ಜನರಿಗೆ ಗೊಂದಲವೋ ಗೊಂದಲ. ಕಾರಣ, ಎರಡೂ ಕಾಯಿಲೆಗಳ ಲಕ್ಷಣಗಳು ಹೆಚ್ಚು ಕಡಿಮೆ ಒಂದೇ ರೀತಿಯಾಗಿವೆ. ತೀವ್ರತೆಯಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳಿವೆಯಷ್ಟೇ. ಹಾಗಾಗಿ ಈ ಹಿಂದೆಯೇ ತನ್ನ ಅಸ್ತಿತ್ವ ಸಾರಿದ್ದ ಚಿಕನ್ ಫಾಕ್ಸ್ ಹಾಗೂ ಜಗತ್ತಿನ ಮೂಲೆಮೂಲೆಯ ಜನರನ್ನು ಕಂಗೆಡಿಸಿರುವ ಮಂಕಿ ಫಾಕ್ಸ್ ಬಗೆಗಿನ ಒಂದಷ್ಟು ಮಾಹಿತಿ ಇಲ್ಲದೆ.

SRK Ladders

ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಸಂಸ್ಥೆ ಹೇಳುವ ಹಾಗೆ ಚಿಕನ್ ಪಾಕ್ಸ್ ಮತ್ತು ಮಂಕಿ ಪಾಕ್ಸ್ ನಡುವೆ ಇರುವಂತಹ ಪ್ರಮುಖ ವ್ಯತ್ಯಾಸ ಎಂದರೆ ದುಗ್ಧರಸ ಗ್ರಂಥಿಗಳ ಊತ. ಆರೋಗ್ಯ ತಜ್ಞರು ಹೇಳುವ ಹಾಗೆ ಮಂಕಿ ಪಾಕ್ಸ್ ಬಂದಿದ್ದರೆ ದುಗ್ಧರಸ ಗ್ರಂಥಿಗಳು ಊದಿಕೊಳ್ಳುತ್ತವೆ. ಆದರೆ ಚಿಕನ್ ಪಾಕ್ಸ್ ಇರುವವರಿಗೆ ಈ ರೀತಿ ಆಗುವುದಿಲ್ಲ.

ಚಿಕನ್ ಪಾಕ್ಸ್ ಮತ್ತು ಮಂಕಿ ಪಾಕ್ಸ್, ಎರಡು ಸಹ ವೈರಸ್ ಉಪಟಳ ದಿಂದಲೇ ಬರುವಂತಹ ಕಾಯಿಲೆಗಳಾಗಿವೆ. ಆದರೆ ವೈರಸ್ ಪ್ರಭೇದಗಳು ಬೇರೆಬೇರೆಯಾಗಿವೆ. ಚಿಕನ್ ಪಾಕ್ಸ್ Varicella Zoster ಎನ್ನುವ ವೈರಸ್ ನಿಂದ ಬಂದರೆ ಮಂಕಿ ಪಾಕ್ಸ್ Herpes ಎನ್ನುವ ವೈರಸ್ ನಿಂದ ಬರುತ್ತದೆ.

ಗಾಜಿಯಾಬಾದ್ ನ ಮಣಿಪಾಲ್ ಹಾಸ್ಪಿಟಲ್ ನಲ್ಲಿ ಆಂತರಿಕ ಔಷಧಿ ಕನ್ಸಲ್ಟೆಂಟ್ ಆಗಿರುವ ಡಾ. ಮಾಯಂಕ್ ಅರೋರಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಮೈಮೇಲೆ ಬೀಳುವ ದದ್ದುಗಳು:

ಚಿಕನ್ ಪಾಕ್ಸ್ ಅಥವಾ ಮಂಕಿ ಪಾಕ್ಸ್ ಇವುಗಳಲ್ಲಿ ಯಾವುದು ಬಂದರೂ ಮೈ ಮೇಲೆ ಅಲ್ಲಲ್ಲಿ ದದ್ದುಗಳು ಕಂಡುಬರುವುದು ಸಹಜ. ಆದರೆ ದದ್ದುಗಳ ಲಕ್ಷಣ ಬೇರೆ ಬೇರೆ ಆಗಿರುತ್ತವೆ ಮತ್ತು ದೇಹದ ಬೇರೆ ಬೇರೆ ಭಾಗಗಳಲ್ಲಿ ಕಂಡು ಬರುತ್ತವೆ.

ಒಂದು ವೇಳೆ ಮಂಕಿ ಪಾಕ್ಸ್ ಬಂದಿದ್ದರೆ ಸೋಂಕು ಉಂಟಾದ 1 ರಿಂದ 5 ದಿನಗಳ ಒಳಗೆ ದದ್ದುಗಳು ಕಾಣಿಸಿಕೊಳ್ಳುತ್ತವೆ ಮತ್ತು ಮೊದಲು ಮುಖದ ಮೇಲೆ ಕಂಡು ಬಂದು ಆನಂತರ ದೇಹದ ಇತರ ಭಾಗಗಳಿಗೆ ಹರಡುತ್ತವೆ.

ಆದರೆ ಚಿಕನ್ ಪಾಕ್ಸ್ ಬಂದಿದ್ದರೆ, ನಮ್ಮ ಎದೆ, ಬೆನ್ನು, ಮುಖ ಮತ್ತು ಇನ್ನಿತರ ದೇಹದ ಭಾಗಗಳಿಗೆ ಹರಡುತ್ತವೆ. ಆರೋಗ್ಯ ತಜ್ಞರು ಹೇಳುವ ಹಾಗೆ 250 ರಿಂದ 500 ಹೆಚ್ಚು ಕೆರೆತ ಉಂಟು ಮಾಡುವ ದದ್ದುಗಳು ಕಾಣಿಸುತ್ತವೆ.

ಹರಡುವುದು ಹೇಗೆ?

ಮಂಕಿ ಪಾಕ್ಸ್ ವೈರಸ್ ಸೋಂಕಿತ ಪ್ರಾಣಿ, ಮನುಷ್ಯರು ಮತ್ತು ವೈರಸ್ ಇರುವ ವಸ್ತುಗಳಿಂದ ಸುಲಭವಾಗಿ ಹರಡುತ್ತವೆ. ಚರ್ಮದಲ್ಲಿನ ಸೀಳು, ಉಸಿರಾಟ ವ್ಯವಸ್ಥೆ ಅಥವಾ ಸಿಂಬಳದ ಮೂಲಕ ವೈರಸ್ ದೇಹ ಪ್ರವೇಶಿಸುತ್ತದೆ.

ಅಂದರೆ ಪ್ರಾಣಿಯಿಂದ ಮನುಷ್ಯರಿಗೆ ಮತ್ತು ಮನುಷ್ಯರಿಂದ ಮನುಷ್ಯರಿಗೆ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಆದರೆ ಚಿಕನ್ ಪಾಕ್ಸ್ ವಿಚಾರದಲ್ಲಿ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಸುಲಭವಾಗಿ ಹರಡುತ್ತದೆ ಮತ್ತು ಆರೋಗ್ಯವಂತ ವ್ಯಕ್ತಿಗಳಿಗೆ ಹಾಗೂ ಲಸಿಕೆ ಪಡೆಯದ ವ್ಯಕ್ತಿಗಳಿಗೆ ಹರಡುತ್ತದೆ.

ತಡೆಯುವುದು ಹೇಗೆ?

ಮಂಕಿ ಪಾಕ್ಸ್ ಎಲ್ಲಾ ಕಡೆ ಹೆಚ್ಚಾಗುತ್ತಿರುವುದರಿಂದ ಇದನ್ನು ತಡೆಯಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ವೈದ್ಯರು ಹೇಳುವ ಪ್ರಕಾರ ಪ್ರಾಣಿಗಳಿಂದ ಅಥವಾ ಸೋಂಕಿತ ವಸ್ತುಗಳಿಂದ ಅಂತರವನ್ನು ಕಾಯ್ದು ಕೊಳ್ಳುವುದು ಅನಿವಾರ್ಯ. ಚಿಕನ್ ಪಾಕ್ಸ್ ತಡೆಗಟ್ಟಲು ಲಸಿಕೆ ತೆಗೆದುಕೊಳ್ಳಬೇಕು. ಪ್ರಸ್ತುತ ಇದುವರೆಗೂ ಮಂಕಿ ಪಾಕ್ಸ್ ಸೋಂಕಿಗೆ ಯಾವುದೇ ತರಹದ ಚಿಕಿತ್ಸಾ ವಿಧಾನ ಇಲ್ಲ.

ಸೋಂಕು ಪಸರಿಸುವ ಅವಧಿ:

ಮಂಕಿ ಪಾಕ್ಸ್ ಸೋಂಕು 5ರಿಂದ 21 ದಿನಗಳ ಇನ್ಕ್ಯುಬೇಷನ್ ಅವಧಿ ಹೊಂದಿರುತ್ತದೆ. ಆದರೆ ಚಿಕನ್ ಪಾಕ್ಸ್ ಕೇವಲ 4 ರಿಂದ 7 ದಿನಗಳಲ್ಲಿ ಪೂರ್ಣ ಪ್ರಮಾಣದ ಸೋಂಕು ಉಂಟು ಮಾಡುತ್ತದೆ.

ಮಂಕಿ ಫಾಕ್ಸ್ ಇತಿಹಾಸ:

ಮಂಕಿ ಪಾಕ್ಸ್ ಅನ್ನು ಮೊಟ್ಟಮೊದಲ ಬಾರಿಗೆ 1958 ರಲ್ಲಿ ಪತ್ತೆಹಚ್ಚಲಾಯಿತು. ಆ ಸಂದರ್ಭದಲ್ಲಿ ಕೋತಿಗಳು ಹೆಚ್ಚಾಗಿದ್ದ ಜಾಗದಲ್ಲಿ ಈ ರೀತಿಯ ಎರಡು ಬಗೆಯ ಕಾಯಿಲೆ ಗಳು ಕಂಡುಬಂದಿದ್ದವು. ಆಗ ಇದನ್ನು ಮಂಕಿ ಪಾಕ್ಸ್ ಎಂದು ಕರೆಯಲಾಗಿತ್ತು.

1970ರಲ್ಲಿ ಡೆಮೊಕ್ರೆಟಿಕ್ ರಿಪಬ್ಲಿಕ್ ಆಫ್ ದ ಕಾಂಗೋ ಪ್ರಾಂತ್ಯದಲ್ಲಿ ಮೊದಲ ಬಾರಿಗೆ ಒಬ್ಬ ವ್ಯಕ್ತಿಗೆ ಮಂಕಿ ಪಾಕ್ಸ್ ಸೋಂಕು ಉಂಟಾಗಿದ್ದ ಬಗ್ಗೆ ವರದಿಯಾಯಿತು. ಆನಂತರ ಪಶ್ಚಿಮ ಮತ್ತು ಮಧ್ಯ ಆಫ್ರಿಕಾ ಪ್ರಾಂತ್ಯಗಳಿಗೆ ಮಾತ್ರ ಸೀಮಿತವಾಗಿದ್ದ ಮಂಕಿ ಪಾಕ್ಸ್ ಇಂದು ಜಗತ್ತಿನಾದ್ಯಂತ ಅತ್ಯಂತ ವೇಗವಾಗಿ ಹರಡುತ್ತಿರುವುದು ಬಹಳ ಬೇಸರದ ಸಂಗತಿ ಆಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2